ETV Bharat / state

ಸಿಸಿಬಿ ಕಚೇರಿಗೆ ಬಂದ ದೂಧ್​​ ಪೇಡಾ ದಿಗಂತ್​: ಕಂಟಕವಾಗಲಿದೆಯಾ ಮೊಬೈಲ್ ರಿಟ್ರೈವ್​?

ಡ್ರಗ್ಸ್​​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಹಿನ್ನೆಲೆ ನಟ ದಿಗಂತ್ ಮತ್ತೊಮ್ಮೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೇ ಅಧಿಕಾರಿಗಳು ವಶಪಡಿಸಿಕೊಂಡು ರಿಟ್ರೈವ್​ ಮಾಡಿರುವ ದಿಗಂತ್​ ಮೊಬೈಲ್​ ಮಾಹಿತಿಗಳು ಕಂಟವಾಗುವ ಸಾಧ್ಯತೆಯಿದೆ.

Actor Diganth inquiry into CCB office
ಸ್ಯಾಂಡಲ್​ವುಡ್​ ಡ್ರಗ್​ ಲಿಂಕ್ ಪ್ರಕರ
author img

By

Published : Sep 23, 2020, 12:05 PM IST

Updated : Sep 23, 2020, 12:43 PM IST

ಬೆಂಗಳೂರು: ಡ್ರಗ್ಸ್​ ಜಾಲದೊಂದಿಗೆ ನಟ ದಿಗಂತ್​ಗೆ ನಂಟು ಆರೋಪದ ಬಗ್ಗೆ ಕೆಲ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಈ ಹಿನ್ನೆಲೆ ಮತ್ತೊಮ್ಮೆ ವಿಚಾರಣೆಗೆ ಕರೆದ ಹಿನ್ನೆಲೆ ದಿಗಂತ್​ ಕಚೇರಿಗೆ ಬಂದಿದ್ದಾರೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಈ ಹಿಂದೆ ನಟ ದಿಗಂತ ಹಾಗೂ ಪತ್ನಿ ಐಂದ್ರಿತಾ ರೇ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ಈ ವೇಳೆ ಇಬ್ಬರನ್ನು ಪ್ರತ್ಯೇಕ ವಿಚಾರಣೆ ನಡೆಸಿದಾಗ‌, ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್, ಶಾಸಕರೊಬ್ಬರ ಪುತ್ರ ಮತ್ತು ಈಗಾಗಲೇ ಬಂಧಿತನಾಗಿರುವ ಆರೋಪಿ ವೈಭವ್ ಜೈನ್ ಬಗ್ಗೆ ‌ಮಾಹಿತಿ ಬಿಚ್ಚಿಟ್ಟಿದ್ದರು ಎನ್ನಲಾಗ್ತಿದೆ.

ಇಬ್ಬರ ಹೇಳಿಕೆಯನ್ನು ರೆಕಾರ್ಡ್ ‌ಮಾಡಿ, ಮೊಬೈಲ್​ ವಶಪಡಿಸಿಕೊಂಡು ರಿಟ್ರೈವ್​ ಮಾಡಲಾಗಿದೆ. ಈ ವೇಳೆ ಬಂಧಿತ ಆರೋಪಿಗಳ ಜೊತೆ ನಟ ದಿಗಂತ್​ಗೆ ಸಂಪರ್ಕ ಇರುವ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಹೇಳಲಾಗ್ತಿದೆ. ಅಲ್ಲದೆ, ದಿಗಂತ್​ ಹೆಸರು ಸೂಚಿಸಿದ ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಕರೆದು ಮಾಹಿತಿ ಪಡೆಯಲಾಗಿದೆ. ಆ ಮಾಹಿತಿಯ ಆಧಾರ ಮೇರೆಗೆ ಇಂದು ಸಿಸಿಬಿ ಕಚೇರಿಯಲ್ಲಿ ದಿಗಂತ್ ವಿಚಾರಣೆ ನಡೆಯುತ್ತಿದೆ.

ಸದ್ಯ, ಸಾಕ್ಷ್ಯಾಧಾರಗಳ ಮೇಲೆ ದಿಗಂತ್​ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ತನಿಖೆಗೆ ಸರಿಯಾದ ಸಹಕಾರ ನೀಡದಿದ್ದರೆ, ದಿಗಂತ್​ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಸದ್ಯ ಸಿನಿಮಾ ಶೂಟಿಂಗ್​ನಲ್ಲಿದ್ದ ದಿಗಂತ್​, ಶೂಟಿಂಗ್ ಸ್ಪಾಟ್​ನಿಂದಲೇ ವಿಚಾರಣೆಗೆ ಹಾಜರಾಗಿದ್ದಾರೆ. ಸೆಪ್ಟೆಂಬರ್ 16 ರಂದು ವಿಚಾರಣೆಗೆ ಹಾಜರಾದಾಗ ಕೆಲ ಸಾಕ್ಷ್ಯ ನೀಡಲು ದಿಗಂತ್​ ಸಮಯವಕಾಶ ಕೇಳಿದ್ದರು. ಪೂರಕ ದಾಖಲೆ ನೀಡುವುದಾಗಿ ತಿಳಿಸಿದ್ದರು. ಇಂದು ಸಾಕ್ಷ್ಯ ನೀಡುವುದು ಅನಿವಾರ್ಯವಾಗಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೂ ಉತ್ತರ ಕೊಡಬೇಕಿದೆ.

Last Updated : Sep 23, 2020, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.