ETV Bharat / state

ಕೇಂದ್ರ ಬಜೆಟ್: ಬೆಂಗಳೂರಿಗೆ ಮೂಲ ಸೌಲಭ್ಯ: ಕೃಷಿಕರಿಗೆ ಬಡ್ಡಿ ರಹಿತ ಸಾಲದ ಕೊಡುಗೆ ನಿರೀಕ್ಷೆ - Bharat Karnataka

ಬೆಂಗಳೂರಿಗೆ ಮೂಲ ಸೌಲಭ್ಯಗಳ ನೀಡುವ ಕಡೆ ಗಮನ - ಕೃಷಿ ವಲಯಕ್ಕೆ ಕೊಡುಗೆ ನೀಡುವುದಕ್ಕೆ ಮನವಿ

Central Budget
ಕೇಂದ್ರ ಬಜೆಟ್
author img

By

Published : Feb 1, 2023, 10:33 AM IST

Updated : Feb 1, 2023, 10:56 AM IST

ಬೆಂಗಳೂರಿಗೆ ಮೂಲ ಸೌಲಭ್ಯಗಳು ಮತ್ತು ಕೃಷಿ ವಲಯಕ್ಕೆ ಕೊಡುಗೆ ನೀಡುವುದಕ್ಕೆ ಮನವಿ

ಬೆಂಗಳೂರು: ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ಜನತೆ ಹತ್ತು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸುತ್ತಿರುವ ಮುಂಗಡಪತ್ರದಲ್ಲಿ ರಾಜ್ಯದ ಜನತೆ ಸಾಕಷ್ಟು ಕೊಡುಗೆಗಳ ಘೋಷಣೆ ಎದುರು ನೋಡುತ್ತಿದ್ದಾರೆ. ಜಾಗತಿಕವಾಗಿ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ ಎಂದು ಹೆಸರಾದ ಬೆಂಗಳೂರಿಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಯೋಜನೆಗಳನ್ನು ಪ್ರಕಟಿಸುವುದನ್ನು ನಿರೀಕ್ಷೆ ಮಾಡಲಾಗುತ್ತಿದೆ.

ರಾಜಧಾನಿ ಬೆಂಗಳೂರಿಗೆ ಮೂಲ ಸೌಲಭ್ಯದ ಅಗತ್ಯತೆಗಳಿದ್ದು ಬಜೆಟ್​ನಲ್ಲಿ ಇದಕ್ಕೆ ಆದ್ಯತೆ ನೀಡಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳ ಒಕ್ಕೂಟ ಎಫ್ ಕೆ ಸಿ ಸಿಐ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯಗಳ ಅಗತ್ಯತೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ. ಇದರ ನಿವಾರಣೆಗೆ ಕೇಂದ್ರ ಸರ್ಕಾರವು ಮುಂಗಡಪತ್ರದಲ್ಲಿ ಪರಿಹಾರವನ್ನು ನೀಡುವ ಆಶಾಭಾವನೆಯನ್ನು ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದ ಹೊರವಲಯದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸಬ್ ಅರ್ಬನ್ ರೈಲು ಯೋಜನೆಗೆ ಹಣಕಾಸಿನ ನೆರವು ದೊರೆಯಬೇಕು. ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕೆಂದು ಎಫ್ ಕೆ ಸಿಸಿಐ ಆಗ್ರಹಿಸಿದೆ.

ಇದರೊಂದಿಗೆ ಆದಾಯ ತೆರಿಗೆಯ ಪಾವತಿ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು. ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಬೇಕು. ಹೊಸದಾಗಿ ಸ್ಥಾಪಿಸಲಾಗುವ ಉದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರರಾದ ಬಿ ವಿ ಗೋಪಾಲರೆಡ್ಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ. ಮೂಲ ಸೌಕರ್ಯಗಳ ಒದಗಿಸಲು ಬಜೆಟ್ ಅಲ್ಲಿ ಆದ್ಯತೆ ನೀಡಿದರೆ ಕೈಗಾರಿಕಾ ವಲಯ ಸೇರಿದಂತೆ ಹಲವಾರು ಕ್ಷೇತ್ರಗಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತ್ವರಿತವಾದ ವಿವಾದ ಪರಿಹಾರಕ್ಕಾಗಿ, ಸಮಯ, ಶ್ರಮವನ್ನು ಉಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ನೇರ ತೆರಿಗೆಗಳಿಗಾಗಿ ರಾಷ್ಟ್ರೀಯ ನ್ಯಾಯಾಲಯ ಸ್ಥಾಪಿಸಬೇಕು. ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ವ್ಯಾಪಾರವನ್ನು ಹೆಚ್ಚಿಸಲು ತೆರಿಗೆ ರಜಾದಿನಗಳು ಮತ್ತು ವಿಶೇಷ ತೆರಿಗೆ ಪ್ರಯೋಜನಗಳನ್ನು ಪ್ರಕಟಿಸಬೇಕು. ಸೆಕ್ಷನ್ 37 ರ ಅಡಿ ಕಂಪನಿಗಳ ಕಾಯಿದೆ, 2013 ರ ನಿಬಂಧನೆಗಳ ಅನುಸಾರವಾಗಿ, ಕಂಪ್ಯೂಟಿಂಗ್‌ ವ್ಯಾಪಾರದ ಆದಾಯದಲ್ಲಿ ತೆರಿಗೆದಾರರಿಂದ ಉಂಟಾದ ಸಿಎಸ್‌ಆರ್‌ ವೆಚ್ಚಗಳ ಕಡಿತಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ಧಾರೆ.

ಮಾರ್ಚ್ 2017 ರ ನಂತರ ನಿಯೋಜಿಸಲಾದ ವಾಯು / ಜಲ/ ಸೌರಶಕ್ತಿಯಂತಹ ನವೀಕರಿಸಬಹುದಾದ ಶಕ್ತಿಯಲ್ಲಿ ತೊಡಗಿರುವ ಕಂಪನಿಗಳು ಈಗಾಗಲೇ ಪಡೆಯುತ್ತಿರುವ ಲಾಭದ ಕಡಿತವನ್ನು ಮುಂದುವರಿಸುವುದು. ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ಎಲ್‌ಪಿ) ಕಂಪನಿಗಳಿಗೆ ಸಂಭಾವ್ಯ ತೆರಿಗೆ ಪ್ರಯೋಜನ ವಿಸ್ತರಿಸುವುದು.

ಎಮ್‌ಎಸ್‌ಎಮ್‌ಇ ಗಳಿಗೆ ಬಡ್ಡಿ ರಹಿತ ಸಾಲ: ಬಡ್ಡಿ ರಹಿತ ಸಾಲ ಒದಗಿಸುವ ಮೂಲಕ, ಹೊಸ ದಾಸ್ತಾನುಗಳನ್ನು ಖರೀದಿಸಲು, ಹೊಸ ಉಪಕರಣಗಳನ್ನು ಖರೀದಿಸಲು, ವ್ಯವಹಾರವನ್ನು ವಿಸ್ತರಿಸಲು ಹಾಗೂ ಬಂಡವಾಳದ ಅಗತ್ಯವನ್ನು ಸರಾಗಗೊಳಿಸಲು ಬಜೆಟ್ ನಲ್ಲಿ ಸಹಾಯ ಮಾಡಬೇಕು. ಪೂರ್ವನಿರ್ಧರಿತ ಕಾಲಾವಧಿಯ ನಂತರ ಕುಂದುಕೊರತೆಗಳನ್ನು ಪತ್ತೆಹಚ್ಚಲು ಮತ್ತು ಆನ್‌ಲೈನ್‌ನಲ್ಲಿ ಅಂತಹ ಕುಂದುಕೊರತೆಗಳನ್ನು ಟ್ರ್ಯಾಕ್‌ ಮಾಡಲು ಆಯ್ಕೆಯನ್ನು ಸೇರಿಸುವ ಮೂಲಕ ಅಸ್ತಿತ್ವದಲ್ಲಿರುವ ಕುಂದು ಕೊರತೆ ಪರಿಹಾರ ಕಾರ್ಯವಿಧಾನದ ಬದಲಾವಣೆ ಮಾಡಬೇಕು ಎಂದಿದ್ದಾರೆ

ಸೇವಾ ತೆರಿಗೆ, ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್‌ಗೆ ಸಂಬಂಧಿಸಿದ ಕಂಪನಿಗಳ ಹಿಂದಿನ ತೆರಿಗೆ ವಿವಾದಗಳ ಬ್ಯಾಕ್‌ಲಾಗ್ ಅನ್ನು ತೆರವುಗೊಳಿಸಲು ಸಬ್ಕಾ ವಿಶ್ವಾಸ್ (ಪರಂಪರಾಗತ ವಿವಾದ ಪರಿಹಾರ) (ಎಸ್‌ವಿಎಲ್‌ಡಿಆರ್‌) ಯೋಜನೆಗೆ ಅನುಗುಣವಾಗಿ ಅಮ್ನೆಸ್ಟಿ ಯೋಜನೆಯ ಮರು - ಪರಿಚಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸೆಕ್ಷನ್ 111-ಎ ಅಡಿ ಸ್ಲ್ಯಾಬ್ ದರದ ಬದಲಿಗೆ ಕಡಿಮೆ ಅಲ್ಪಾವಧಿಯ ಬಂಡವಾಳ ಲಾಭದ (ಎಸ್‌ಟಿಸಿಜಿ) ತೆರಿಗೆ ದರವನ್ನು ವಿಧಿಸುವ ಮೂಲಕ ಸ್ಟಾರ್ಟ್ - ಅಪ್‌ಗಳಲ್ಲಿ ಹೂಡಿಕೆಗಳಿಗೆ ಪ್ರೋತ್ಸಾಹವನ್ನು ಬಜೆಟ್ ನಲ್ಲಿ ದಯಪಾಲಿಸಬೇಕು.ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಮ್‌ಎವೈ) ಅಡಿ ಗೃಹ ಸಾಲಗಳ ಮೇಲಿನ ಬಡ್ಡಿ ಅಂಶವು ಪ್ರಸ್ತುತ ರೂ 2 ಲಕ್ಷವನ್ನು ಮೀರಿರುವುದರಿಂದ ಗೃಹ ಸಾಲದ ಮೇಲಿನ ಬಡ್ಡಿಯ ಮೇಲಿನ ಕಡಿತವನ್ನು ರೂ 2 ಲಕ್ಷದಿಂದ ರೂ 5 ಲಕ್ಷಕ್ಕೆ ಹೆಚ್ಚಿಸಲು ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಪಾಲುದಾರಿಕೆ ಸಂಸ್ಥೆಗಳಿಗೆ ಆದಾಯ ತೆರಿಗೆ ದರವನ್ನು ಕಾರ್ಪೊರೇಟ್‌ಗಳ ತೆರಿಗೆಯ ದರದ ಹಂತಕ್ಕೆ ಸಮನಾಗಿ ಅಂದರೆ ಸೆಸ್ ಹೊರತುಪಡಿಸಿ ಶೇ. 30 ರಿಂದ ಶೇ.22ರ ವರೆಗೆ ಮಾಡುವುದು. ಕರಸಮಾಧಾನ ಯೋಜನೆಯ ಮಾದರಿಯಲ್ಲಿ ಇಪಿಸಿಜಿ ಪರವಾನಗಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ಬಾರಿ ಬಡ್ಡಿ ಮನ್ನಾ ಯೋಜನೆ ನೀಡಬೇಕೆಂದು ಎಫ್ ಕೆ ಸಿ ಸಿ ಐ ಅಧ್ಯಕ್ಷರಾದ ಬಿ.ವಿ. ಗೋಪಾಲ್ ರೆಡ್ಡಿ ಕೇಂದ್ರ ಅರ್ಥ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಕೃಷಿಕರ ನಿರೀಕ್ಷೆಗಳು :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸುತ್ತಿರುವ ಮುಂಗಡಪತ್ರದಲ್ಲಿ ದೇಶ ಅನ್ನದಾತರಾದ ರೈತರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಪ್ರಮುಖವಾಗಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲಾಗುತ್ತದೆ ಎಂದು ಕಳೆದ ವರ್ಷದ ಬಜೆಟ್ ನಲ್ಲಿ ಮಂಡಿಸಲಾದ ಯೋಜನೆ ಇನ್ನೂ ಜಾರಿಗೆ ತರಲಾಗಿಲ್ಲ. ಕೂಡಲೇ ಕೃಷಿ ಉತ್ಪನ್ನ ಬೆಂಬಲ ಬೆಲೆ ಖಾತರಿ ಶಾಸನ ಅನುಷ್ಠಾನಕ್ಕೆ ತರಬೇಕೆಂದು ರೈತ ಸಂಘಗಳು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿವೆ. ರೈತರ ಕೃಷಿ ಸಾಲ ನೀತಿ ಬದಲಾಗಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿಕರಿಗೆ ಬಡ್ಡಿ ರಹಿತ ಸಾಲ ನೀಡುವಂತಹ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ರೈತರಿಗೆ ಸಾಲ ನೀಡುವಾಗ ಸಿವಿಲ್ ಸ್ಕೋರ್ ಪರಿಗಣಿಸುವುದನ್ನು ರದ್ದುಪಡಿಸಬೇಕು ರೈತರ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳಲ್ಲಿ ಸಾಲ ನೀಡುವ ಪದ್ಧತಿ ಜಾರಿಗೆ ಬರಬೇಕು. ಕಬ್ಬು ಬೆಳೆಯ ಉತ್ಪಾದನಾ ವೆಚ್ಚ ಜಾಸ್ತಿ ಆಗಿದ್ದರಿಂದ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.

ಹಾಗೇ ಎಥೆನಾಲ್ ಅನ್ನು ಕಬ್ಬಿನ ಗಾಣದ ಹಂತದಲ್ಲಿ ಉತ್ಪಾದನೆ ಮಾಡುವ ಯೋಜನೆಗಳು ಕಾರ್ಯಗತಗೊಳ್ಳಬೇಕು. ಕಾಡು ಪ್ರಾಣಿಗಳಿಂದ ಜಮೀನಿಗೆ ಮತ್ತು ರೈತರಿಗೆ ಹಾನಿಯಾದಾಗ ನೀಡುವ ನಷ್ಟ ಪರಿಹಾರವನ್ನು 50 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಜನಸಾಮಾನ್ಯರು ಸಹ ಕೇಂದ್ರ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದು ಕೋವಿಡ್ ನಂತರ ಅಸಂಖ್ಯಾತ ಜನರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.ಈ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರವು ತನ್ನ ಹೆಚ್ಚಿನ ಆದ್ಯತೆಯನ್ನು ತುರ್ತಾಗಿ ನೀಡುವ ಅಗತ್ಯತೆ ಇದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಖಾಸಗಿ ಮಾನವ ಸಂಪನ್ಮೂಲ ಸಂಸ್ಥೆಯ ಮುಖ್ಯಸ್ಥರಾದ ನಿತ್ಯಾನಂದ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಕೇಂದ್ರ​ ಬಜೆಟ್ 2023: 1860 ರಿಂದ ಇಲ್ಲಿಯವರೆಗಿನ ಬಜೆಟ್​ ಇತಿಹಾಸ

Last Updated : Feb 1, 2023, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.