ETV Bharat / state

ಸಿಇಟಿ-2020ರ ತಾತ್ಕಾಲಿಕ ಸರಿ ಉತ್ತರಗಳ ಬಿಡುಗಡೆ: ಆಕ್ಷೇಪಣೆಗಳಿದ್ದಲ್ಲಿ ಹೀಗೆ ಮಾಡಿ... - latest exams key answers

ಸಿಇಟಿ-2020ರ ಸಾಮಾನ್ಯ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿದ್ದು ಆಧಾರ ಸಹಿತ ಆಕ್ಷೇಪಣೆಗಳನ್ನು ಆನ್​​ಲೈನ್ ಮೂಲಕ ಆಗಸ್ಟ್ 8 ರೊಳಗೆ ಸಲ್ಲಿಸಲು ಪ್ರಧಿಕಾರ ಸೂಚಿಸಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
author img

By

Published : Aug 4, 2020, 10:44 PM IST

ಬೆಂಗಳೂರು: ಸಿಇಟಿ-2020ರ ಸಾಮಾನ್ಯ ಪ್ರವೇಶ ಪರೀಕ್ಷೆ ಮುಗಿದಿದ್ದು, ಇದೀಗ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ‌ ಉತ್ತರಗಳನ್ನ ಪ್ರಾಧಿಕಾರವು ತನ್ನ ವೆಬ್​​ಸೈಟ್ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.

ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆನ್​​ಲೈನ್ ಮೂಲಕ ಆಗಸ್ಟ್​ 8 ರಂದು ಸಂಜೆ 5:30ರೊಳಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ವಿಷಯದ ಹೆಸರು, ವರ್ಷನ್ ಕೋಡ್, ಪ್ರಶ್ನೆ ಪ್ರತಿಕೆಯ ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೆ ಅಥವಾ ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳನ್ನು ಅಂತಿಮವಾಗಿರುತ್ತದೆ.

ಸಿಬಿಎಸ್​ಸಿ/ಸಿಐಎಸ್​ಸಿಇ ಅಂಕಗಳನ್ನು ದಾಖಲಿಸುವುದು:

ಕರ್ನಾಟಕ ದ್ವಿತೀಯ ಪಿಯುಸಿ 2020ರ ವಾರ್ಷಿಕ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳುತ್ತದೆ. ಆದರೆ, 12ನೇ ತರಗತಿಯನ್ನು ಸಿಬಿಎಸ್ಇ (ಜಮ್ಮು ಮತ್ತು ಕಾಶ್ಮೀರ ಸೇರಿ) ಸಿಐಎಸ್​ಸಿಇ, 10+2 ಮತ್ತಿತ್ತರ ಬೋರ್ಡ್​ಗಳಲ್ಲಿ 2020ರಲ್ಲಿ ಪೊರೈಸಿದವರು ಮತ್ತು 12ನೇ ತರಗತಿಯನ್ನ 2020ಕ್ಕಿಂತ ಮೊದಲೇ ಉತ್ತೀರ್ಣರಾಗಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನಿಗದಿತ ಲಿಂಕ್​ನಲ್ಲಿ ಆಗಸ್ಟ್ 8 ದಾಖಲಿಸಲು ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಹೆಚ್ಚಿನ ವಿವರಗಳಾಗಿ kea.kar.nic.in ಭೇಟಿ ನೀಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.