ETV Bharat / state

ನಟಿ ರಾಗಿಣಿ ಆಪ್ತ ರವಿಶಂಕರ್‌ಗೆ​​ ಮತ್ತೆ ಸಿಸಿಬಿ ಡ್ರಿಲ್‌ - ravishankar ccb investigation

ನಟಿ ರಾಗಿಣಿ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ರವಿಶಂಕರ್ ಡ್ರಗ್ಸ್​​ ಪ್ರಕರಣದಡಿ ಒಮ್ಮೆ ವಿಚಾರಣೆಗೊಳಪಟ್ಟು ಜೈಲು ಸೇರಿದ್ದ. ಇದೀಗ ಮತ್ತೆ 2018ರ ಬಾಣಸವಾಡಿ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ಹಾಗು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಡ್ರಗ್ಸ್​​ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ‌ನಡೆಸಲಿದ್ದಾರೆ.

CCB Investigation for Ravishankar again
ರಾಗಿಣಿ ಆಪ್ತ ರವಿಶಂಕರ್​​ ಮತ್ತೆ ಸಿಸಿಬಿ ವಶಕ್ಕೆ!
author img

By

Published : Oct 10, 2020, 9:48 AM IST

ಬೆಂಗಳೂರು: ಸ್ಯಾಂಡಲ್​ವುಡ್​​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್​​ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ರಾಗಿಣಿ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ರವಿಶಂಕರ್, ಡ್ರಗ್ಸ್​​ ಪ್ರಕರಣದಲ್ಲಿ ಮೊದಲು ಅರೆಸ್ಟ್ ಆಗಿದ್ದ. ತದ ನಂತರ ಈತ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಮಾಹಿತಿ ಹಾಗು ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆಂಬ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳ ಎದುರು ಬಾಯಿಬಿಟ್ಟಿದ್ದ. ಹೀಗಾಗಿ ಒಮ್ಮೆ ತನಿಖೆ ನಡೆಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಇದೀಗ ಮತ್ತೆ 2018ರ ಬಾಣಸವಾಡಿ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ಹಾಗು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಡ್ರಗ್ಸ್​​ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ‌ನಡೆಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವರ ವಿಚಾರಣೆ ಕೂಡ ನಡೆದಿದೆ. ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವ ಕಾರಣ ರವಿಶಂಕರ್‌ನನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ.

ರವಿಶಂಕರ್ ಆರ್​ಟಿಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ವೇಳೆ ಪ್ರಭಾವಿಗಳ ಸಂಪರ್ಕ ಹೊಂದಿದ್ದು, ನಟಿ ರಾಗಿಣಿ ಪರಿಚಯವಾಗಿ ಆತ್ಮೀಯನಾಗಿದ್ದ. ಬಳಿಕ‌ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಾಗಿಣಿ ‌ಜೊತೆ ಡ್ರಗ್ ಪೆಡ್ಲಿಂಗ್ ಮಾಡುತ್ತಾ ತನ್ನ ಜಾಲವನ್ನು ಸೃಷ್ಟಿ ಮಾಡಿಕೊಂಡು ಅಧಿಕ ಹಣ ಗಳಿಸಿದ್ದ ಎನ್ನಲಾಗಿದೆ. ಇಂದಿನಿಂದ ತನಿಖೆ ಮತ್ತಷ್ಟು ಚುರುಕುಗೊಂಡು ಆರೋಪಿ ಜೊತೆ ಸಂಪರ್ಕ ಇರುವ ಪೆಡ್ಲರ್ ಮುಖವಾಡ ಬಯಲಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.