ETV Bharat / state

ದ್ವೇಷ ಹತ್ಯೆ ಹೆಚ್ಚಳ, ಎಚ್ಚೆತ್ತ ಸಿಸಿಬಿ: ಪ್ರಮುಖ ರೌಡಿಶೀಟರ್​ಗಳಿಗೆ ಎಚ್ಚರಿಕೆ

ಬೆಂಗಳೂರು ನಗರದ ಕೆಲವು ರೌಡಿಗಳಿಗೆ ಸಿಸಿಬಿ ಪೊಲೀಸರು ಗ್ರಿಲ್ ಆರಂಭಿಸಿದ್ದಾರೆ. ಹತ್ಯೆ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಎಸಿಪಿ ಧರ್ಮೇಂದ್ರ ರೌಡಿಶೀಟರ್​ಗಳಿಗೆ ಎಚ್ಚರಿಕೆ ನೀಡಿದ್ದಾರೆ.

rowdy sheeter
ರೌಡಿಶೀಟರ್ ಬೇಕರಿ ರಘು
author img

By

Published : Aug 20, 2023, 2:28 PM IST

ಬೆಂಗಳೂರು: ನಗರದಲ್ಲಿ ರೌಡಿಶೀಟರ್​ಗಳ ದ್ವೇಷದ ಆಕ್ರಮಣ ಹಾಗೂ ಹತ್ಯೆ ಪ್ರಕರಣಗಳು ಏರಿಕೆಯಾಗುತ್ತಿದ್ದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಒಬ್ಬೊಬ್ಬರನ್ನೇ ಕರೆಯಿಸಿ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಶನಿವಾರ ರೌಡಿಶೀಟರ್ ಬೇಕರಿ ರಘು ಎಂಬಾತನನ್ನು ಕರೆಸಿದ್ದ ಎಸಿಪಿ ಧರ್ಮೇಂದ್ರ ವಾರ್ನಿಂಗ್ ನೀಡಿ ಕಳಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಹನುಮಂತನಗರ ಠಾಣೆಯ ರೌಡಿಶೀಟರ್​ ಬೇಕರಿ ರಘು, ನಟೋರಿಯಸ್ ರೌಡಿ ಸೈಕಲ್ ರವಿ ಸಹಚರನಾಗಿದ್ದ. ಹಪ್ತಾ ವಸೂಲಿ, ಸುಪಾರಿ ಹತ್ಯೆ, ಅಕ್ರಮ ದಂಧೆ ಸೇರಿದಂತೆ ಸುಮಾರು 20 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಇನ್ನೂ ಏಳು ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿಯಿವೆ.

ಸದ್ಯ ಬೆಂಗಳೂರು ಬಿಟ್ಟು ಆಂಧ್ರದಲ್ಲಿ ಬೇಕರಿ ರಘು ನೆಲೆಸಿದ್ದಾನೆ. ದಕ್ಷಿಣ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಎದುರಾಳಿ ಬಣ ರಘು ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುವುದರ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಆತನನ್ನು ಕರೆಯಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆತನ ಹಾಲಿ ವಾಸದ ವಿಳಾಸ, ಚಟುವಟಿಕೆ, ಆದಾಯದ ಮೂಲದ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ರಘು ಮಾತ್ರವಲ್ಲದೆ ಇನ್ನೂ ಕೆಲವು ಪ್ರಮುಖ ರೌಡಿಗಳ ಪಟ್ಟಿ ಸಿದ್ದಪಡಿಸಿರುವ ಸಿಸಿಬಿ ಪೊಲೀಸರು ಪ್ರತಿಯೊಬ್ಬರನ್ನೂ ಕರೆಸಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

rowdy sheeter
ರೌಡಿ ಶೀಟರ್​ ಮನೋಜ್

ನಗರದಲ್ಲಿ ಇತ್ತೀಚಿಗೆ ಇಬ್ಬರು ರೌಡಿಶೀಟರ್​ಗಳನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ರೌಡಿ ಕಪಿಲ್ ಹಾಗೂ ಪರಪ್ಪನ ಅಗ್ರಹಾರ ಬಳಿ ಸಿದ್ದಾಪುರ ಮಹೇಶ್​ನನ್ನು ಕೊಲೆೆ ಮಾಡಲಾಗಿತ್ತು. ಈ ಇಬ್ಬರ ಹತ್ಯೆ ಬಳಿಕ ನಗರದ ರೌಡಿಗಳ ಮೇಲೆ ಸಿಸಿಬಿ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ರೌಡಿಶೀಟರ್ ಹತ್ಯೆ

ಕುಖ್ಯಾತ ರೌಡಿಶೀಟರ್​ ಬಂಧನ: ಈಶಾನ್ಯ ವಿಭಾಗದ ಕುಖ್ಯಾತ ರೌಡಿಶೀಟರ್​ ಮನೋಜ್ (25) ಎಂಬಾತನನ್ನು ಕೋಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮನೋಜ್ ವಿರುದ್ಧ ಯಲಹಂಕ ಉಪನಗರ,‌ ಯಲಹಂಕ, ಕೋಡಿಗೆಹಳ್ಳಿ, ಸಂಪಿಗೆಹಳ್ಳಿ, ಚಿಕ್ಕಜಾಲ, ರಾಜಾನುಕುಂಟೆ, ಬಾಗಲಗುಂಟೆ, ಗಂಗಮ್ಮನಗುಡಿ, ಬ್ಯಾಟರಾಯನಪುರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಣಕ್ಕಾಗಿ ಅಪಹರಣ, ದರೋಡೆ ಸೇರಿದಂತೆ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.

ಹಲವು ಪ್ರಕರಣಗಳಲ್ಲಿ ಆರೋಪಿತನ ವಿರುದ್ಧ ವಾರಂಟ್ ಸಹ ಜಾರಿಯಾಗಿದೆ. ಆದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೆ ಸಹಚರರ ಜತೆ ಸೇರಿಕೊಂಡು ಅಪರಾಧ ಪ್ರಕರಣಗಳಲ್ಲಿ ಸಕ್ರಿಯನಾಗಿದ್ದ. ಜು.16ರಂದು ರಾತ್ರಿ ಚಿಕ್ಕಬೊಮ್ಮಸಂದ್ರದ ಕೆನರಾ ಬ್ಯಾಂಕ್ ಬಳಿ ಹರಿಪ್ರಸಾದ್ ಎನ್ನುವವರನ್ನ ಮನೋಜ್ ಮತ್ತವನ ಸಹಚರರು ಅಪಹರಿಸಿದ್ದರು. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯಲಹಂಕ ಉಪವಿಭಾಗದ ಎಸಿಪಿ ಆರ್.ಮಂಜುನಾಥ್ ನೇತೃತ್ವದಲ್ಲಿ, ಕೋಡಿಗೆಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು.ಬಿ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದಾಪುರ ಮಹೇಶ್ ಹತ್ಯೆ ಪ್ರಕರಣ: ಕೋರ್ಟ್​ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.