ಬೆಂಗಳೂರು : ಕಮರ್ಷಿಯಲ್ ಟ್ಯಾಕ್ಸ್ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಲಾರಿ ಕಳವು ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ಆಫೀಸ್ ಬಳಿ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಭಾಸ್ಕರ್ ಹಾಗೂ ಸುಜೀತ್ ಹಲ್ಲೆಗೊಳಗಾದವರು. ಇದೇ ತಿಂಗಳ 11ನೇ ರಂದು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಪ್ರಕರಣವೊಂದರಲ್ಲಿ ಸೀಜ್ ಮಾಡಿದ ಲಾರಿಯನ್ನು ಕಮರ್ಷಿಯಲ್ ಟ್ಯಾಕ್ಸ್ ಆಫೀಸ್ ಆವರಣದಲ್ಲಿ ನಿಲ್ಲಿಸಿದ್ರು. ಹೀಗಾಗಿ ಲಾರಿಗೆ ಸಂಬಂಧಪಟ್ಟವರು ನಿನ್ನೆ ರಾತ್ರಿ ಇನೋವಾ ಕಾರಿನಲ್ಲಿ ನಾಲ್ವರು ವ್ಯಕ್ತಿಗಳು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಲಾರಿ ಕದ್ದೊಯ್ದಿದ್ದಾರೆ.
ಇನ್ನು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.