ETV Bharat / state

ಲಾಕ್​ಡೌನ್​ ವಿಸ್ತರಣೆ ನಿರ್ಧಾರ ಸ್ವಾಗತಿಸಿದ ಕೇಂದ್ರ ಸಚಿವ ಸದಾನಂದಗೌಡ - ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ

ಪ್ರಧಾನಿ ಮೋದಿ ಹಾಕಿಕೊಟ್ಟ ಸಪ್ತ ಸೂತ್ರಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್​​ಅನ್ನು ಎಲ್ಲರೂ ಡೌನ್​ಲೋಡ್​ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಸದಾನಂದಗೌಡ ಮನವಿ ಮಾಡಿದ್ದಾರೆ.

central minister sadanand gouda
ಸಚಿವ ಸದಾನಂದಗೌಡ
author img

By

Published : Apr 14, 2020, 10:58 PM IST

ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಲು ಸದ್ಯ ಜಾರಿಯಲ್ಲಿರುವ ಲಾಕ್​ಡೌನ್ ಮೇ 3ರವರೆಗೆ ಮುಂದುವರೆಸಿರುವ ನಿರ್ಣಯವನ್ನು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸ್ವಾಗತಿಸಿದ್ದಾರೆ.

central minister sadanand gouda
ಕೇಂದ್ರ ಸಚಿವ ಸದಾನಂದಗೌಡ

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ನಾಯಕರು, ವೈದ್ಯರು, ವೈರಾಣು ತಜ್ಞರು, ಕೈಗಾರಿಕೋದ್ಯಮಿಗಳು, ಆಡಳಿತ ತಜ್ಜರು ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ಪ್ರಧಾನಿ ನರೇಂದ್ರ ಮೋದಿ ಲಾಕ್​ಡೌನ್ ಮುಂದುವರೆಸುವ ನಿರ್ಣಯ ಪ್ರಕಟಿಸಿದ್ದಾರೆ. ಇದು ಅತ್ಯಂತ ಸಮಯೋಚಿತ ನಿರ್ಣಯವಾಗಿದೆ. ಈ ಸಂದರ್ಭದಲ್ಲಿ ಇದಕ್ಕಿಂತ ಉತ್ತಮ ನಿರ್ಧಾರ ಸಾಧ್ಯವಿರಲಿಲ್ಲ. ಇದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತಿದ್ದೇನೆ ಎಂದರು.

ಕೊರೊನಾ ತಡೆಗೆ ಪ್ರಧಾನಿ ಮೋದಿ ಹಾಕಿ ಕೊಟ್ಟ ಸಪ್ತ ಸೂತ್ರಗಳನ್ನು ಪಾಲಿಸೋಣ. ಕೊರೊನಾ ವಿರುದ್ಧ ಜಯಿಸೋಣ. ಕೊರೊನಾ ಮಹಾಮಾರಿಯ ವಿರುದ್ಧ ಪ್ರಾಣವನ್ನೇ ಪಣಕ್ಕಿಟ್ಟು ಜನರಿಗಾಗಿ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕರು, ಪೊಲೀಸರು, ಸ್ವಚ್ಛತಾ ಸಿಬ್ಬಂದಿಗೆಲ್ಲ ಕೃತಜ್ಞರಾಗಿರೋಣ. ಅವರನ್ನು ಗೌರವಿಸೋಣ ಎಂದರು.

ಇದರಿಂದ ಬಹುತೇಕ ಕೈಗಾರಿಗಳು, ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮುಚ್ಚಿವೆ. ಇದು ಶಾಶ್ವತ ಸ್ಥಿತಿ ಅಲ್ಲ. ಉದ್ಯೋಗದಾತರಲ್ಲಿ ಕಳಕಳಿಯ ಮನವಿ. ಈ ಸಂದರ್ಭದಲ್ಲಿ ನೌಕರರನ್ನು ದಯವಿಟ್ಟು ಕೆಲಸದಿಂದ ತೆಗೆಯಬೇಡಿ ಎಂದು ಅವರು ವಿನಂತಿಸಿದ್ದಾರೆ. ಈ ದಿಗ್ಬಂಧನದಿಂದ ಆರ್ಥಿಕ ದುರ್ಬಲರು, ಶ್ರಮಿಕ ವರ್ಗದವರು ತೀವ್ರ ತೊಂದರೆಗೊಳಗಾಗಿದ್ದಾರೆ. ಸರ್ಕಾರವು ಬಡವರ ಕಲ್ಯಾಣ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ ಎಂದರು.

ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅವರನ್ನು ಕೊರೊನಾ ಸೋಂಕಿನಿಂದ ದೂರ ಇಡಬೇಕು ಎಂದರು. ನಾವು ಮೊದಲು ಸೋಂಕು ತಗುಲದಂತೆ ಎಚ್ಚರ ವಹಿಸಬೇಕು. ಕೊರೊನಾ ಮಹಾಮಾರಿಯನ್ನು ಎದುರಿಸುವ ಇನ್ನೊಂದು ಪರಿಣಾಮಕಾರಿ ಮಾರ್ಗ ಎಂದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ಅದಕ್ಕಾಗಿ ನಮ್ಮ ಆಯುಷ್ ಇಲಾಖೆಯ ಸರಳ ಮಾರ್ಗಸೂಚಿಯನ್ನು ಅನುಸರಿಸಿ. ನಿಮ್ಮ ಆಹಾರ-ವಿಹಾರಗಳೇ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ ಎಂದರು.

ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್​ಅನ್ನು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಡೌನ್​ಲೋಡ್ ಮಾಡಿಕೊಳ್ಳಿ. ತುಂಬ ಉಪಯುಕ್ತ ಆ್ಯಪ್ ಇದಾಗಿದೆ. ನೀವು ಕೊರೊನಾ ಸೋಂಕಿನ ವಲಯದಲ್ಲಿದ್ದರೆ ಅದು ನಿಮ್ಮನ್ನು ಎಚ್ಚರಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.