ಬೆಂಗಳೂರು: ನಗರ ಸೇರಿ ರಾಜ್ಯಾದ್ಯಂತ ವಿಧ್ವಸಂಕ ಕೃತ್ಯ ನಡೆಸಲು ಮುಂದಾಗಿದ್ದ ಅಲ್-ಉಮಾ ಸಂಘಟನೆಯ ಮೂವರು ಸದಸ್ಯರನ್ನು ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಪೊಲೀಸರು ತಮಿಳುನಾಡಿನ ಕ್ಯು ಬ್ರ್ಯಾಂಚ್ ಮಾಹಿತಿ ಮೇರೆಗೆ ಬಂಧಿಸಿದ್ದಾರೆ. ಇವರ ಬಂಧನದ ನಂತರ ಏಳೇ ದಿನದಲ್ಲಿ ಉಗ್ರರ ರಹಸ್ಯ ಬೇಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ಸಿಲಿಕಾನ್ ಸಿಟಿಗೆ ಬಂದು ತಲೆಮರೆಸಿಕೊಂಡಿದ್ದರು. ಹೀಗಾಗಿ ಕ್ಯು ಬ್ರ್ಯಾಂಚ್ ಪೊಲೀಸರು ಸಿಸಿಬಿಗೆ ಮಾಹಿತಿ ನೀಡಿದ್ದರು. ಈ ಎಲ್ಲಾ ಜಿಹಾದಿಗಳು ಬೆಂಗಳೂರಿನಲ್ಲಿ ಅಡಗಿ ಕೂತಿರುವ ಮಾಹಿತಿ ಸಿಕ್ಕ ಏಳು ದಿವಸದ ಒಳಗೆ ಆರೋಪಿಗಳನ್ನ ಸಿಸಿಬಿ ಖೆಡ್ಡಾಕ್ಕೆ ಕೆಡವಿದೆ.
ವಿಚಾರ ಬಯಲು:
ಸಿಸಿಬಿ ಪೊಲೀಸರು ತನಿಖೆಗೆ ಇಳಿದಾಗ ಈ ಆರೋಪಿಗಳು ತಮಿಳುನಾಡಿನಲ್ಲಿ 50 ಮೊಬೈಲ್ ಸಿಮ್ ಕಾರ್ಡ್ ಖರೀದಿಮಾಡಿ ನಗರದ ಹಲವೆಡೆ ಈ ಸಿಮ್ ಬಳಕೆ ಮಾಡಿ ಕೆಲ ವಿಧ್ವಂಸಕ ಕೃತ್ಯವೆಸಗಕಲು ಫ್ಲಾನ್ ಮಾಡಿರುವ ವಿಚಾರ ಬಯಲಾಗಿತ್ತು.
ಇದರ ಬೆನ್ನತ್ತಿದ್ದ ಸಿಸಿಬಿ ತನಿಖಾ ತಂಡಕ್ಕೆ ಒಂದು ಸಿಮ್ ಬಗ್ಗೆ ಹಿಂಟ್ ಸಿಕ್ಕಿದೆ. ಅದರ ಬೆನ್ನತ್ತಿದಾಗ ಒಂದು ಸಿಮ್ ಹೆಚ್ಬಿಆರ್ ಲೇಔಟ್ ನಲ್ಲಿ ಕೆಲವೊಮ್ಮೆ ಆನ್ ಆಗಿ ಆಫ್ ಆಗ್ತಿತ್ತು. ಯಶವಂತಪುರದಲ್ಲೂ ಇದೇ ಮಾದರಿಯಲ್ಲಿ ಮತ್ತೊಂದು ಸಿಮ್ ಕಾರ್ಡ್ ಆಫ್- ಆನ್ ಆಗುತ್ತಿತ್ತು. ಈ ಹಿನ್ನೆಲೆ ಒಬ್ಬನನ್ನ ವಶಕ್ಕೆ ಪಡೆದುಕೊಂಡಾಗ ಜಿಹಾದಿ ತಂಡದ ದುಷ್ಕೃತ್ಯ ಬಯಲಾಗಿದೆ. ತಮಿಳುನಾಡು ಪೊಲೀಸರು ಮಾಹಿತಿ ನೀಡಿದ ನಂತರ ಏಳು ದಿನಗಳಲ್ಲಿ ಕಾರ್ಯಾಚರಣೆ ಮಾಡಿ, ಮೊಹಮ್ಮದ್ ಹನೀಫ್ ಖಾನ್(29),ಇಮ್ರಾನ್ ಖಾನ್(32), ಉಸ್ಮಾನ್ ಗನಿ(24) ರನ್ನು ಬಂಧಿಸಲಾಗಿದೆ. ಸದ್ಯ ಪ್ರಕರಣದ ಪ್ರಮುಖ ಆರೋಪಿಗಳಿಗೆ ತಮಿಳುನಾಡು ಹಾಗೂ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.