ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಬೌರಿಂಗ್ ಆಸ್ಪತ್ರೆಗೆ ಎಸ್ಐಟಿ ತನಿಖಾಧಿಕಾರಿಗಳು ಕರೆ ತಂದಿದ್ದಾರೆ.
ಆಡುಗೋಡಿಯ ವಿಚಾರಣಾ ಕೇಂದ್ರದಿಂದ ಈಗಾಗಲೇ ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಪ್ರತ್ಯೇಕ ಮೂರು ವಾಹನಗಳಲ್ಲಿ ಬೌರಿಂಗ್ ಆಸ್ಪತ್ರೆಯತ್ತ ತೆರಳಿದೆ. ಪೊಲೀಸ್ ಭದ್ರತೆಯಲ್ಲಿರುವ ಯುವತಿ ಸಹ ನೇರವಾಗಿ ಬೌರಿಂಗ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಲಿದ್ದಾರೆ.
ಮೆಡಿಕಲ್ ಟೆಸ್ಟ್ ಬಳಿಕ ಎಸ್ಐಟಿ ಅಧಿಕಾರಿಗಳು ನೇರವಾಗಿ ಆಡುಗೋಡಿಗೆ ಕರೆ ತರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ವಿಚಾರಣಾ ಕೇಂದ್ರಕ್ಕೆ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಆಗಮಿಸಿದ್ದು, ಮುಂದಿನ ಹಂತದ ವಿಚಾರಣೆಗೆ ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.