ETV Bharat / state

ರಾಜ್ಯ ನಾಯಕರ ಜೊತೆ ಅಮಿತ್ ಶಾ ಮಿಡ್ ನೈಟ್ ಮೀಟಿಂಗ್: ಬಿಜೆಪಿ ಚಾಣಕ್ಯ ನೀಡಿದ ಸಲಹೆಗಳೇನು ಗೊತ್ತಾ? - ಈಟಿವಿ ಭಾರತ ಕನ್ನಡ

ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ರಾಜ್ಯ ಬಿಜೆಪಿ ನಾಯಕರು ಹಾಗು ಪಕ್ಷದ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

central minister Amit Sha
ಕೇಂದ್ರ ಗೃಹ ಸಚಿವ ಅಮಿತ್​ ಶಾ
author img

By

Published : Apr 22, 2023, 3:52 PM IST

ಬೆಂಗಳೂರು : ಇದು ನಮ್ಮ‌ ಪ್ರತಿಷ್ಠೆಯ ಗೆಲುವಾಗಬೇಕು. ಅತಿಯಾದ ಆತ್ಮವಿಶ್ವಾಸ ಬಿಟ್ಟು ನಿಮ್ಮ‌ ಮೇಲೆ ಇರುವ ನೆಗೆಟಿವ್ ಶೇಡ್ ನಿಂದ ಹೊರ ಬನ್ನಿ. ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ‌ ಅವರನ್ನು ಬೇರೆಕಡೆ ಹೋಗದಂತೆ ಸಮಾಧಾನ ಮಾಡಿ. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಇದೇ ಕಡೆ ಚುನಾವಣೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕಳೆದ ರಾತ್ರಿ ರಾಜ್ಯ ನಾಯಕರು ಹಾಗು ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖರ ಜೊತೆ ಅಮಿತ್ ಶಾ ಮಹತ್ವದ ಸಭೆ ನಡೆಸಿದರು. ಅನ್ಯ ರಾಜ್ಯಗಳಿಂದ ಆಗಮಿಸಿರುವ ವಿಸ್ತಾರಕರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯರಾತ್ರಿ 3 ಗಂಟೆಯವರೆಗೂ ಅಮಿತ್ ಶಾ ಮಹತ್ವದ ಸಭೆ ಕೈಗೊಂಡರು. ಮಿಡ್ ನೈಟ್ ಮೀಟಿಂಗ್ ನಲ್ಲಿ ಹತ್ತು ಹಲವು ಸಲಹೆ ಸೂಚನೆಗಳನ್ನು ರಾಜ್ಯ ನಾಯಕರಿಗೆ ನೀಡಿದರು.

ಬಿಜೆಪಿ ಪ್ರಮುಖರು, ವಿಸ್ತಾರಕರ ಬಳಿಕ ರಾಜ್ಯ ನಾಯಕರ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಅಮಿತ್ ಶಾ, ಇದು ನಮ್ಮ‌ ಪ್ರತಿಷ್ಠೆಯ ಗೆಲುವು. ಇದಕ್ಕಾಗಿ ಇಲ್ಲಿಯವರೆಗೆ ಏನೆಲ್ಲ ಮಾಡಿದ್ದೀರಾ? ಎಂದು ರಾಜ್ಯ ನಾಯಕರಿಗೆ ಪ್ರಶ್ನಿಸಿದರು. ವಿಸ್ತಾರಕರ ಸರ್ವೇ ರಿಪೋರ್ಟ್ ಆಧರಿಸಿ ಪ್ರತಿಯೊಬ್ಬ ಎಂಎಲ್ ಎ ಮತ್ತು ಸಚಿವರ ವೈಯಕ್ತಿಕ ವರದಿ ಮುಂದಿಟ್ಟಿದ್ದ ಅಮಿತ್ ಶಾ ಇದಕ್ಕೆ ಏನನ್ನುತ್ತೀರಿ ಎಂದು ಕೇಳಿದ್ದಾರೆ ಎನ್ನಲಾಗಿದೆ.

central minister Amit Sha meeting with BJP leaders  at bengaluru
ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು

ಸಭೆಯಲ್ಲಿ ಅಮಿತ್ ಶಾ ಇಟ್ಟ ವರದಿ ನೋಡಿ ದಂಗಾದ ರಾಜ್ಯ ನಾಯಕರು, ಒಂದು ಕ್ಷಣ ವಿಚಲಿತರಾದರು. ರಾಜ್ಯ ನಾಯಕರ ನಿರೀಕ್ಷೆ ಒಂದಾಗಿದ್ದರೆ ಸರ್ವೆ ಮಾಹಿತಿಯೇ ಮತ್ತೊಂದಾಗಿದೆ. ಯಾವ ಯಾವ ಕ್ಷೇತ್ರದಲ್ಲಿ ಏನೆಲ್ಲಾ ಸಕಾರಾತ್ಮಕ, ನಕಾರಾತ್ಮಕ ಪರಿಣಾಮ ಪಕ್ಷ ಎದುರಿಸಬೇಕಿದೆ ಎನ್ನುವ ಅಂಶಗಳ ವರದಿ ಆಡಳಿತಾರೂಢ ಪಕ್ಷಕ್ಕೆ ಹೆಚ್ಚಿನ ನಕಾರಾತ್ಮಕ ಅಂಶ ಬೀರಲಿದೆ ಎನ್ನುವುದಾಗಿತ್ತು. ರಾಜ್ಯ ನಾಯಕರು ಇದನ್ನೆಲ್ಲಾ ಲಘುವಾಗಿ ಪರಿಗಣಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ತಿಳಿದುಬಂದಿದೆ.

ವಿವಿಧ ರಾಜ್ಯಗಳಿಂದ ಬಂದಿರುವ ತನ್ನದೆಯಾದ ವಿಸ್ತಾರಕರಿಂದ ಸಂಗ್ರಹ ಮಾಡಿರುವ ವರದಿ ಬಗೆಗಿನ ಚರ್ಚೆ ನಡೆಸಿದ ನಂತರ ಅಮಿತ್ ಶಾ ಚರ್ಚೆಯನ್ನು ಪ್ರಚಾರ ಕಾರ್ಯಕ್ಕೆ ಬದಲಿಸಿದರು. ಸದ್ಯ ಅಧಿಕಾರ ಹಿಡಿಯುವ ಬಗ್ಗೆ ಮಾತನಾಡೋಣ, ವರದಿಯನುಸಾರ ಈಗ ಅನುಸರಿಸಬಹುದಾದ ತಂತ್ರಗಾರಿಕೆ ಬಗ್ಗೆ ಚರ್ಚಿಸೋಣ ಎಂದ ಅಮಿತ್ ಶಾ, ವಿಸ್ತಾರಕರು ಕೊಟ್ಟಿರುವ ಕ್ಷೇತ್ರದ ಮಾಹಿತಿ‌ ಅನ್ವಯ ತಂತ್ರ ಮಾಡೋಣ. ಅನ್ಯ ರಾಜ್ಯ ಅನ್ಯ ಭಾಷಿಕರನ್ನು ಗುರಿ ಮಾಡಿ, ಅವರನ್ನು ಮೊದಲು ತಮ್ಮ ಕಡೆ ಸೆಳೆಯಿರಿ ಎಂದು ಅಮಿತ್ ಶಾ ಸೂಚನೆ ನೀಡಿದರು.

ಈ ಬಾರಿ ಹೊಸ ಪ್ರಯತ್ನ ನಡೆಸಿ ಹೊಸಬರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ನೀಡಲಾಗಿದೆ. ಇದರಿಂದಾಗಿ ಅಸಮಾಧಾನ ಸಹಜ. ಹಾಗಂತ ಅಸಮಾಧಾನಿತರನ್ನು ಹಾಗೆ ಬಿಡಬೇಡಿ. ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ‌ ಅವರು ಬೇರೆಕಡೆ ಹೋಗದಂತೆ ಮಾಡಿ ಎಂದು ಸಲಹೆ ನೀಡಿದರು. ಈಗಾಗಲೇ ಕೆಲವೆಡೆ ಬಂಡಾಯ ಶಮನ ಮಾಡಿರುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತಷ್ಟು ಕಡೆ ಅಸಮಾಧಾನ ಶಮನಗೊಳಿಸಿ ಎಂದರು.

ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು‌ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಚಾರವಾಗಿ ವಿಶೇಷವಾಗಿ ಚರ್ಚೆ ನಡೆಸಲಾಯಿತು. ಪಕ್ಷದಿಂದ ಎಲ್ಲ ರೀತಿಯ ಅವಕಾಶ ಪಡೆದಿರುವ ಈ ಇಬ್ಬರು ನಾಯಕರಿಗೂ ಟಿಕೆಟ್ ತ್ಯಾಗ ಮಾಡಿ ಬೇರೆ ಅವಕಾಶ ಕೊಡಲಾಗುತ್ತದೆ ಎಂದರೂ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇವರಿಗೆ ಪಕ್ಷ ಯಾವುದೇ ದ್ರೋಹ ಮಾಡಿಲ್ಲ. ಬದಲಾಗಿ ಇವರಿಂದಲೇ ಪಕ್ಷಕ್ಕೆ ದ್ರೋಹವಾಗಿದೆ. ಇವರಿಗೆ ಈ ಚುನಾವಣಾ ಫಲಿತಾಂಶ ಪಾಠವಾಗಬೇಕು.

ಆಡಳಿತಾರೂಢ ಪಕ್ಷವಾಗಿರುವುದರಿಂದ ಕೆಲವೆಡೆ ಆಡಳಿತ ವಿರೋಧಿ ಅಲೆ ಸಹಜವಾಗಿರಲಿದೆ. ನಿಮ್ಮ‌ ಮೇಲೆ ಇರುವ ನೆಗೆಟಿವ್ ಶೇಡ್ ನಿಂದ ಹೊರ ಬನ್ನಿ. ಜನರ ಮನಸ್ಸಿನಲ್ಲಿರುವ ನಕಾರಾತ್ಮಕ ಅಂಶಗಳನ್ನು ಅಳಿಸಿ ಹಾಕಿ. ಸರ್ಕಾರದ ಸಾಧನೆಗಳನ್ನು ತಲುಪಿಸಿ ಎಂದು ಅಮಿತ್ ಶಾ ಸಲಹೆ ನೀಡಿದರು.

ಪ್ರತಿಪಕ್ಷಗಳ ಅಸ್ತ್ರಗಳಿಗೆ ತಕ್ಕ ಪ್ರತ್ಯಸ್ತ್ರ ಪ್ರಯೋಗ ಮಾಡಬೇಕು. ಲಿಂಗಾಯತ ವಿರೋಧಿ ಅಸ್ತ್ರವನ್ನು ಇಷ್ಟಕ್ಕೆ ಬಿಡಬೇಡಿ. ಕಾಂಗ್ರೆಸ್ ನಾಯಕರ ಈ ಅಸ್ತ್ರವನ್ನು ಅವರಿಗೆ ತಿರುಗು ಬಾಣ ಆಗುವಂತೆ ಮಾಡಬೇಕು. ಕಾಂಗ್ರೆಸ್ ಗಿಂತ ಬಿಜೆಪಿಯೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಿದೆ. ನಮಗೆ ಸಿಕ್ಕ ಎರಡು ಅವಕಾಶದಲ್ಲಿಯೂ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಇದನ್ನೆಲ್ಲಾ ಪ್ರಸ್ತಾಪಿಸುತ್ತ ಕಾಂಗ್ರೆಸ್ ಪಕ್ಷ ಈವರೆಗೆ ಎಷ್ಟು ಅವಕಾಶವನ್ನು ಲಿಂಗಾಯತ ಸಮುದಾಯಕ್ಕೆ ನೀಡಿದೆ ಎಂದು ಪ್ರತಿ ದಿನವೂ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿ. ಯಾವುದೇ ಕಾರಣಕ್ಕೂ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಅಮಿತ್​ ಶಾ ನೀಡಿದ್ದಾರೆ.

ತಡ ರಾತ್ರಿ 3 ಗಂಟೆಯವರೆಗೂ ಸಭೆ ನಡೆಸಿ ತಂತ್ರ ರೂಪಿಸಿರುವ ಅಮಿತ್ ಶಾ ಬೆಳಗ್ಗೆ ನವದೆಹಲಿಗೆ ತೆರಳುವ ಮೊದಲು ಮತ್ತೆ ರಾಜ್ಯ ನಾಯಕರ ಜೊತೆ ಸಭೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ‌ ಚರ್ಚೆ ನಡೆಸಿದರು. ನಂತರ ನಾಳೆಯಿಂದ ಆರಂಭವಾಗಲಿರುವ ಪ್ರವಾಸದ ಬಗ್ಗೆ ಸಿಎಂ ವಿವರಣೆ ನೀಡಿದರು.

ಇದನ್ನೂ ಓದಿ : ಬಸವಣ್ಣನ ಐಕ್ಯಮಂಟಪಕ್ಕೆ ನಾಳೆ ರಾಹುಲ್ ಗಾಂಧಿ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.