ETV Bharat / state

ಮಾಜಿ‌ ಮೇಯರ್ ಸಂಪತ್ ರಾಜ್ ದಾಖಲಾಗಿದ್ದ ಆಸ್ಪತ್ರೆಗೆ ಸಿಸಿಬಿ ನೋಟಿಸ್​ - ಸಿಸಿಬಿ ತನಿಖೆ

ಮಾಜಿ‌ ಮೇಯರ್ ಸಂಪತ್​ ರಾಜ್​​​ ನಾಪತ್ತೆ ಬೆನ್ನಲ್ಲೇ ಕೊರೊನಾ ಎಂದು ಹೇಳಿ ಚಿಕಿತ್ಸೆ ಪಡೆದಿದ್ದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಬಿ ಮುಂದಾಗಿದೆ. ಸದ್ಯ ಈ ಸಂಬಂಧ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ಸಿಸಿಬಿ ನೋಟಿಸ್​​ ಜಾರಿ ಮಾಡಿದೆ..

Sampath Raj
ಮಾಜಿ‌ ಮೇಯರ್ ಸಂಪತ್​ ರಾಜ್​​​
author img

By

Published : Oct 30, 2020, 5:23 PM IST

Updated : Oct 30, 2020, 5:30 PM IST

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದ‌ ಆರೋಪಿಯಾಗಿರುವ ಮಾಜಿ‌ ಮೇಯರ್ ಸಂಪತ್​ ರಾಜ್​​​ ನಾಪತ್ತೆ ಬೆನ್ನಲ್ಲೇ ಕೊರೊನಾ ಎಂದು ಹೇಳಿ ಚಿಕಿತ್ಸೆ ಪಡೆದಿದ್ದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಬಿ ಮುಂದಾಗಿದೆ. ಸದ್ಯ ಈ ಸಂಬಂಧ ಖಾಸಗಿ ಆಸ್ಪತ್ರೆಗೆ ಸಿಸಿಬಿ ನೋಟಿಸ್​​ ಜಾರಿ ಮಾಡಿದೆ.

ಬಂಧನ ಭೀತಿಯಲ್ಲಿದ್ದ ಸಂಪತ್ ರಾಜ್​​​ ಕೊರೊನಾ ಬಂದಿರುವುದಾಗಿ ಹೇಳಿ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು.‌ ಈ ವೇಳೆ‌ ವಿಚಾರಣೆ ಹಾಜರಾಗುವಂತೆ ಸಿಸಿಬಿ‌‌ ನೋಟಿಸ್​​​​ ಜಾರಿ ಮಾಡಿತ್ತು. ಕೊವೀಡ್ ಹಿನ್ನೆಲೆಯಲ್ಲಿ‌ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಂಪತ್ ರಾಜ್ ತಿಳಿಸಿದ್ದರು.

ಕೆಲ‌‌ ದಿನಗಳ ಬಳಿಕ ಮಾಜಿ ಮೇಯರ್ ಆರೋಗ್ಯ ಪರಿಸ್ಥಿತಿ ಕಂಡುಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿ, ಡಿಸ್ಚಾರ್ಜ್ ಬಳಿಕ ಮಾಹಿತಿ ನೀಡುವಂತೆ ಸಿಸಿಬಿ ತನಿಖಾಧಿಕಾರಿಗಳು ಸೂಚಿಸಿದ್ದರೂ ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ.

ಡಿಸ್ಚಾರ್ಜ್ ಸಾರಾಂಶ ನ್ಯಾಯ ಸಮ್ಮತವಾಗಿಲ್ಲ ಎಂದು ದೂರಿ ಆರೋಗ್ಯ ಇಲಾಖೆಗೆ ಪತ್ರ ಬರೆದು ಸಂಪತ್ ರಾಜ್ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಮನವಿ ಮಾಡಿದ್ದರು. ಸದ್ಯ ನಾಪತ್ತೆಯಾಗಿರುವ ಸಂಪತ್ ರಾಜ್ ಪತ್ತೆಗೆ‌‌ ಸಿಸಿಬಿ ಶೋಧಕಾರ್ಯ ನಡೆಸುತ್ತಿದೆ.

Last Updated : Oct 30, 2020, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.