ಕೇಂದ್ರ ಸರ್ಕಾರದ ಸೆಂಟರ್ ಫಾರ್ ಡೆವಲ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಾಕ್)ನಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಈ ಹುದ್ದೆಗಳು ಖಾಲಿ ಇವೆ. ತಾಂತ್ರಿಕ ಕ್ಷೇತ್ರದಲ್ಲಿ ಖಾಲಿ ಇರುವ ಒಟ್ಟು 159 ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಸಿ -ಡಾಕ್ನಲ್ಲಿರುವ 159 ಹುದ್ದೆಗಳ ವಿವರ ಇಲ್ಲಿದೆ
- ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್: 4
- ಅಡ್ಮಿನ್ ಎಕ್ಸಿಕ್ಯೂಟಿವ್ 4
- ಸೀನಿಯರ್ ಅಸಿಸ್ಟಂಟ್ 1
- ಅಸಿಸ್ಟಂಟ್ 1
- ಪ್ರಾಜೆಕ್ಟ್ ಇಂಜಿನಿಯರ್ 90
- ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ 25
- ಪ್ರಾಜೆಕ್ಟ್ ಮ್ಯಾನೇಜರ್ 2
- ಪ್ರಾಜೆಕ್ಟ್ ಆಫೀಸರ್ 2
- ಪ್ರಾಜೆಕ್ಟ್ ಸಪೂರ್ಟ್ ಸ್ಟಾಫ್ 8
- ಪಾರ್ಟ್ ಟೈಮ್ ಟ್ರೈನರ್ 22
ವಿದ್ಯಾರ್ಹತೆ:
- ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್: ಡಿಪ್ಲೊಮೊ ಇಂಜಿನಿಯರ್
- ಅಡ್ಮಿನ್ ಎಕ್ಸಿಕ್ಯೂಟಿವ್: ಪದವಿ
- ಸೀನಿಯರ್ ಅಸಿಸ್ಟಂಟ್ : ಪದವಿ
- ಅಸಿಸ್ಟಂಟ್ : ಪದವಿ
- ಪ್ರಾಜೆಕ್ಟ್ ಇಂಜಿನಿಯರ್: ಬಿಇ, ಬಿಟೆಕ್, ಎಂಇ, ಎಂಟೆಕ್
- ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್: ಬಿಇ, ಬಿಟೆಕ್, ಎಂಇ, ಎಂಟೆಕ್
- ಪ್ರಾಜೆಕ್ಟ್ ಮ್ಯಾನೇಜರ್: ಬಿಇ, ಬಿಟೆಕ್, ಎಂಇ, ಎಂಟೆಕ್
- ಪ್ರಾಜೆಕ್ಟ್ ಆಫೀಸರ್: ಎಂಬಿಎ, ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ
- ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್: ಪದವಿ, ಸ್ನಾತಕೋತ್ತರ ಪದವಿ
- ಪಾರ್ಟ್ ಟೈಮ್ ಟ್ರೈನರ್: ಬಿಇ, ಬಿಟೆಕ್, ಎಂಇ, ಎಂಟೆಕ್
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ಹೊಂದಿದ್ದು, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಗರಿಷ್ಟ ವಯೋಮಿತಿ 35 ವರ್ಷ ಆಗಿದೆ.
ವೇತನ: ವಾರ್ಷಿಕ 3,00,000 – 22,90,000 ರೂ ವೇತನ ನಿಗದಿ ಪಡಿಸಲಾಗಿದೆ
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸಿಡಾಕ್ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಮಾಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 590 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಈ ಹುದ್ದೆಗೆ ಅಕ್ಟೋಬರ್ 28ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್ 17 ಆಗಿದೆ.
ಈ ಹುದ್ದೆಗೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು cdac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.