ETV Bharat / state

ಮೀಸಲು ಅರಣ್ಯ ಕೈಬಿಡುವ ಮುನ್ನ ಕೇಂದ್ರದ ಅನುಮತಿ ಕಡ್ಡಾಯ: ಹೈಕೋರ್ಟ್ ತೀರ್ಪು - High Court verdict

2017ರಲ್ಲಿ ರಾಜ್ಯ ಸರ್ಕಾರ ಶಿವಮೊಗ್ಗದ ಸಾಗರ ಅರಣ್ಯ ಪ್ರದೇಶದ 6,742 ಎಕರೆಯಲ್ಲಿ 30.16 ಎಕರೆ ಭೂಮಿಯನ್ನು ಪುನರ್ವಸತಿ ಯೋಜನೆಗಾಗಿ ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು ಕಂದಾಯ ಇಲಾಖೆಗೆ ಹಸ್ತಾಂತರಿಸಿತ್ತು. ಈ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್,ಅರಣ್ಯದ ಕೆಲ ಭೂ ಭಾಗವನ್ನು ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಡುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ ಎಂದು ಹೇಳಿದೆ.

ಹೈಕೋರ್ಟ್ ತೀರ್ಪು
ಹೈಕೋರ್ಟ್ ತೀರ್ಪು
author img

By

Published : Mar 5, 2021, 6:45 PM IST

ಬೆಂಗಳೂರು: ರಾಜ್ಯದ ಯಾವುದೇ ಮೀಸಲು ಅರಣ್ಯ ಪ್ರದೇಶವನ್ನು ಅಥವಾ ಅರಣ್ಯದ ಕೆಲ ಭೂ ಭಾಗವನ್ನು ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಡುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

2017ರಲ್ಲಿ ರಾಜ್ಯ ಸರ್ಕಾರ ಶಿವಮೊಗ್ಗದ ಸಾಗರ ಅರಣ್ಯ ಪ್ರದೇಶದ 6,742 ಎಕರೆಯಲ್ಲಿ 30.16 ಎಕರೆ ಭೂಮಿಯನ್ನು ಪುನರ್ವಸತಿ ಯೋಜನೆಗಾಗಿ ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು ಕಂದಾಯ ಇಲಾಖೆಗೆ ಹಸ್ತಾಂತರಿಸಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಸ್ಥಳೀಯ ನಿವಾಸಿ ಗಿರೀಶ್ ಆಚಾರ್ ಎಂಬುವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಮೀಸಲು ಅರಣ್ಯ ಪ್ರದೇಶ ಅಥವಾ ಅರಣ್ಯ ಭಾಗದ ಯಾವುದೇ ಭೂಮಿಯನ್ನು ಮೀಸಲು ಅರಣ್ಯದಿಂದ ಪ್ರತ್ಯೇಕಿಸಬೇಕಾದರೆ ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯ ಎಂದಿದೆ.

ಓದಿ:ಕ್ಷೀರಭಾಗ್ಯ ಹಾಲಿನ ಪುಡಿ ಮಾರಾಟ: ಇಬ್ಬರು ಸಿಡಿಪಿಒಗಳಿಗೆ ಹೈಕೋರ್ಟ್​ನಿಂದ ಜಾಮೀನು

ರಾಜ್ಯ ಸರ್ಕಾರ ತನ್ನ ಕರ್ನಾಟಕ ಅರಣ್ಯ ಕಾಯ್ದೆ-1963 ರ ಸೆಕ್ಷನ್ 28ರ ಅಡಿ ಈ ಕ್ರಮ ಜರುಗಿಸಿರುವುದಾಗಿ ಹೇಳಿದೆ. ಆದರೆ ಮೀಸಲು ಅರಣ್ಯ ಪ್ರದೇಶವನ್ನು ಕೈಬಿಟ್ಟಿರುವ ರಾಜ್ಯದ ಕ್ರಮ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅರಣ್ಯ (ಸಂರಕ್ಷಣೆ) ಕಾಯ್ದೆ -1980ರ ಸೆಕ್ಷನ್ 2 ರ ವಿವರಣೆ ಹಾಗೂ ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಮೀಸಲು ಅರಣ್ಯ ಭೂಮಿಯನ್ನು ಕೈಬಿಟ್ಟಿರುವ ಸರ್ಕಾರದ ಕ್ರಮ ಕಾನೂನು ಬಾಹಿರವಷ್ಟೇ ಅಲ್ಲ, ಸಂವಿಧಾನದ ವಿಧಿ 48ಎ ಹಾಗೂ 51ಎ ಗಳನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ ಮೀಸಲು ಅರಣ್ಯ ವ್ಯಾಪ್ತಿಯಿಂದ 30.16ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದ ಸರ್ಕಾರದ ಕ್ರಮವೂ ಅನೂರ್ಜಿತ ಎಂದು ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.