ETV Bharat / state

20 ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ಕೋರ್ಟ್​ಗೆ ಹಾಜರಾಗದ ನಾಲ್ವರ ಬಂಧನ - ಈಟಿವಿ ಭಾರತ ಕರ್ನಾಟಕ

ಸಿಸಿಬಿಯ ರೌಡಿ ನಿಗ್ರಹದಳ ಅಧಿಕಾರಿಗಳು ಹೊಸ ವರ್ಷ ಹಿನ್ನೆಲೆಯಲ್ಲಿ 20 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ನ್ಯಾಯಾಲಯಕ್ಕೆ‌ ಹಾಜರಾಗದ ನಾಲ್ವರು ರೌಡಿಶೀಟರ್​ಗಳನ್ನು ಬಂಧಿಸಿದ್ದಾರೆ.

Etv Bharatccb-police-raids-houses-of-rowdies-in-bengaluru-and-arrested-4-rowdies
20 ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ಕೋರ್ಟ್​ಗೆ ಹಾಜರಾಗದ ನಾಲ್ವರ ಬಂಧನ
author img

By ETV Bharat Karnataka Team

Published : Dec 22, 2023, 10:28 PM IST

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದ್ದಂತೆ ಕಾನೂನುಬಾಹಿರ ಚಟುವಟಿಕೆ ಎಸಗುವ ಶಂಕೆಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ 20 ಮಂದಿ ರೌಡಿಗಳ ಮನೆ ಮೇಲೆ ಸಿಸಿಬಿಯ ರೌಡಿ ನಿಗ್ರಹದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪೈಕಿ ನ್ಯಾಯಾಲಯಕ್ಕೆ‌ ಹಾಜರಾಗದೆ ತಲೆಮರೆಸಿಕೊಂಡಿದ್ದ ನಾಲ್ವರು ರೌಡಿಶೀಟರ್​ಗಳನ್ನು ಬಂಧಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ‌ ಕಾನೂನು‌ ಸುವ್ಯವಸ್ಥೆಗೆ ಧಕ್ಕೆ‌ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ರೌಡಿ ನಿಗ್ರಹದ ದಳ ಅಧಿಕಾರಿಗಳು, ವಿವೇಕನಗರ ಠಾಣೆಯ ರೌಡಿಶೀಟರ್​ಗಳಾದ ವಿಲ್ಸನ್ ಗಾರ್ಡನ್ ನಾಗನ ಸಹಚರರ ನಿರ್ಮಲ್ ಕುಮಾರ್, ನಾರಾಯಣ್, ರಾಮು, ಯಶವಂತಪುರ ಠಾಣೆ ಸೇರಿ ವಿವಿಧ ಪೊಲೀಸ್ ಠಾಣೆಯ ರೌಡಿಗಳಾದ ಕಿಟ್ಟಿ, ತಿಮ್ಮೇಶ ಸೇರಿದಂತೆ 20 ಮಂದಿ ರೌಡಿಗಳ ಮನೆಗಳ‌ ಮೇಲೆ ದಾಳಿ‌‌ ನಡೆಸಿದರು. ಈ ವೇಳೆ ಕೆಲ ರೌಡಿಗಳ ಮನೆಗಳಲ್ಲಿ ಹರಿತವಾದ ಆಯುಧಗಳು, ವಿವಿಧ ದಾಖಲಾತಿ ಪತ್ರಗಳು ಸಿಕ್ಕಿವೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಿವಾಜಿನಗರ ಪೊಲೀಸ್ ಠಾಣೆಯ ರೌಡಿ ಸಯ್ಯದ್ ನಜೀರ್, ಸಂಪಿಗೆಹಳ್ಳಿ ಠಾಣೆ ರೌಡಿ ಮಂಜುನಾಥ್, ಗಣೇಶ್ ಸೇರಿ ನಾಲ್ವರನ್ನ ಬಂಧಿಸಲಾಗಿದೆ.

ಗೂಂಡಾ ಕಾಯ್ದೆಯಡಿ ವೇಶ್ಯವಾಟಿಕೆ ಜಾಲ ಮುಂದುವರೆಸಿದ್ದ ಆರೋಪಿ ಬಂಧನ: ಮತ್ತೊಂದೆಡೆ, ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿ ಆರು ಬಾರಿ ಬಂಧಿತನಾದರೂ ಸುಧಾರಣೆಯಾಗದೆ ಜಾಮೀನು ಪಡೆದು ಹೊರಬಂದು ಮತ್ತೆ ಹಳೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ದಂಧೆಕೋರನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.

ಹುಳಿಮಾವು, ಮಡಿವಾಳ. ಪುಟ್ಟೇನಹಳ್ಳಿ, ಮೈಕೊ ಲೇಔಟ್ ಹಾಗೂ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವು ವರ್ಷಗಳಿಂದ ಅವ್ಯಾಹತವಾಗಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಹೊರರಾಜ್ಯದ ಯುವತಿಯರನ್ನ ಕೆಲಸದ ಆಮಿಷವೊಡ್ಡಿ, ಮಾನವ ಕಳ್ಳಸಾಗಾಣಿಕೆ ಮೂಲಕ ಕರೆತಂದು ಕಾಲಕ್ರಮೇಣ ತನ್ನ ದಂಧೆಗೆ ಬಳಸಿಕೊಳ್ಳುತ್ತಿದ್ದ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಸಾಜ್ ಪಾರ್ಲರ್, ಸ್ಪಾಗಳಲ್ಲಿ ಹೊರ ರಾಜ್ಯದ ಯುವತಿಯರಿಗೆ ಕೆಲಸ ಕೊಡಿಸುವ ಆಮಿಷವೊಡ್ಡುತ್ತಿದ್ದ.

ಯುವತಿಯರನ್ನ ಲಾಡ್ಜ್ ಹಾಗೂ ಬಾಡಿಗೆ ಮನೆಗಳಲ್ಲಿ ಇರಿಸಿಕೊಂಡು ತನ್ನ ದಂಧೆಗೆ ಬಳಸಿಕೊಳ್ಳುತ್ತಿದ್ದ. ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ 7 ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಮತ್ತೆ ವೇಶಾವ್ಯಾಟಿಕೆ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಸಿಸಿಬಿ ಪೊಲೀಸರು ಶಿಫಾರಸು ಮೇರೆಗೆ ನಗರ ಪೊಲೀಸ್ ಆಯುಕ್ತರು ಪರಿಶೀಲಿಸಿ ಆರೋಪಿಯನ್ನ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮನೆಗೆ ನುಗ್ಗಿ ಡಕಾಯಿತಿ, ಉಪ ಅರಣ್ಯಾಧಿಕಾರಿ ಸೇರಿ 11 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.