ETV Bharat / state

ಸಿಡಿ ಪ್ರಕರಣದ ಯುವತಿಯ ಮೂರನೇ ವಿಡಿಯೋ ಬಿಡುಗಡೆ.. ಆಕೆ ಹೇಳಿದ್ದೇನು? - Ramesh Jarkiholi CD case latest news

ಸಿಡಿ ಪ್ರಕರಣದ ಯುವತಿಯ ಮೂರನೇ ವಿಡಿಯೋ ಬಿಡುಗಡೆ

author img

By

Published : Mar 26, 2021, 11:52 AM IST

Updated : Mar 26, 2021, 12:55 PM IST

11:50 March 26

ಇಂದು ಮೂರನೇ ಬಾರಿ ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್​ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾಳೆ.

ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಿಂದ ಮೂರನೇ ಬಾರಿ ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ.  

29 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಎಲ್ಲ ಕರ್ನಾಟಕ ಜನತೆ, ತಂದೆ - ತಾಯಿಯ ಆಶಿರ್ವಾದದಿಂದ ಮತ್ತು ಎಲ್ಲ ಪಕ್ಷದ ನಾಯಕರು, ಸಂಘಟನೆಯವರು ನನಗೆ ತುಂಬಾ ಬೆಂಬಲಿಸುತ್ತಿದ್ದಾರೆ. ನಾನು ಇಷ್ಟು ದಿನ ಅಂದರೆ 24 ದಿನ ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ಭಯದಲ್ಲಿ ಬದುಕುತ್ತಿದ್ದೆ. ಈಗ ನನಗೆ ಎಲ್ಲೋ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರುವ ಕಾರಣಕ್ಕೆ ಮತ್ತು ನನಗೆ ಎಲ್ಲ ಬೆಂಬಲಿಸುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ನಾನು ಇವತ್ತು ನನ್ನ ವಕೀಲರಾದ ಜಗದೇಶ್ ಅವರ ಮುಖಾಂತರ ರಮೇಶ್​ ಜಾರಕಿಹೊಳಿ ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಯುವತಿ ಹೇಳಿದ್ದಾಳೆ.

ಇದನ್ನೂ ಓದಿ: 'ತಮಿಳುನಾಡಲ್ಲಿ ಕಮಲ ಅರಳಲಿದೆ' - ಅಣ್ಣಾಮಲೈ ಪರ ನಟಿ ನಮಿತಾ ಮತಬೇಟೆ

ಮಾ.13 ರಂದು ಮೊದಲ ಬಾರಿಗೆ ವಿಡಿಯೋ ರಿಲೀಸ್​ ಮಾಡಿದ್ದ ಯುವತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾಳೆ. ನಿನ್ನೆ ಎರಡನೇ ವಿಡಿಯೋದಲ್ಲಿ ಎಸ್ಐಟಿ ವಿರುದ್ಧ ಹರಿಹಾಯ್ದಿದ್ದಳು. ಇಂದು ಮೂರನೇ ಬಾರಿ ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್​ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾಳೆ.

Last Updated : Mar 26, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.