ಬೆಂಗಳೂರು : ರೌಡಿಸಂ, ರಾಬರಿ ಮಾಡುತ್ತಿದ್ದ ಆರೋಪದ ಮೇಲೆ ಎರಡು ರೌಡಿ ಗ್ಯಾಂಗ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೆಜೆನಗರದ ರೌಡಿಶೀಟರ್ ಇಮ್ರಾನ್ ಮತ್ತು ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಅಂದರ್ ಆಗಿದೆ. ಇಮ್ರಾನ್ ಟೀಮ್ನಲ್ಲಿದ್ದ ನವಾಜ್, ಇರ್ಷಾದ್, ಇಮ್ರಾನ್ ಪಾಷಾ, ಮಹಮದ್ ಅಫ್ತಾಬ್ ಎಂಬುವರನ್ನು ಬಂಧಿಸಲಾಗಿದೆ.
ಈ ಗ್ಯಾಂಗ್ ಒಂಟಿಯಾಗಿ ತಿರುಗಾಡುವವರನ್ನು ಟಾರ್ಗೆಟ್ ಮಾಡಿ ಲಾಂಗ್ ತೋರಿಸಿ ಹೆದರಸಿ ದರೋಡೆ ಮಾಡುತ್ತಿತ್ತು. ಇಮಾನ್ 2020ರಲ್ಲಿ ನಡೆದಿದ್ದ ಪಾದರಾಯನಪುರ ಗಲಭೆಯ ಪ್ರಮುಖ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ರೌಡಿಸಂ ಮಾಡುತ್ತಿದ್ದ ಎಂದು ಕೇಂದ್ರ ಅಪರಾಧ ಪತ್ತೆ ದಳದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ವಿದ್ಯಾರಣ್ಯಪುರದ ರೌಡಿ ನಿಶಾಂತ್ ಕೂಡ ಗುಂಪು ಕಟ್ಟಿದ್ದನು. ಏರಿಯಾದಲ್ಲಿನ ಸಿವಿಲ್ ವಿಚಾರಗಳಿಗೆ ಕೈ ಹಾಕಿ ಸೆಟಲ್ಮೆಂಟ್ ಮಾಡುವ ಕೆಲಸ ಮಾಡುತ್ತಿದ್ದನು. ನಿಶಾಂತ್ ಗ್ಯಾಂಗ್ ಸಹಚರರಾದ ಶರತ್, ಅಜಯ್, ಯತೀಶ್ ಎನ್ನುವರನ್ನು ಸಿಸಿಬಿಯ ಒಸಿಡಬ್ಲ್ಯೂ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಬರ್ಬರ ಕೊಲೆ.. ಮಗುವಿಗೆ ಹಾಲುಣಿಸುತ್ತಿದ್ದಾಗಲೇ ಪತ್ನಿಯ ಕತ್ತು ಸೀಳಿದ ಗಂಡ!