ETV Bharat / state

ಸ್ಯಾಂಡಲ್​​​​ವುಡ್ ಡ್ರಗ್ಸ್​​ ಪ್ರಕರಣ: ರೆಸಾರ್ಟ್​​ ಮಾಲೀಕ ಕಾರ್ತಿಕ್ ಮತ್ತೆ ಸಿಸಿಬಿ ವಶಕ್ಕೆ - CCB Police

ಕಾರ್ತಿಕ್ ಒಡೆತನದ ರೆಸಾರ್ಟ್​​ಗಳಲ್ಲಿ​ ದೊಡ್ಡ ದೊಡ್ಡ ಪಾರ್ಟಿ ನಡೆಯುತ್ತಿತ್ತು. ಇದರಲ್ಲಿ ನಟ-ನಟಿಯರು ಭಾಗಿಯಾಗುತ್ತಿದ್ದ ಕುರಿತು ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಮತ್ತೆ ವಶಕ್ಕೆ ಪಡೆದಿದೆ.

ರೆಸಾರ್ಟ್​​ ಮಾಲೀಕ ಕಾರ್ತಿಕ್
author img

By

Published : Sep 24, 2020, 12:07 PM IST

ಬೆಂಗಳೂರು: ಸ್ಯಾಂಡಲ್​​​​​ವುಡ್​ಗೆ ಡ್ರಗ್ಸ್​​ ಲಿಂಕ್ ಆರೋಪದಡಿ ವಿಚಾರಣೆ ಎದುರಿಸಿದ್ದ ಆರೋಪಿ ಕಾರ್ತಿಕ್​​​​​ ಅಲಿಯಾಸ್​​​​​​​ ರಾಜುನನ್ನು ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಪಡದಿದ್ದಾರೆ. ಸದ್ಯ ಚಾಮರಾಜಪೇಟೆ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಈತ ಪ್ರತಿಷ್ಠಿತ ರೆಸಾರ್ಟ್ ಮಾಲೀಕನಾಗಿದ್ದು, ಈತನ ರೆಸಾರ್ಟ್​​​​ನಲ್ಲಿ ಪಾರ್ಟಿಗಳು ನಡೆಯುತ್ತಿದ್ದವು. ಬಂಧಿತ ಆರೋಪಿಗಳಾದ ನಟಿ ಸಂಜನಾ ಗಲ್ರಾನಿ ಹಾಗೂ ನಟಿ ರಾಗಿಣಿ ಆಪ್ತರು ಸೇರಿ ಕಾರ್ತಿಕ್ ರೆಸಾರ್ಟ್​​ನಲ್ಲಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ಇದಕ್ಕೆ ಕಾರ್ತಿಕ್ ಸಹಾಯ ಮಾಡಿರುವ ಗುಮಾನಿ ಸಿಸಿಬಿಗೆ ಇದ್ದು, ಸದ್ಯ ತನಿಖಾಧಿಕಾರಿಗಳು ಕಾರ್ತಿಕ್​​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆ ಆರೋಪಿಯಿಂದ ಬಹಳಷ್ಟು ಮಾಹಿತಿ ಕಲೆಹಾಕಿ ಒಂದು ವೇಳೆ ಈತನ ಉತ್ತರಗಳು ಅಧಿಕಾರಿಗಳಿಗೆ ತೃಪ್ತಿ ನೀಡದಿದ್ದರೆ ಬಂಧಿಸುವ ಸಾಧ್ಯತೆ ಇದೆ.

ಇದಕ್ಕೂ ಮೊದಲು ಕಾರ್ತಿಕ್​​​​ನನ್ನು ಸಿಸಿಬಿ ಅಧಿಕಾರಿಗಳು ಎರಡು ಬಾರಿ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಸದ್ಯ ಆರೋಪಿಯಿಂದ ರೆಸಾರ್ಟ್ ಸಿಸಿಟಿವಿ, ಹಾಗೆಯೇ ಬಂಧಿತ ಆರೋಪಿಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.