ಆನೇಕಲ್: ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಭಾಂದವರು ಮನೆಯಲ್ಲಿದ್ದೇ ಆಚರಿಸಿ ಕೊರೊನಾ ಮಹಾಮಾರಿ ಹತೋಟಿಗೆ ತರಲು ಸಹಕರಿಸಿ ಎಂದು ಜಿಗಣಿ ಪೊಲೀಸ್ ವೃತ್ತ ನಿರೀಕ್ಷಕ ಕೆ ವಿಶ್ವನಾಥ್ ಮನವಿ ಮಾಡಿದ್ದಾರೆ.
ಜಿಗಣಿ ಪೊಲೀಸ್ ಠಾಣೆಯಲ್ಲಿ ನಡೆದ ರಂಜಾನ್ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಕೊರೊನಾ ಭೀತಿಯ ಹಿನ್ನೆಲೆ ನಿಯಮಗಳ ಇಫ್ತಾರ್ ಕೂಟಗಳನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವಾಗ ಧ್ವನಿವರ್ಧಕ ಬಳಸದಂತೆ ಸೂಚಿಸಿದರು. ಹಬ್ಬದ ನಿಮಿತ್ತ ವ್ಯಾಪಾರ ಚಟುವಟಿಕೆ ಸರ್ಕಾರದ ನಿಯಮಗಳಂತೆ ಪಾಲಿಸಬೇಕು ಎಂದು ತಿಳಿಸಿದರು.
ರಾತ್ರಿ - ಹಗಲು ರಸ್ತೆ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದರಲ್ಲೂ ವ್ಹೀಲಿಂಗ್ ಮೇಲೆ ಪೊಲೀಸರು ಸದಾ ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ ರಂಜಾನ್ ಹಬ್ಬವನ್ನು ಸರ್ವರ ಹಬ್ಬವಾಗಿ ಕೊರೊನಾ ಮುಕ್ತವಾಗಿಸಲು ಸಹಕರಿಸಿ ಎಂದು ಕೋರಿದ್ದಾರೆ.