ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನೆಡಸಿ ಕುದುರೆ ರೇಸ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳನ್ನ ವಶಕ್ಕೆ ಪಡೆದಿದ್ದಾರೆ.
ಶೇಷಾದ್ರಿಪುರಂ ನ ನೆಹರುನಗರದಲ್ಲಿ ಆರೋಪಿಗಳು, ಲೈಸೆನ್ಸ್ ಇಲ್ಲದೆ ಸಾರ್ವಜನಿಕರಿಂದ ಹಣ ಪಣವಾಗಿ ಕಟ್ಟಿಸಿಕೊಂಡು ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ಮಿಥುನ್ ಮಡಿ, ರಘು, ಶಿವರಾಜು ಎನ್ನುವವ ರನ್ನ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 5.5 ಲಕ್ಷ ಹಣ ಹಾಗೂ 5 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : 30 ಸಾವಿರ ಕೋಟಿ ರೂ. ಹಗರಣ: ದಾಖಲೆ ಸಂಗ್ರಹಣೆಗೆ ಮುಂದಾದ ನಮೋ ಸಮಾಜ ಸಂಸ್ಥೆಯ ಪ್ರಮುಖ್ಗೆ ಜೀವ ಬೆದರಿಕೆ