ಬೆಂಗಳೂರು: ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿ ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದ ಓರ್ವ ಆರೋಪಿಯಯನ್ನು ಬಂಧಿಸಿದ್ದಾರೆ.
ಕೋವಿಡ್ ಹಿನ್ನೆಲೆ ಆಕ್ಸಿಜನ್ ಅಭಾವ ಹೆಚ್ಚಿರುವ ಕಾರಣ ಹೆಚ್ಚು ಬೆಲೆಗೆ ಆಕ್ಸಿಜನ್ ಸಿಲಿಂಡರ್ಗಳನ್ನು ಕಾಳ ಸಂತೆಯಲ್ಲಿ ಮಾರುತ್ತಿದ್ದ ಆರೋಪಿ ರವಿಕುಮಾರ್ (36)ನನ್ನು ಬಂಧಿಸಲಾಗಿದೆ. ಈತ ಸೀಗಾ ಗ್ಯಾಸ್ ಎನ್ನುವ ಖಾಸಗಿ ಏಜೆನ್ಸಿಯ ಸೂಪರ್ ವೈಸರ್ ಆಗಿದ್ದ.
300 ರೂ. ಬೆಲೆಯ 47 ಲೀಟರ್ನ ಒಂದು ಸಿಲಿಂಡರ್ ಅನ್ನು 3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಲೇ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ಈತನ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.