ETV Bharat / state

ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆಗಳ ಮೇಲೆ ಸಿಸಿಬಿ ದಾಳಿ - etv bharat kannada

ಸಿಸಿಬಿ ಪೊಲೀಸರು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ, ನಗದು, ಚಿನ್ನಾಭರಣ ಸಹಿತ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Etv Bharatccb-raid-on-meter-interest-racketers-in-bengaluru
ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆಗಳ ಮೇಲೆ ಸಿಸಿಬಿ ದಾಳಿ
author img

By ETV Bharat Karnataka Team

Published : Nov 13, 2023, 6:13 PM IST

ಬೆಂಗಳೂರು: ನಗರದ ವಿವಿಧೆಡೆ ಮೀಟರ್ ಬಡ್ಡಿ ದಂಧೆ ನಡೆಸುತಿದ್ದವರ ಮೇಲೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿದ್ದಾರೆ‌. ಸಿಸಿಬಿ ಪೊಲೀಸರು, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿ ನಿಬಂಧಕ ಅಧಿಕಾರಿಗಳು ಜಂಟಿಯಾಗಿ ಬಸವನಗುಡಿ, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ, ಬಸವೇಶ್ವರ ನಗರ ಠಾಣೆ ವ್ಯಾಪ್ತಿಗಳಲ್ಲಿ ದಾಳಿ ನಡೆಸಿದ್ದು, ನಗದು ಸೇರಿದಂತೆ 42.42 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ccb raid on meter interest racketers in bengaluru
ಸಿಸಿಬಿ ವಶ ಪಡಿಸಿಕೊಂಡ ವಸ್ತುಗಳು

ತಕ್ಷಣ ಹಣ ಅಗತ್ಯ ಇರುವವರಿಗೆ ಹಣ ನೀಡಿ ನಂತರ ಹಿಂಸಿಸಿ ಮೀಟರ್ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದ ಆರೋಪದಡಿ ಚಾಮರಾಜಪೇಟೆಯ ವೆಂಕಟೇಶ, ಬಸವನಗುಡಿಯಲ್ಲಿ ಶೀಲಾ, ಕಾಮಾಕ್ಷಿ ಪಾಳ್ಯದ ರೌಡಿ ಆಸಾಮಿ ಜಗದೀಶ್ ಅಲಿಯಾಸ್ ಟಾಮಿ ಸೇರಿದಂತೆ ವಿವಿಧ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಸಿಸಿಬಿ ವಶ ಪಡಿಸಿಕೊಂಡ ದಾಖಲೆಗಳು

ಇವರ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ವೇಳೆ 23.42 ಲಕ್ಷ ನಗದು, 7 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ, 109 ಖಾಲಿ‌ ಚೆಕ್​ಗಳು, 50 ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್ಸ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿಗಳು, 11 ಸ್ಟಾಂಪ್ ಪೇಪರ್ಸ್, 45 ಪಾಕೆಟ್ ಪುಸ್ತಕಗಳು, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚ್​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪರಿಚಿತನನ್ನು ಹತ್ಯೆಗೈದು ಶವಕ್ಕೆ ಬೆಂಕಿಯಿಟ್ಟಿದ್ದ ಆರೋಪಿಯ ಬಂಧನ

ಇಸ್ಪೀಟ್​ ಅಡ್ಡೆ ಮೇಲೆ ಪೊಲೀಸರಿಂದ ದಿಢೀರ್​ ದಾಳಿ, 150ಕ್ಕೂ ಹೆಚ್ಚು ಜನರ ವಶ: ಇತ್ತೀಚಿಗೆ, ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್​ ಅಡ್ಡೆ ಮೇಲೆ ಏಕಾಏಕಿ ದಾಳಿ ನಡೆಸಿದ್ಧ ಬೆಂಗಳೂರು ನಗರದ ಪಶ್ಚಿಮ ವಿಭಾಗದ‌ ಪೊಲೀಸರು 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದರು. ಜೂಜಾಟಕ್ಕಿಟ್ಟಿದ್ದ 7 ಲಕ್ಷ ಹಣ ಜಪ್ತಿ ಮಾಡಿದ್ದರು. ಬಸವೇಶ್ವರ ನಗರದಲ್ಲಿರುವ ಅಡಿಗ ರಮ್ಮಿ‌ ಕ್ಲಬ್​ನಲ್ಲಿ ಅಕ್ರಮ ಚಟುವಟಿಕೆ ಕುರಿತು ಖಚಿತ ಮಾಹಿತಿ ಮೇರೆಗೆ ಬಸವೇಶ್ವರ ನಗರ ಹಾಗೂ ಗೋವಿಂದರಾಜ ನಗರ ಪೊಲೀಸರು ದಾಳಿ ನಡೆಸಿದ್ದರು.

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆಗಳ ಮೇಲೆ ಸಿಸಿಬಿ ದಾಳಿ

ಕ್ಲಬ್​ನಲ್ಲಿ‌ 150ಕ್ಕೂ ಹೆಚ್ಚು ಮಂದಿ ಇಸ್ಪೀಟ್​ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿತ್ತು. ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಹಣ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅಶೋಕ್ ಅಡಿಗ ಎಂಬುವರಿಗೆ ಸೇರಿದ ಕ್ಲಬ್ ಇದಾಗಿತ್ತು. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.