ETV Bharat / state

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ದಾಳಿ: ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ

author img

By

Published : Mar 18, 2021, 6:44 PM IST

ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

Interstate drug peddlers arrested
ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ

ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.

ರಿಜ್ವಾನ್ ಪಾಷಾ, ಶಬ್ಬೀರ್ ಪಾಷಾ, ವಸೀಮ್ ಅಕ್ರಂ, ಮೊಹಮ್ಮದ್ ಕುತುಬುದ್ದೀನ್ ಪಾಷಾ ಬಂಧಿತರು. ಇವರಿಂದ 5 ಲಕ್ಷ ರೂ. ಬೆಲೆ ಬಾಳುವ 10 ಕೆಜಿ ಗಾಂಜಾ, 4 ಮೊಬೈಲ್ ಫೋನ್​ಗಳು ಮತ್ತು ಕೃತ್ಯಕ್ಕೆ ಬಳಸಿದ ಈಚರ್ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

Interstate drug peddlers arrested
ಗಾಂಜಾ ವಶಪಡಿಸಿಕೊಂಡ ಪೊಲೀಸರು

ಮುಂಬೈ ಗಾಂಜಾ ಸ್ಮಗ್ಲರ್​ಗಳಾದ ಬಾಂಬೆ ಆಸೀಫ್ ಹಾಗೂ ಶಿವನನ್ನು ಸಂಪರ್ಕಿಸಿ ಗಾಂಜಾ ಸರಬರಾಜು ನಡೆಸುತ್ತಿದ್ದರು. ವೃತ್ತಿಯಲ್ಲಿ ಡ್ರೈವರ್‌ಗಳಾಗಿದ್ದುಕೊಂಡ ಇವರು ನಗರದಿಂದ ಮುಂಬೈಗೆ ಗೂಡ್ಸ್‌ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು. ವಾಪಸ್ ಮುಂಬೈಯಿಂದ ಬರುವಾಗ ಗಾಂಜಾ ನಗರಕ್ಕೆ ತೆಗೆದುಕೊಂಡು ಬರುತ್ತಿದ್ದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳ ಆತ್ಮಹತ್ಯೆ; ಕುಟುಂಬಕ್ಕಿತ್ತು ₹ 20 ಲಕ್ಷ ಸಾಲ!

ಆರೋಪಿ ರಿಜ್ವಾನ್ ಮುಂಬೈನಿಂದ ಗಾಂಜಾ ತಂದು ಶಬ್ಬೀರ್, ವಾಸೀಂ ಕುತುಬುದ್ದೀನ್ ಮೂಲಕ ಮಾರಾಟ ಮಾಡುತ್ತಿದ್ದ. ಆರೋಪಿಗಳ ವಿರುದ್ಧ ಚಾಮರಾಜಪೇಟೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.