ETV Bharat / state

ಸ್ಯಾಂಡಲ್​ವುಡ್​ ಡ್ರಗ್​ ಜಾಲ: ನಟಿ ಆಪ್ತನ ಬೆನ್ನತ್ತಿದ ಸಿಸಿಬಿ ಪೊಲೀಸರು - ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ,

ಸ್ಯಾಂಡಲ್​ವುಡ್ ಲೋಕದ​ ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗ ನಟಿಮಣಿಯರ ಆಪ್ತ ಎನ್ನಲಾಗ್ತಿದ್ದ ಡ್ರಗ್​ ಪೆಡ್ಲರ್​ವೊಬ್ಬನ ಹಿಂದೆ ಬಿದ್ದಿದ್ದಾರೆ.

CCB police searching, CCB police searching for drug peddler Messi, drug peddler Messi, drug peddler Messi news, Sandalwood drug case, Sandalwood drug case 2020, Sandalwood drug case 2020 news, ಸಿಸಿಬಿ ಪೊಲೀಸರಿಂದ ಹುಡುಕಾಟ, ಸಿಸಿಬಿ ಪೊಲೀಸರಿಂದ ಮೆಸ್ಸಿಯ ಹುಡುಕಾಟ, ಡ್ರಗ್​ ಪೆಡ್ಲರ್​ ಮೆಸ್ಸಿ, ಡ್ರಗ್​ ಪೆಡ್ಲರ್​ ಮೆಸ್ಸಿ ಸುದ್ದಿ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020,
ನಟಿ ಆಪ್ತನಿಗೆ ಬೆನ್ನತ್ತಿದ ಸಿಸಿಬಿ ಪೊಲೀಸರು
author img

By

Published : Oct 9, 2020, 9:38 AM IST

ಬೆಂಗಳೂರು: ಕನ್ನಡ ಚಿತ್ರರಂಗದ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಡ್ರಗ್​ ಪೆಡ್ಲರ್​ಗಳನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.

ನಟಿಯರಾದ ರಾಗಿಣಿ ಹಾಗೂ ಸಂಜನಾ ಆಪ್ತ ಎನ್ನಲಾದ ಮೆಸ್ಸಿ ಅಲಿಯಾಸ್ ಮೂಸಾನನ್ನು ಖೆಡ್ಡಾಕ್ಕೆ ಕೆಡವಿದರೆ ಬಹಳಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ‌‌. ಈತ ನಟಿ ರಾಗಿಣಿ ಹಾಗೂ ಸಂಜನಾಗೆ ಸಹಾಯಕನಾಗಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.

ಭಟ್ಕಳದ ಮೂಸಾ ಒಳ್ಳೆಯ ನಡತೆ ಉಳ್ಳವನಂತೆ ಆ್ಯಕ್ಟಿಂಗ್​ ಮಾಡ್ತಿದ್ದ. ಸಿಲಿಕಾನ್ ಸಿಟಿಯಲ್ಲಿ ಬಂದ ತಕ್ಷಣ ತನ್ನ ವರಸೆ ಬದಲಾಯಿಸಿಕೊಂಡ ಈತ ಮೆಸ್ಸಿ ಎಂಬ ಹೆಸರಿನಲ್ಲಿ ನಟಿಯರಿಗೆ ಪರಿಚಿತವಾಗಿದ್ದ. ಈತ ನಟಿಮಣಿಯರ ಹೈ-ಫೈ ಪಾರ್ಟಿಗಳಲ್ಲಿ ಭಾಗಿಯಾಗ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಈತ ನಟಿಮಣಿಯರ ಜೊತೆ ಸಹಾಯಕನಾಗಿದ್ದು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಎನ್ನಲಾಗ್ತಿದೆ. ಹೀಗಾಗಿ, ಸಿಸಿಬಿ ಪೊಲೀಸರು ಮೆಸ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೆಸ್ಸಿ ಬಂಧನ ಮಾಡಿದ್ರೆ ಡ್ರಗ್ಸ್ ವಹಿವಾಟು ಮತ್ತು ಚಲನವನಗಳು ಇನ್ನಷ್ಟು ಬಯಲಾಗುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೇ, ಇವರ ಜೊತೆ ಇನ್ನಷ್ಟು ಸಂಪರ್ಕ ಇರುವ ನಟರ ಮಾಹಿತಿ ಕೂಡ ಈತನಿಗಿದೆ‌ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.