ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸಲು ಸಿಸಿಬಿ ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರಿನ ಎಫ್ಎಸ್ಎಲ್ನಲ್ಲಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸುವ ಸೌಲಭ್ಯ ಇದೆ ಎಂದು ಹೇಳಲಾಗಿದ್ದು, ಹೈದರಾಬಾದ್ನ ಎಫ್ಎಸ್ಎಲ್ ತಜ್ಞರೊಂದಿಗೆ ಮಾತನಾಡಿ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಡ್ರಗ್ಸ್ ತೆಗೆದುಕೊಂಡಿದ್ದಾರೋ ಅಥವಾ ಸಾಮಾನ್ಯವಾಗಿ ಡ್ರಗ್ಸ್ ತೆಗೆದುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ ಮೂಲಕ ಕಂಡು ಕೊಳ್ಳಬಹುದಾಗಿದೆ. ಅದೇ ರೀತಿ ಡ್ರಗ್ಸ್ ತೆಗೆದುಕೊಂಡರೂ 90 ದಿನಗೊಳಗಾಗಿ ಡ್ರಗ್ಸ್ ಕೊಂಡಿರುವ ಬಗ್ಗೆ ಪತ್ತೆ ಹಚ್ಚಬಹುದಾಗಿದೆ.
ಆಸ್ಪತ್ರೆ ಹಾಗೂ ಲ್ಯಾಬ್ಗಳಲ್ಲಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸುತ್ತಾರೆ. ಟೆಸ್ಟ್ಗಾಗಿ ವೈದ್ಯರು 100 ರಿಂದ 120 ಕೂದಲು ತೆಗೆಯುತ್ತಾರೆ. ಕೂದಲು ತೆಗೆದುಕೊಂಡು ಲ್ಯಾಬ್ಗೆ ಒಯ್ಯುತ್ತಾರೆ. ಇದಕ್ಕೆ ಹೈದರಾಬಾದ್ ಟೀಂ ಒಪ್ಪಿಕೊಂಡಿದ್ದು, ಸ್ಯಾಂಪಲ್ ಕಲೆಕ್ಟ್ ಮಾಡಲು ಅಲ್ಲಿನ ಟೆಕ್ನಿಶಿಯನ್ಗಳೇ ಬಂದು ಸ್ಯಾಂಪಲ್ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.