ETV Bharat / state

ನಟ ದಿಗಂತ್​​ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​ - sandalwood drug case updates

ಸ್ಯಾಂಡಲ್​ವುಡ್​​​ಗೆ ಡ್ರಗ್ಸ್​​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ತನಿಖೆ ಎದುರಿಸಿ ಬಂದಿರುವ ನಟ ದಿಗಂತ್​​ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​ ನೀಡಿದೆ.

CCB notice to actor Digant for attend a investigation again
ನಟ ದಿಗಂತ್​​ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​
author img

By

Published : Sep 23, 2020, 9:50 AM IST

Updated : Sep 23, 2020, 10:03 AM IST

ಬೆಂಗಳೂರು: ಸ್ಯಾಂಡಲ್​ವುಡ್​​​ಗೆ ಡ್ರಗ್ಸ್​​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್​​ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​​ ನೀಡಿದೆ.

ಡ್ರಗ್ಸ್​ ಪ್ರಕರಣ ಕುರಿತು ಸತತ 3 ಗಂಟೆಗಳ ಕಾಲ ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಅವರು ಸೆ. 16 ರಂದು ವಿಚಾರಣೆ ಎದುರಿಸಿ ಬಂದಿದ್ದರು. ವಿಚಾರಣೆಗೆ ಹಾಜರಾದ ನಟ ದಿಗಂತ್ ಹಾಗೂ ಪತ್ನಿ ಐದ್ರಿಂತಾ ಮೊಬೈಲನ್ನು ಸಿಸಿಬಿ ಜಪ್ತಿ ಮಾಡಿತ್ತು. ವಿಚಾರಣೆ ವೇಳೆ ತಾನು ಒತ್ತಡದ ಸಂದರ್ಭದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಯಾವುದೇ ಮೊಜು ಮಸ್ತಿ, ಪಾರ್ಟಿಯಲ್ಲಿ ಡ್ರಗ್ಸ್​ ಸೇವಿಸಿಲ್ಲ, ಬಂಧಿತ ಆರೋಪಿಗಳ ಜೊತೆ ಯಾವುದೇ ರೀತಿಯ ಲಿಂಕ್​​ ಇಲ್ಲವೆಂದು ತಿಳಿಸಿದ್ದರು. ಸದ್ಯ ದಿಗಂತ್ ಮೊಬೈಲ್ ಕೂಡ ರಿಟ್ರೈವ್​​​ ಆಗಿದ್ದು, ಮತ್ತೊಮ್ಮೆ ಸಿಸಿಬಿ ವಿಚಾರಣೆಯ ನಂತರ ನಿಖರ ಮಾಹಿತಿ ತಿಳಿಯಲಿದೆ.

ಅವಶ್ಯಕತೆ ಇದ್ದಲ್ಲಿ ವಿಚಾರಣೆಗಾಗಿ ಮತ್ತೆ ನೋಟಿಸ್ ಕೊಡಲಾಗುತ್ತದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದರು. ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ದಿಗಂತ್ - ಐಂದ್ರಿತಾ ದಂಪತಿ ತಿಳಿಸಿದ್ದು, ಸದ್ಯ ನಟ ದಿಗಂತ್​​ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​ ಕಳಿಸಿದೆ.

Last Updated : Sep 23, 2020, 10:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.