ETV Bharat / state

ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ: ಕೇಂದ್ರದ ಸೀಕ್ರೆಟ್, ಸರ್ಪ್ರೈಸ್ ಸೂತ್ರವೇನು?

author img

By

Published : Jul 26, 2021, 8:06 PM IST

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಲ್ಲಾ ನಾಯಕರ ಕಣ್ಣು ಸಿಎಂ ಸ್ಥಾನದ ಮೇಲೆ ಬಿದ್ದಿದೆ. ಆದರೆ ಕೇಂದ್ರದ ನಾಯಕರು ಮುಖ್ಯಮಂತ್ರಿ ಆಯ್ಕೆಯನ್ನು ಯಾವ ರೀತಿ ಮಾಡುತ್ತಾರೆ ಎಂಬುದು ಕಾಂಗ್ರೆಸ್​ ಪಕ್ಷ ಸೇರಿದಂತೆ ಬಿಜೆಪಿ ಸಚಿವರುಗಳಗೆ ಕುತೂಹಲ ಕೆರಳಿಸಿದೆ.

BJP
ಬಿಜೆಪಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಹೊತ್ತು ಕೇಂದ್ರದತ್ತ ಮುಖಮಾಡಿರುವ ಆಕಾಂಕ್ಷಿಗಳಿಗೆ, ರಾಷ್ಟ್ರೀಯ ನಾಯಕರ ಗೌಪ್ಯ ಹಾಗೂ ಅಚ್ಚರಿಯ ಸೂತ್ರ ವಿಪರೀತ ಕಾಡುತ್ತಿದೆ.

ಬಿಎಸ್‌ವೈ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎದ್ದಿರುವ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಲಭಿಸಿಲ್ಲ. ರಾಷ್ಟ್ರೀಯ ನಾಯಕರು ಸಭೆ ಸೇರಿ ಚರ್ಚಿಸಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಸಿಎಂ ಗಾದಿಗೇರುವ ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗೆದರಿದ್ದು, ಸೂಕ್ತ ಮಾಹಿತಿ ಇಲ್ಲದೆ ಒಳಗೊಳಗೆ ಒತ್ತಡದಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ಸಿಎಂ ಸ್ಥಾನಕ್ಕೇರುವ ನಿರೀಕ್ಷೆ ಒಂದಿರುವ ಹತ್ತಕ್ಕೂ ಹೆಚ್ಚು ನಾಯಕರು ತಮ್ಮದೆ ಆದ ಮೂಲಗಳಿಂದ ಕೇಂದ್ರ ನಾಯಕರ ನಿರ್ಧಾರದ ಮಾಹಿತಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಯ ನಾಯಕರು ಮಾತ್ರ ಉತ್ತರಪ್ರದೇಶ ಮುಖ್ಯಮಂತ್ರಿ ಆಯ್ಕೆಯ ಮಾದರಿಯ ಮಾನದಂಡವನ್ನೆ ಅನುಸರಿಸುತ್ತಿದೆ.

ಸಿಎಂ ಸ್ಥಾನಕ್ಕೆ ನಿರೀಕ್ಷೆ:

2017ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ ಬಹುಮತ ಸಾಧಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರು ಎಂಬ ಗೊಂದಲ ನಿರ್ಮಾಣವಾಗಿತ್ತು. ಆಗ ಯಾರು ನಿರೀಕ್ಷಿಸದ ರೀತಿಯಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ಮುಂದಿನ 1 ವರ್ಷ 10 ತಿಂಗಳ ಕಾಲಾವಧಿಗೆ ಸರ್ಕಾರವನ್ನು ಮುನ್ನಡೆಸುವ ಮುಖ್ಯಮಂತ್ರಿ ಹುಡುಕಾಟ ನಡೆದಿದೆ. ಜಾತಿ ಸಮೀಕರಣದ ಮೇಲೆ ಕೆಲವರು ಮುಖ್ಯಮಂತ್ರಿಗಳಾಗುವ ನಿರೀಕ್ಷೆಯನ್ನು ಹೊಂದಿದ್ದಾರೆ. ಅಲ್ಲದೆ ಒಂದಿಷ್ಟು ಹೆಸರುಗಳು ಸದ್ಯ ಸಿಎಂ ಗಾದಿಗೇರುವ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಇದೆಲ್ಲವನ್ನೂ ಮೀರಿ ಒಬ್ಬ ಹೊಸ ಅಭ್ಯರ್ಥಿಯನ್ನು ಸಿಎಂ ಎಂದು ಘೋಷಿಸುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ.

ಕಳಂಕರಹಿತ ನಾಯಕನ ಹುಡುಕಾಟ:

ರಾಷ್ಟ್ರೀಯ ನಾಯಕರು ಈಗಾಗಲೇ ಬಿಎಸ್ ಯಡಿಯೂರಪ್ಪ ಅವರಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಒಬ್ಬ ಪಕ್ಷದ ಹಾಗೂ ಕಳಂಕರಹಿತ ಯುವ ಅಭ್ಯರ್ಥಿಯನ್ನು ಘೋಷಿಸುವ ಮಾಹಿತಿಯನ್ನು ಮಾತ್ರ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೇಂದ್ರ ಸಚಿವರು ಇಲ್ಲವೇ ರಾಜ್ಯದ ಪ್ರಭಾವಿ ಶಾಸಕರು ಸಹ ಮುಖ್ಯಮಂತ್ರಿ ಎಂದು ಘೋಷಿತವಾಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಕೇಂದ್ರದ ನಡೆ ನಿಗೂಢ:

ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡದೆ ತನ್ನದೇ ಕಾರ್ಯತಂತ್ರ ಹೆಣೆಯುತ್ತಿರುವ ಸಾಕಷ್ಟು ಕುತೂಹಲ ಮೂಡಿಸಿದೆ. ಅಭ್ಯರ್ಥಿ ಆಯ್ಕೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿರುವ ರಾಷ್ಟ್ರೀಯ ನಾಯಕರು ಯಾವುದೇ ರೀತಿಯಲ್ಲೂ ರಾಜ್ಯ ನಾಯಕರಿಗೆ ಮುಂದಿನ ಸಿಎಂ ವಿಚಾರವಾಗಿ ಸ್ಪಷ್ಟತೆ ನೀಡುತ್ತಿಲ್ಲ. ಅತ್ಯಂತ ಗುಪ್ತವಾಗಿ ಹಾಗೂ ಅಚ್ಚರಿ ಮೂಡಿಸುವ ರೀತಿಯಲ್ಲಿ ತಮ್ಮ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಮುಂದಿನ ಒಂದೆರಡು ದಿನಗಳ ಸುದೀರ್ಘ ಚರ್ಚೆಯ ನಂತರವೇ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಇನ್ನೊಂದೆಡೆ ಈಗಾಗಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ತೀರ್ಮಾನ ಆಗಿದ್ದು, ರಾಷ್ಟ್ರೀಯ ನಾಯಕರು ಒಂದು ಸುತ್ತಿನ ಸಭೆ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಕೇಂದ್ರ ಯಾರನ್ನ ಮುಖ್ಯಮಂತ್ರಿ ಮಾಡಲಿದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರಕಿಲ್ಲ. ದೊರಕದಂತೆ ಕೇಂದ್ರ ನಾಯಕರು ಮಾಡಿದ್ದಾರೆ. ಹತ್ತು ಹಲವು ವಿಧದಲ್ಲಿ ಲೆಕ್ಕಾಚಾರ ಹಾಕಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಪಕ್ಷದ ಸಾರಥ್ಯ ವಹಿಸಬಲ್ಲ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿ ಕೇಂದ್ರ ಸರ್ಕಾರ ತೊಡಗಿದ್ದು, ಅದು ಯಾರು ಎಂಬ ಮಾಹಿತಿ ಇಲ್ಲದೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ: ನಿರ್ಗಮನದ ವೇಳೆ ಬಿಎಸ್​ವೈ ಭರ್ಜರಿ ಗಿಫ್ಟ್​: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.