ಬೆಂಗಳೂರು: ಸಿಗರೇಟ್ ವಿತರಕರಿಂದ ಸಿಸಿಬಿಯ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳು ಲಂಚ ಪಡೆದ ಆರೋಪದ ತನಿಖೆಯ ವರದಿಯನ್ನ ಆಧಾರಿಸಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಎಸಿಬಿಗೆ ಪ್ರಕರಣದ ತನಿಖೆ ಹೊಣೆ ನೀಡಿ ಆದೇಶ ಹೊರಡಿಸಿದ್ದಾರೆ.
ಎಸಿಬಿ ಪಿಸಿ ಆ್ಯಕ್ಟ್ (ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್) ಇದರ ಅಡಿ ತನಿಖೆ ನಡೆಸಲಿದ್ದಾರೆ. ಈಗಾಗಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೂಡ ಇದರ ಸಂಬಂಧಿಸಿದಂತೆ ನಿನ್ನೆ ಎಫ್ಐಆರ್ ದಾಖಲಾಗಿದ್ದು, ಸದ್ಯ ಎಸಿಬಿ ಜೊತೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಕೂಡ ತನಿಖೆ ನಡೆಸಲಿದ್ದಾರೆ.
ಪ್ರಕರಣದ ಹಿನ್ನೆಲೆ: ಸಿಸಿಬಿಯ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ಅಜಯ್ ಹಾಗೂ ನಿರಂಜನ್ ಸಿಗರೇಟ್ ವಿತರಕರಿಂದ ಸುಮಾರು 1.75 ಕೋಟಿ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ, ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆ ನಡೆಸಿದ್ದರು. ಈ ವೇಳೆ ಸಿಗರೇಟ್ ವಿತರಕರಿಂದ ಹಣ ಹಾಗೂ ಮಾಸ್ಕ್ ವಿಚಾರದಲ್ಲಿ ಎಸಿಬಿ ಪ್ರಭು ಶಂಕರ್ ಹಣ ಪಡೆದಿರುವುದು ಸಾಬೀತಾದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಅವರಿಗೆ ವರದಿ ನೀಡಿದ್ದು, ಸದ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಡಿಜಿ ಎಸಿಬಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.