ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಇಂದಿನ ವಿಚಾರಣೆ ಮುಕ್ತಾಯವಾಗಿದೆ.
ನಗರದ ಆಡುಗೋಡಿಯ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು, ಸಂತ್ರಸ್ತೆಯನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಇಂದು ಬೆಳಗ್ಗೆ ಅಜ್ಞಾತ ಸ್ಥಳದಿಂದ 20ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಯುವತಿಯನ್ನು ಕರೆತಂದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ನಂತರ ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ವಿಚಾರಣೆಗಾಗಿ ಹಾಜರುಪಡಿಸಲಾಗಿತ್ತು.
ಓದಿ:ಸಿಡಿ ಪ್ರಕರಣ.. ಮಗಳ ಹೇಳಿಕೆ ರದ್ದು ಕೋರಿ ಸಂತ್ರಸ್ತೆಯ ತಂದೆಯಿಂದ ಹೈಕೋರ್ಟ್ಗೆ ಮೊರೆ
ಇದೀಗ ಇಂದಿನ ವಿಚಾರಣೆ ಅಂತ್ಯಗೊಂಡಿದೆ. ಸಂತ್ರಸ್ತೆ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ. ವಿಚಾರಣೆ ಅಂತ್ಯವಾಗಿದ್ದರೂ ಸ್ಥಳ ಮಹಜರು ಪ್ರಕ್ರಿಯೆ ಬಾಕಿ ಇರುವ ಹಿನ್ನೆಲೆ ನಾಳೆಯೂ ವಿಚಾರಣೆಗೆ ಹಾಜರಾಗಲು ಯುವತಿಗೆ ಸೂಚನೆ ನೀಡಲಾಗಿದೆ.
ನಾಳೆ ಗೌಪ್ಯ ಸ್ಥಳದಿಂದ ನೇರವಾಗಿ ಸ್ಥಳ ಮಹಜರಿಗೆ ಹಾಜರಾಗುವ ಸಾಧ್ಯತೆ ಇದೆ. ಈ ಮಧ್ಯೆ "ಯುವತಿಯನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ" ಎಂದು ಸಂತ್ರಸ್ತೆ ಪರ ವಕೀಲ ಕೆ ಎನ್ ಜಗದೀಶ್ ಹೇಳಿದ್ದಾರೆ.