ETV Bharat / state

ಆ್ಯಪ್​ ಮೂಲಕ ಆನ್​ಲೈನ್‌ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ, 3.5 ಲಕ್ಷ ರೂ ವಶ - ಕ್ರಿಕೆಟ್ ಬೆಟ್ಟಿಂಗ್​ ದಂಧೆ

ವಿವಿಧ ಆ್ಯಪ್​ಗಳ ಮೂಲಕ ಆನ್​ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ccb arrests three in cricket betting case
ಮೂವರ ಬಂಧನ
author img

By

Published : Oct 28, 2021, 9:36 PM IST

ಬೆಂಗಳೂರು: ವಿವಿಧ ಆ್ಯಪ್​ಗಳ ಮೂಲಕ ಆನ್​ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ ಸಿಸಿಬಿ ಪೊಲೀಸರು, 3.5 ಲಕ್ಷ ರೂ. ನಗದು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅ. 27 ರಂದು ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದೆ. ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯ ಪಾಕಿಸ್ತಾನ - ನ್ಯೂಜಿಲ್ಯಾಂಡ್​, ಸೌತ್ ಆಫ್ರಿಕಾ - ವೆಸ್ಟ್ ಇಂಡೀಸ್, ಇಂಗ್ಲೆಂಡ್ - ಬಾಂಗ್ಲಾದೇಶ, ಸ್ಕಾಟ್‌ಲ್ಯಾಂಡ್ - ನಮೀಬಿಯಾ ತಂಡಗಳ ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಪಟ್ಟಂತೆ ಲಾರ್ಡ್ಸ್ ಎಕ್ಸ್ಚೇಂಜ್.ಕಾಮ್, ಜೆಟ್ ಎಕ್ಸ್ಚೇಂಜ್.ಕಾಮ್,ಸ್ಕೈ ಎಕ್ಸ್ಚೇಂಜ್.ಕಾಮ್ ಎಂಬ ಆನ್ಲೈನ್ ಆ್ಯಪ್​​ ಮತ್ತು ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್ ಚಟುವಟಿಕೆ ನಡೆಸಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮೊಬೈಲ್ ಫೋನ್, ವ್ಯಾಟ್ಸ್​​​​​​ ಆ್ಯಪ್​​ ಮೂಲಕ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ಪಂದ್ಯಗಳ ಬಗ್ಗೆ ಕಟ್ಟಿದ್ದ ಹಣವನ್ನು ಗೆದ್ದವರಿಗೆ ನೀಡುವುದು ಮತ್ತು ಸೋತವರಿಂದ ಪಡೆದುಕೊಳ್ಳುತ್ತಾ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಮೂರು ಪ್ರತ್ಯೇಕ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿದ್ದರು ಎಂದಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಗರದ ನಿವಾಸಿಗಳಾದ ಓಂ ಪ್ರಕಾಶ್ ಸ್ಕೈ ಎಕ್ಸ್ಚೇಂಜ್.ಕಾಮ್ ಮೂಲಕ, ಸತ್ಪಾಲ್ ಸಿಂಗ್ ಜೆಟ್ ಎಕ್ಸ್ಚೇಂಜ್.ಕಾಮ್ ಎಂಬ ಆ್ಯಪ್ ಮೂಲಕ ಗೇವರ್ ಚಂದ್ ಲಾರ್ಡ್ಸ್ ಎಕ್ಸ್ಚೇಂಜ್.ಕಾಮ್ ಎಂಬ ಆ್ಯಪ್​​ ಮೂಲಕ ಆನ್‌ಲೈನ್‌ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡವರನ್ನು ವಶಕ್ಕೆ ಪಡೆಯಲಾಗಿದೆ.

ಬೆಟ್ಟಿಂಗ್ ಸಂಬಂಧ ಆರೋಪಿಗಳ ವಿರುದ್ಧ ಪ್ರತ್ಯೇಕವಾಗಿ 3 ಪ್ರಕರಣಗಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ಸಿಸಿಬಿ ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್, ಮಾರ್ಗದರ್ಶನದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್.ಹನುಮಂತರಾಯ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್​ಗಳಾದ ರವಿ ಪಾಟೀಲ್, ಜಿ.ಶಿವಪ್ರಸಾದ್, ಐ ರಹೀಂ ಮತ್ತು ಸಿಬ್ಬಂದಿ ಕೈಗೊಂಡಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.