ಬೆಂಗಳೂರು: ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುಂದರೇಶ್, ಮಂಜು ರಾಘವೇಂದ್ರ ಬಂಧಿತ ಆರೋಪಿಗಳು. ಇವರು ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಸ್ಟ್ರೀಯಲ್ ಸಬ್ ಅರ್ಬನ್ ಇಆರ್ ಐ ಎಲೆಕ್ಟ್ರಾನಿಕ್ ರಿಲೇಸ್ ಇಂಡಿಯಾ ಕಂಪನಿ ಪಕ್ಕದ ರಸ್ತೆಗಳಲ್ಲಿ ಜಿಂಕೆಯ ಕೊಂಬುಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದರು.
ಈ ಕುರಿತು ಮಾಹಿತಿ ಪಡೆದ ಡಿಸಿಪಿ ಕುಲ್ದೀಪ್ ಜೈನ್ ಅವರು, ತಮ್ಮ ತಂಡದ ಜೊತೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಎರಡು ಜಿಂಕೆ ಕೊಂಬು, ಮೊಬೈಲ್ ಫೋನ್, ಇನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ.