ETV Bharat / state

ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆಯೇ ದೊಡ್ಡ ಸವಾಲು : ಆಸಕ್ತಿ ತೋರದ ಕಾಲೇಜುಗಳು - ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆಯೇ ದೊಡ್ಡ ಸವಾಲು

ಶಾಲಾ- ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಬಹುದೊಡ್ಡದಿರುವಾಗ, ಆ ಸಮಸ್ಯೆಯನ್ನ ನಿವಾರಿಸಲು ಸರಕಾರಕ್ಕೆ ಆಸಕ್ತಿಯಿಲ್ಲ. ಬದಲಾಗಿ ಸೂರ್ಯ ನಮಸ್ಕಾರದಂತಹ ಮತೀಯ ಅಜೆಂಡಾಗಳನ್ನು ಶೈಕ್ಷಣಿಕ ವಲಯದಲ್ಲಿ ಹೇರಲು ಮುಂದಾಗಿದೆ ಅಂತಾ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.‌ ಪಿಯು ಬೋರ್ಡ್ ಇಂತಹ ಸುತ್ತೋಲೆ ಹಿಂಪಡೆಯಬೇಕು ಅಂತಾ ಕ್ಯಾಂಪಸ್ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ತಿಳಿಸಿದ್ದಾರೆ.‌.

ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆಗೆ ಆಸಕ್ತಿ ತೋರದ ಕಾಲೇಜುಗಳು

author img

By

Published : Dec 29, 2021, 5:34 PM IST

ಬೆಂಗಳೂರು : 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಎಲ್ಲಾ ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನ ಯೋಜಿಸುವಂತೆ ಆದೇಶ ಹೊರಡಿಸಿದೆ.

ಈ ನಿಟ್ಟಿನಲ್ಲಿ ರಾಜ್ಯದ ಪಿಯು ಬೋರ್ಡ್ ಸಹ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಕ್ರೋಢೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕೆಂದು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದೆ.

ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆಗೆ ಆಸಕ್ತಿ ತೋರದ ಕಾಲೇಜುಗಳು

ಜನವರಿ 1 ರಿಂದ ಫೆಬ್ರವರಿ 7ರವರೆಗೆ ಸೂರ್ಯ ನಮಸ್ಕಾರ ಯೋಜಿಸಲು ಸೂಚಿಸಲಾಗಿದೆ. ಆದರೆ, ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆಯೇ ದೊಡ್ಡ ಸವಾಲಾಗಿದೆ. ಬಹುತೇಕ ಖಾಸಗಿ ಕಾಲೇಜುಗಳು ಆಸಕ್ತಿ ತೋರಿಲ್ಲ. ಇದಕ್ಕೆ ಕಾರಣ ಸೂರ್ಯ ನಮಸ್ಕಾರ ಆಯೋಜನೆಗೆ ಅಡೆತಡೆಗಳೇ ಸಾಕಷ್ಟಿವೆ.

ಪ್ರಮುಖವಾಗಿ ಅನೇಕ ಪಿಯು ಕಾಲೇಜುಗಳಲ್ಲಿ ಸ್ಥಳಾವಕಾಶದ್ದೇ ದೊಡ್ಡ ಸಮಸ್ಯೆಯಾಗಿದೆ. ಒಂದೊಂದು ಕಾಲೇಜಿನಲ್ಲಿ ಅಂದಾಜು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ಎಲ್ಲರನ್ನೂ ಒಟ್ಟುಗೂಡಿಸಿ ಒಂದೇ ಸ್ಥಳದಲ್ಲಿ ಸೂರ್ಯ ನಮಸ್ಕಾರ ಮಾಡಿಸುವುದು ಅಸಾಧ್ಯ.

ಕೋವಿಡ್ ಮಾರ್ಗಸೂಚಿ ಪಾಲನೆ : ಈಗಾಗಲೇ ಒಮೀಕ್ರಾನ್ ಭೀತಿ ಹೆಚ್ಚಾಗಿದೆ. ಸಂಭವನೀಯ ಮೂರನೇ ಅಲೆಗೆ ಇದುವೇ ಕಾರಣವಾಗಬಹುದು ಎಂಬ ಆತಂಕ ಇದೆ.‌ ಹೀಗಾಗಿಯೇ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈ ಮಧ್ಯೆ ಎಲ್ಲ ವಿದ್ಯಾರ್ಥಿಗಳನ್ನ ಗುಂಪು ಸೇರಿಸಿ ಸೂರ್ಯ ನಮಸ್ಕಾರ ಮಾಡಿಸುವುದು ಹೇಗೆ ಎಂಬ ಪ್ರಶ್ನೆಯು ಕಾಡ್ತಿದೆ. ಈ ರೀತಿ ಗುಂಪು ಸೇರುವಿಕೆಯಿಂದ ಕೊರೊನಾ ಹರಡುವ ಕ್ಲಸ್ಟರ್ ಆಗುವ ಸಾಧ್ಯತೆಯು ಹೆಚ್ಚಿದೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲೂ ಸೋಂಕಿನ ಆತಂಕ ಇದೆ.‌

ಮಾರ್ಗದರ್ಶಕರಿಲ್ಲದೇ ಸೂರ್ಯ ನಮಸ್ಕಾರ ಹೇಗೆ?: ಯೋಗದ ಎಲ್ಲ ಪ್ರಮುಖ ಅಂಶಗಳನ್ನೊಳಗೊಂಡ ಒಂದು ಮಾರ್ಗವೇ ಸೂರ್ಯ ನಮಸ್ಕಾರ. ಇದರ ಪೂರ್ಣ ಪ್ರಮಾಣ ಸದುಪಯೋಗ ಪಡೆದುಕೊಳ್ಳಲು ಮಾರ್ಗದರ್ಶಕರ ಅಗತ್ಯವಿದೆ. ಆದರೆ, ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜನೆ ಮಾಡಿದರೂ, ಹೇಳಿ ಕೂಡವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಸರಿಯಾದ ರೀತಿಯಲ್ಲಿ ಸೂರ್ಯ ನಮಸ್ಕಾರ ಮಾಡದೇ ಹೋದರೆ ಅದರಿಂದ ಅನಾನುಕೂಲಗಳೇ ಜಾಸ್ತಿ ಅಂತಾ ಯೋಗ ಉಪನ್ಯಾಸ ಮಾಡುವ ಸುಬ್ರಮಣಿ ಮಾಹಿತಿ ನೀಡಿದ್ದಾರೆ‌. ಸರಿಯಾದ ಭಂಗಿಯ ಮೂಲಕ ಸೂರ್ಯ ನಮಸ್ಕಾರ ಮಾಡದೇ ಹೋದರೆ ಸೊಂಟ ನೋವು, ತಲೆ ತಿರುಗುವಿಕೆ ಹಾಗೂ ಜೀರ್ಣಕ್ರಿಯೆಯಲ್ಲಿ ಏರಿಳಿತ ಸಮಸ್ಯೆ, ರಕ್ತದೊತ್ತಡ ಇದ್ದರೆ ಹೆಚ್ಚಾಗುವ ಸಾಧ್ಯತೆ ಇದೆ.

ಅದರಲ್ಲೂ ಶಾಲಾ-ಕಾಲೇಜು ಮಕ್ಕಳು ಬೆಳವಣಿಗೆ ಮಟ್ಟದಲ್ಲಿ ಇರುವಾಗ ಅವ್ರ ಹಾರ್ಮೋನ್ ಇಂಬ್ಯಾಲೆನ್ಸ್ ಏರುಪೇರಾದರೆ ಅದು ಸಮಸ್ಯೆ ಆಗುತ್ತೆ. ಹೀಗಾಗಿ, ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಯೋಜನೆ ಮಾಡುವ ಮೊದಲು ಸರಿಯಾದ ಮಾರ್ಗದರ್ಶಕರನ್ನೊಳಗೊಂಡ ಕಾರ್ಯಕ್ರಮ ಮಾಡಿದರೆ ಒಳಿತು. ಸೂರ್ಯ ನಮಸ್ಕಾರವನ್ನ ಸೂರ್ಯ ಹುಟ್ಟುವಾಗ ಮುಳುಗುವಾಗ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಇರಲಿದೆ ಅಂತಾ ತಿಳಿಸಿದರು.

ಸೂರ್ಯ ನಮಸ್ಕಾರ ಕಡ್ಡಾಯ ನಿರ್ಧಾರ ಶೀಘ್ರ ಹಿಂಪಡೆಯಲಿ : ಶಾಲಾ- ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಬಹುದೊಡ್ಡದಿರುವಾಗ, ಆ ಸಮಸ್ಯೆಯನ್ನ ನಿವಾರಿಸಲು ಸರಕಾರಕ್ಕೆ ಆಸಕ್ತಿಯಿಲ್ಲ. ಬದಲಾಗಿ ಸೂರ್ಯ ನಮಸ್ಕಾರದಂತಹ ಮತೀಯ ಅಜೆಂಡಾಗಳನ್ನು ಶೈಕ್ಷಣಿಕ ವಲಯದಲ್ಲಿ ಹೇರಲು ಮುಂದಾಗಿದೆ ಅಂತಾ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.‌ ಪಿಯು ಬೋರ್ಡ್ ಇಂತಹ ಸುತ್ತೋಲೆ ಹಿಂಪಡೆಯಬೇಕು ಅಂತಾ ಕ್ಯಾಂಪಸ್ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ತಿಳಿಸಿದ್ದಾರೆ.‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.