ಬೆಂಗಳೂರು: ಪ್ರಕರಣ ಹಿಂಪಡೆಯುವಂತೆ ವಕೀಲರಿಗೆ ಆಮಿಷವೊಡ್ಡಿ ಒತ್ತಡ ತರುತ್ತಿದ್ದಾರೆ ಎಂದು ಆಪಾದಿಸಿರುವ ಸಿಡಿ ಯುವತಿ, ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ತನಿಖಾಧಿಕಾರಿ ಕವಿತಾಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
![ಕಮೀಷನರ್ ಗೆ ಪತ್ರ ಬರೆದ ಸಿಡಿ ಲೇಡಿ](https://etvbharatimages.akamaized.net/etvbharat/prod-images/kn-bng-01-cd-leady-letter-script-7202806_05052021112552_0505f_1620194152_505.jpg)
ಸಿಡಿ ಯುವತಿ ಕೊರೊನಾ ಪೀಡಿತರಾಗಿ ನಾಟಕವಾಡುತ್ತಿದ್ದು, ನಮ್ಮ ವಕೀಲರಾದ ಜಗದೀಶ್ ಕುಮಾರ್ ಹಾಗೂ ಸೂರ್ಯ ಮುಕುಂದರಾಜ್ ಅವರಿಗೆ ತನಿಖೆ ಹಿಂಪಡೆಯುವಂತೆ ಒತ್ತಡ ತರುತ್ತಿದ್ದಾರೆ ಎಂದು ಯುವತಿ ಪತ್ರದಲ್ಲಿ ಆಪಾದಿಸಿದ್ದಾಳೆ.
![ಕಮೀಷನರ್ ಗೆ ಪತ್ರ ಬರೆದ ಸಿಡಿ ಲೇಡಿ](https://etvbharatimages.akamaized.net/etvbharat/prod-images/11646858_bv.jpg)
ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಈವರೆಗೂ ತನಿಖೆ ಹಾಜರಾಗಿಲ್ಲ. ಇದೇ ಸಮಯ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯನಾಶ ಹಾಗೂ ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರತೊಡಗಿದ್ದಾರೆ.
ವಕೀಲ ಜಗದೀಶ್ ಕುಮಾರ್ಗೆ ಕಳೆದ 15 ದಿನಗಳಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿಗಳು ಪ್ರಕರಣದಿಂದ ಹಿಂಪಡೆದರೆ ಕೋಟ್ಯಂತರ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಮತ್ತೋರ್ವ ವಕೀಲ ಸೂರ್ಯ ಕುಮಾರ್ಗೆ ಮೇ 3ರಂದು ಕರೆ ಮಾಡಿ ಜಾರಕಿಹೊಳಿ ಮಗನ ಸ್ನೇಹಿತ ಪ್ರದೀಪ್ ಎಂದು ಪರಿಚಯಿಸಿಕೊಂಡು ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದಾರೆ. ಪ್ರದೀಪ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯ ನಿಜವಾದ ಹೆಸರು ಪ್ರಭು ಪಾಟೀಲ್ ಎಂದು ತಿಳಿದು ಬಂದಿದೆ. ಕೋಟ್ಯಂತರ ರೂಪಾಯಿ ಹಣ ನೀಡುವುದಾಗಿ ಪ್ರಚೋದಿಸುವುದಲ್ಲದೆ ಕೇಸ್ ವಾಪಸ್ ಪಡೆಯಬೇಕೆಂದು ಒತ್ತಡ ಹೇರಿದ್ದಾರೆ. ಕರೆ ಮಾಡಿದ ಪ್ರಭು ಪಾಟೀಲ್ ಹಾಗೂ ಪ್ರಕರಣದ ಆರೋ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕೆಂದು ಕಮೀಷನರ್ ಹಾಗೂ ಎಸ್ಐಟಿ ತನಿಖಾಧಿಕಾರಿಗೆ ಯುವತಿ ಪತ್ರ ಬರೆದಿದ್ದಾಳೆ ಎಂದ ವಕೀಲ ಸೂರ್ಯ ಮುಕುಂದರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿಯವರ ನಿರ್ದೇಶನ ಆಧರಿಸಿ ಮುಂದಿನ ಕ್ರಮ: ಸಿಎಂ ಯಡಿಯೂರಪ್ಪ