ಬೆಂಗಳೂರು: ಮಲ್ಲೇಶ್ವರಂ ಅಪಾರ್ಟ್ ಮೆಂಟ್ನ ಫ್ಲ್ಯಾಟ್ನಲ್ಲಿ ಪೊಲೀಸರಿಂದ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕರೆದೊಯ್ದಿರೋ ಎಸ್ಐಟಿ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಿಜಿಸ್ಟರ್ ಬುಕ್ನಲ್ಲಿ ಯಾರೇ ಬಂದರೂ ಸಹಿ ಮಾಡಬೇಕು, ಹೀಗಾಗಿ ಆ ರಿಜಿಸ್ಟರ್ ಬುಕ್ನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ. ಭದ್ರತಾ ಸಿಬ್ಬಂದಿ ವಿಚಾರಣೆ ಕೂಡ ನಡೆಯುತ್ತಿದ್ದು, ಈ ಯುವತಿಯನ್ನ ನೋಡಿದ್ದೀರಾ? ನೋಡಿದ್ದರೆ ಯಾವಾಗ ಬಂದಿದ್ದರು? ಯಾವ ರೂಂ ನಲ್ಲಿ ಉಳಿದುಕೊಂಡಿದ್ದರು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ: ಸಿಡಿ ತನಿಖೆ: ಮಲ್ಲೇಶ್ವರಂನ ಅಪಾರ್ಟ್ಮೆಂಟ್ನಲ್ಲಿ ಎಸ್ಐಟಿಯಿಂದ ಮಹಜರು
ಫ್ಲ್ಯಾಟ್ ಅಕ್ಕ-ಪಕ್ಕ ವಾಸಿಸುವ ವ್ಯಕ್ತಿಗಳನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಫ್ಲ್ಯಾಟ್ ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳನ್ನ ಸಹ ವಿಚಾರಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಯುವತಿ ತೋರಿಸುವ ಫ್ಲ್ಯಾಟ್ ನ ಪ್ರತಿಯೊಂದು ಸ್ಥಳ ಮಹಜರು ನಡೆಯುತ್ತಿದೆ.