ಬೆಂಗಳೂರು: ರೈಲ್ವೆ ಟಿಕೆಟ್ಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡ ಕಳಚುತ್ತಿದೆ. ಈತನಿಗೆ ಪಾಕಿಸ್ತಾನದ ಜೊತೆ ಲಿಂಕ್ ಇರುವ ಮಾಹಿತಿ ಸದ್ಯ ಬಯಲಾಗಿದೆ.
ಭ್ರಷ್ಟಾಚಾರದಿಂದ ಅಕ್ರಮ ಹಣ ಮಾಡಿರುವ ಮಾಹಿತಿ ಮೇರೆಗೆ ಸಿಬಿಐ ಕೂಡ ಈತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಿದೆ.
2020 ಜನವರಿಯಲ್ಲಿ ಗುಲಾಮ್ ಮುಸ್ತಫಾನನ್ನ ಮೊದಲು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದರು. ಈತ ರೈಲ್ವೆಯ ANMS ಸಾಫ್ಟ್ವೇರ್ ಹ್ಯಾಕ್ ಮಾಡಿ ನಕಲಿ ಐಡಿ ತಯಾರಿಸಿ ಅದರ ಮೂಲಕ ಟಿಕೆಟ್ ಮಾರಾಟ ಮಾಡಿ ರೈಲ್ವೆಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ. ಈತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು 563 ನಕಲಿ ಐಡಿ ಸಿದ್ಧಪಡಿಸಿ ರೈಲ್ವೆ ಸಾಫ್ಟ್ವೇರ್ ಹ್ಯಾಕ್ ಮಾಡಲು ಪಾಕಿಸ್ತಾನದ ವೆಬ್ ಬಳಕೆ ಮಾಡಿದ ವಿಚಾರ ಸೈಬರ್ ಪೊಲೀಸರಿಗೆ ಗೊತ್ತಾಗಿದೆ.

ಇದನ್ನೂ ಓದಿ...ಕೆ.ಎ.ಎಸ್ ಅಧಿಕಾರಿ ಸುಧಾ ಮೇಲಿನ ಎಸಿಬಿ ದಾಳಿ ಮುಕ್ತಾಯ: ಹಲವು ದಾಖಲೆಗಳು ಜಪ್ತಿ
ಈತ ತನ್ನ ವ್ಯವಹಾರ ಮಾಡಲು ಡಾರ್ಕ್ ನೆಟ್ ವೆಬ್ ಬಳಸಿ ಸರ್ಕಾರದ ವೆಬ್ ಸೈಟ್ಗಳು, ಬ್ಯಾಂಕ್ ಖಾತೆಗಳ ವಿವರಗಳು ಹಾಗೆ ಇಸ್ರೋ ಬಗ್ಗೆಯೂ ಮಾಹಿತಿ ಕಲೆಹಾಕಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಈತ ಕರ್ನಾಟಕದಲ್ಲೇ ಇದ್ದು, ಅಮೆರಿಕ ಮೂಲದ ಸಿಮ್ ಕಾರ್ಡ್ನಲ್ಲಿ ವಾಟ್ಸಪ್ ನಂಬರ್ ಹೊಂದಿದ್ದ ಎಂದು ತಿಳಿದುಬಂದಿದೆ.
ಜಾರ್ಖಂಡ್ ಮೂಲದ ಗುಲಾಮ್ ಮುಸ್ತಫಾ ನಾಲ್ಕನೇ ತರಗತಿ ಓದಿದ್ದು, ಹ್ಯಾಕ್ ಮೂಲಕ ಗೌಪ್ಯ ಮಾಹಿತಿಗಳನ್ನ ಕದಿಯುತ್ತಿದ್ದ ಹಿನ್ನೆಲೆಯಲ್ಲಿ ಸದ್ಯ ಸಿಬಿಐನಲ್ಲಿ ಎಫ್ಐಆರ್ ದಾಖಲು ಮಾಡಿ ಆರೋಪಿ ಗುಲಾಮ್ ಮುಸ್ತಫಾ ವಿರುದ್ಧ ತೀವ್ರ ತನಿಖೆ ಕೈಗೊಂಡಿದ್ದಾರೆ.