ETV Bharat / state

ಕೊರೊನಾ ರಣಕೇಕೆಗೆ ಸಿಬಿಎಸ್ಇ ಪರೀಕ್ಷೆ ರದ್ದು: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧ - CBS C Exam Cancel

ಈಗಾಗಲೇ ಹಲವು ರಾಜ್ಯಗಳು ಕೊರೊನಾ ವಿಸ್ಫೋಟಕ್ಕೆ ನಲುಗಿ ಹೋಗಿವೆ. ಬಹುತೇಕ ಕ್ಷೇತ್ರದಂತೆ ಶಿಕ್ಷಣ ಕ್ಷೇತ್ರವೂ ಅಲ್ಲೋಲ ಕಲ್ಲೋಲವಾಗಿದೆ. ಎರಡನೇ ಅಲೆಯಿಂದಾಗಿ ಮಕ್ಕಳ‌ ಹಿತದೃಷ್ಟಿಯಿಂದ ಕೇಂದ್ರ ಶಿಕ್ಷಣ ಇಲಾಖೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ.

ಪರೀಕ್ಷೆ ರದ್ದು
ಪರೀಕ್ಷೆ ರದ್ದು
author img

By

Published : Apr 14, 2021, 8:09 PM IST

ಬೆಂಗಳೂರು: ಕೊರೊನಾ‌ ಎರಡನೇ ಅಲೆಗೆ ಇಡೀ ಶಿಕ್ಷಣ ಕ್ಷೇತ್ರವೇ ಬೆಚ್ಚಿಬಿದ್ದಿದೆ. ಈಗ ಮಕ್ಕಳ ಆರೋಗ್ಯ ದೃಷ್ಠಿಯಿಂದ ಮುಂದಿನ ತಿಂಗಳು ನಡೆಯಬೇಕಿದ್ದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಈ ಸಂಬಂಧ ಕಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವುದು ಅನಾರೋಗ್ಯಕರ ಬೆಳವಣಿಗೆ. ಕೊರೊನಾ‌ ಹೆಚ್ಚಾಗಿರುವುದು ನಿಜ. ಆದರೆ ಕಳೆದ ವರ್ಷ ನಮ್ಮ ರಾಜ್ಯದಲ್ಲಿ 8 ಲಕ್ಷ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಮಾಡಿದ ಪರೀಕ್ಷೆ ಯಶಸ್ವಿಯಾಗಿತ್ತು. ಕಳೆದ ಬಾರಿ ಸೋಂಕಿನ ತೀವ್ರತೆ ಇನ್ನಷ್ಟು ಹೆಚ್ಚಾಗಿತ್ತು. ಆಗ ಎಸ್​ಒಪಿ ಜಾರಿ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಯಾವುದೇ ಮಾನದಂಡವಿಲ್ಲದೇ ಮಕ್ಕಳನ್ನ ತೇರ್ಗಡೆ ಮಾಡುವುದು ಸರಿಯಲ್ಲ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧ

ಇನ್ನು ಖಾಸಗಿ ಶಾಲೆಗಳ ಸಂಘಟನೆಯಾದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಕೇಂದ್ರ ಸರ್ಕಾರ ಸದ್ಯಕ್ಕೆ ತೆಗೆದುಕೊಂಡಿರುವ ಈ ನಿರ್ಧಾರ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಿ ಇದೆ. ಆದರೆ ಶೈಕ್ಷಣಿಕ ದೃಷ್ಟಿಯಿಂದ ಪರೀಕ್ಷೆಯನ್ನೇ ರದ್ದು ಮಾಡಿರುವುದು ಸರಿಯಲ್ಲ. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ತಿಳಿಯಲು ಸಾಧ್ಯವಿಲ್ಲ. ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಆದರೆ ಏಕಾಏಕಿ ರದ್ದು ಮಾಡಿದ್ರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೊಡೆತ ಬೀಳಲಿದೆ ಎಂದರು.

ಒಟ್ಟಾರೆಯಾಗಿ‌ ಕಳೆದ ಬಾರಿಯಂತೆ ಈ ಬಾರಿಯೂ ಕೊರೊನಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ತಂದಿದೆ. ಸದ್ಯಕ್ಕೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಮಾತ್ರ ರದ್ದಾಗಿದೆ. ಆದರೆ ಇದನ್ನೂ ಆನ್‌ಲೈನ್​ನಲ್ಲಿ ನಡೆಸುವಂತೆ ಮನವಿ ಮಾಡಲಾಗುತ್ತಿದೆ.

ಇದನ್ನೂ ಓದಿ. ಮುಷ್ಕರ ಹೂಡಿದ್ರೇ ಈವರೆಗಿನ ಯಾವ ಸರ್ಕಾರವೂ ಇಷ್ಟು ಕಟುವಾಗಿರಲಿಲ್ಲ.. ಆದರೆ, ಯಡಿಯೂರಪ್ಪ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.