ETV Bharat / state

ಕಾವೇರಿ ನೀರು ಹಂಚಿಕೆ ನಂತರ ಈಗ ಮೇಕೆದಾಟು ಯೋಜನೆಗೂ ತಮಿಳುನಾಡು ಕೊಕ್ಕೆ - ಮೇಕೆದಾಟು ಬಗ್ಗೆ ಸ್ಪೇಷಲ್​ ಆರ್ಟಿಕಲ್​

ಕಾವೇರಿ ನೀರಿನ ಮೇಲೆ ಅಧಿಕಾರ ಸ್ಥಾಪನೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ಪಕ್ಕದ ತಮಿಳುನಾಡು ಸರ್ಕಾರ, ಇದೀಗ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಮೇಕೆದಾಟು ಯೋಜನೆಗೆ ಮತ್ತೊಮ್ಮೆ ಕೊಕ್ಕೆ ಹಾಕಲು ಹೊರಟಿದೆ.

ಮೇಕೆದಾಟು ಯೋಜನೆ
ಮೇಕೆದಾಟು ಯೋಜನೆ
author img

By

Published : Jun 30, 2022, 10:01 PM IST

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಶತಮಾನಗಳ ಇತಿಹಾಸವಿರುವ ವಿವಾದಕ್ಕೆ ನ್ಯಾಯಾಧಿಕರಣ ತೆರೆ ಎಳೆಯುವ ತೀರ್ಪು ಪ್ರಕಟಿಸಿದ್ದರೂ, ವಿವಾದ ಹೊಗೆಯಾಡುತ್ತಲೇ ಇದೆ. ನೀರಿನ ಪಾಲಿನ ವಿಷಯ ಬಿಟ್ಟು ಇದೀಗ ಮೇಕೆದಾಟು ಯೋಜನೆ ಮೂಲಕ ವಿವಾದವನ್ನು ಜೀವಂತವಾಗಿರಿಸಲಾಗುತ್ತಿದೆ. ಉಭಯ ರಾಜ್ಯಗಳ ನಡುವೆ ರಾಜಕೀಯ ಕಾರಣಗಳಿಂದಾಗಿ ವಿವಾದ ಇನ್ನೂ ವಿವಾದವಾಗಿಯೇ ಉಳಿದುಕೊಂಡಿದೆ.

ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಇರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಸ್ವಾತಂತ್ರ್ಯಾ ನಂತರವೂ ಮುಂದುವರೆದಿದೆ. ಮಳೆ ಕೊರತೆಯಾದಾಗಲೆಲ್ಲಾ ರಾಜ್ಯವನ್ನು ಕಾಡುತ್ತಲೇ ಬರುತ್ತಿರುವ ತಮಿಳುನಾಡು ಪದೇ ಪದೇ ರಾಜ್ಯವನ್ನು ಕೆಣಕುತ್ತಲೇ ಬರುತ್ತಿದೆ. ರಾಜಕೀಯ ಕಾರಣಕ್ಕಾಗಿಯೇ ಸಾಕಷ್ಟು ಬಾರಿ ವಿವಾದಕ್ಕೆ ತುಪ್ಪ ಸುರಿಯವ ಕೆಲಸವನ್ನು ತಮಿಳುನಾಡು ಮಾಡಿಕೊಂಡು ಬಂದಿದೆ.

1991ರಲ್ಲಿ ಮಧ್ಯಂತರ ಆದೇಶ: ತಮಿಳುನಾಡು ಸರ್ಕಾರ ಪದೇ ಪದೇ ಕೋರ್ಟ್ ಮೆಟ್ಟಿಲೇರುತ್ತಿದ್ದರಿಂದ ಅಂತಿಮವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 1990ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸಿ ಪ್ರಕಟಣೆ ಹೊರಡಿಸಿತು. ಸಾಕಷ್ಟು ವಿಚಾರಣೆ ನಂತರ ನ್ಯಾಯಮಂಡಳಿ ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳಿಗೆ ನೀರಿನ ಪಾಲು ನಿಗದಿಪಡಿಸಿ, 1991ರ ಜೂನ್​ನಲ್ಲಿ ಮಧ್ಯಂತರ ಆದೇಶ ಹೊರಡಿಸಿತು. ಅದರ ಅನ್ವಯ ಕರ್ನಾಟಕವು ತಮಿಳುನಾಡಿಗೆ ಪ್ರತಿ ವರ್ಷ ಜೂನ್‌ನಿಂದ ಮೇ ತಿಂಗಳವರೆಗೆ ಒಟ್ಟು 205 ಟಿ.ಎಂ.ಸಿ ನೀರನ್ನು ಬಿಡುವಂತೆ ಹಾಗೂ 11.2 ಲಕ್ಷ ಎಕರೆ ನೀರಾವರಿ ಪ್ರದೇಶ ವಿಸ್ತರಣೆ ಮಾಡದಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು.

ಸುಗ್ರೀವಾಜ್ಞೆ ಹೊರಡಿಸಿದ್ದ ಎಸ್.ಬಂಗಾರಪ್ಪ: ಈ ಮಧ್ಯಂತರ ತೀರ್ಪಿನ ವಿರುದ್ಧ ಮೈಸೂರು ಪ್ರಾಂತ್ಯದ ರೈತರು ಬೀದಿಗಿಳಿದರು. ಉಗ್ರ ಹೋರಾಟ ನಡೆಸಿದರು. ಪರಿಸ್ಥಿತಿ ಕೈಮೀರಿದ್ದರಿಂದ ಹೋರಾಟದ ಜ್ವಾಲೆ ಇರುವೆಡೆ ನಿಷೇದಾಜ್ಞೆ ಜಾರಿಗೊಳಿಸಲಾಯಿತು. ಆದರೂ ಹೋರಾಟದ ಕಿಚ್ಚು ಹೆಚ್ಚಿದ ಪರಿಣಾಮ ಅಂದು ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಮಧ್ಯಂತರ ತೀರ್ಪು ವಿರೋಧಿಸಿ ನಮ್ಮ ಪಾಲಿನ ನೀರು ನಾವು ಬಳಸಿಕೊಳ್ಳುತ್ತೇವೆ. ಯಾರಿಗೂ ಬಿಡುವುದಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿ ರಾಜ್ಯದ ಪರ ಕೆಚ್ಚೆದೆ ಪ್ರದರ್ಶಿಸಿದರು.

2007 ರಲ್ಲಿ ಅಂತಿಮ ತೀರ್ಪು ಪ್ರಕಟ: ಆದರೆ ಸುಪ್ರೀಂಕೋರ್ಟ್‌ನಲ್ಲಿ ಸುಗ್ರೀವಾಜ್ಞೆ ಅಸಿಂಧು ಎಂದು ತೀರ್ಪು ಬಂದಿದ್ದರಿಂದ ರಾಜ್ಯಕ್ಕೆ ಮತ್ತೆ ದೊಡ್ಡ ಹಿನ್ನಡೆಯಾಯಿತು. ನಂತರ ಸುದೀರ್ಘ 9 ವರ್ಷಗಳ ಕಾನೂನು ಹೋರಾಟದ ಬಳಿಕ 1892 ಮತ್ತು 1924 ರ ಮೈಸೂರು, ಮದ್ರಾಸ್ ನಡುವಿನ ಒಪ್ಪಂದಗಳನ್ನು ಮಾನ್ಯವೆಂದು ಪರಿಗಣಿಸಿ 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿತು.

ಅದರಂತೆ ಕಾವೇರಿ ಕೊಳ್ಳದ ಒಟ್ಟಾರೆ ನೀರಿನ ಪ್ರಮಾಣ 740 ಟಿಎಂಸಿ ಅಡಿ ಎಂದು ತೀರ್ಮಾನಿಸಿ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪಾಂಡಿಚೇರಿಗೆ 7 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಇದರ ಜೊತೆ ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕು ಎಂದು ನಿರ್ದೇಶಿಸಿ ಐ ತೀರ್ಪು ಪ್ರಕಟಿಸಿತು. ಮಧ್ಯಂತರ ತೀರ್ಪಿನಲ್ಲಿ ಮಿತಿಗೊಳಿಸಿದ್ದ 11.2 ಲಕ್ಷ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ವಿಸ್ತರಿಸಲು ಸಮ್ಮತಿಸಿತು.

ಕೋರ್ಟ್ ಮೆಟ್ಟಿಲೇರಿದ್ದ 4 ರಾಜ್ಯಗಳು: ಈ ತೀರ್ಪು ಪ್ರಶ್ನಿಸಿ ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಅಂದಿನ ಸಿಜೆಐ ದೀಪಕ್ ಮಿಶ್ರಾ ಅವರು ನ್ಯಾಯಾಧಿಕರಣ ಕೊಟ್ಟಿದ್ದ ತೀರ್ಪಿನಲ್ಲಿ ಕೆಲ ಮಾರ್ಪಾಡು ಮಾಡಿ ತಮ್ಮ ತೀರ್ಪು ನೀಡಿದ್ದರು. ಅದರ ಪ್ರಕಾರ ಕರ್ನಾಟಕಕ್ಕೆ ಐ ತೀರ್ಪಿನಲ್ಲಿ ಹಂಚಿಕೆಯಾಗಿದ್ದ, 270 ಟಿಎಂಸಿ ಅಡಿ ಜೊತೆ 14.75 ಟಿಎಂಸಿ ಅಡಿ ಹೆಚ್ಚುವರಿ ಮಂಜೂರು ಮಾಡಿ 284.75 ಟಿಎಂಸಿ ಅಡಿಗೆ ಪುನರ್ ನಿಗದಿಪಡಿಸಲಾಯಿತು. ತಮಿಳುನಾಡಿಗೆ ಪ್ರತಿ ವರ್ಷ ಹರಿಸಬೇಕಿದ್ದ 192 ಟಿಎಂಸಿ ಅಡಿ ನೀರನ್ನು 177.25 ಟಿಎಂಸಿ ಅಡಿಗೆ ಇಳಿಕೆ ಮಾಡಲಾಯಿತು.

ಇಷ್ಟು ಮಾತ್ರವಲ್ಲದೆ, ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ನಡುವೆ ನೀರು ಹಂಚಿಕೆಯ ಮೇಲ್ವಿಚಾರಣೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸುಪ್ರೀಂಕೋರ್ಟ್ ತೀರ್ಪಿನಂತೆ ರಚಿಸಲಾಯಿತು. ಜೊತೆಗೆ 2013ರಲ್ಲಿ ಕೇಂದ್ರ ಸರ್ಕಾರವು ಕಾವೇರಿ ಆಡಳಿತ ಮಂಡಳಿಯನ್ನು ಅಂತಿಮ ತೀರ್ಪಿನ ಜೊತೆ ಗೆಜೆಟ್ ಪ್ರಕಟಣೆಯಲ್ಲಿ ರಚಿಸಿ ಆದೇಶ ಮಾಡಿತು.

ಎರಡು ತಿಂಗಳಿಗೊಮ್ಮೆ ಸಭೆ: ಇದರ ಅನ್ವಯ ನೀರು ನಿಯಂತ್ರಣ ಸಮಿತಿಯನ್ನು ರಚಿಸಲಾಯಿತು. ನೀರು ನಿರ್ವಹಣಾ ಪ್ರಾಧಿಕಾರ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ನೀರು ಹಂಚಿಕೆಯನ್ನು ಪರಿಶೀಲನೆ ಮಾಡುವ ಜವಾಬ್ದಾರಿ ನಿರ್ವಹಿಸಲಿದ್ದು, ಸಭೆಯಲ್ಲಿ ನಾಲ್ಕು ರಾಜ್ಯಗಳ ಪ್ರತಿನಿಧಿಗಳು, ಕೃಷಿ, ತೋಟಗಾರಿಕೆ, ನೀರಾವರಿ ತಜ್ಞರು ಭಾಗಿಯಾಗಲಿದ್ದಾರೆ. ಇಲ್ಲಿ ನೀರು ಹಂಚಿಕೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೆಆರ್​ಎಸ್​​, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಿಂದ ನಾಲೆಗಳಿಗೆ ಯಾವಾಗ ನೀರು ಹರಿಸಬೇಕು ಎಂದು ಪ್ರಾಧಿಕಾರ ನಿರ್ಧರಿಸಲಿದೆ. ಆದರೆ ಅದಕ್ಕೆ ಮನವರಿಕೆ ಮಾಡಿಕೊಡಬೇಕಿರುವುದು ರಾಜ್ಯದ ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಹಾಗಾಗಿ ಈಗ ರಾಜ್ಯದ ಜಲಾಶಯಗಳ ನೀರಿನ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲದಂತಾಗಿದ್ದು, ನಾಲೆಗಳಿಗೆ ನೀರು ಹರಿಸುವುದು, ನದಿಗೆ ನೀರು ಹರಿಸುವುದು ಎಲ್ಲವೂ ನೀರು ನಿಯಂತ್ರಣ ಸಮಿತಿ ಉಸ್ತುವಾರಿಯಲ್ಲಿ ನಡೆಯಲಿದೆ. ಸದ್ಯ ಸಾಮಾನ್ಯ ಮಳೆ ವರ್ಷದಲ್ಲಿ ನೀರಿನ ಹಂಚಿಕೆ ಪ್ರಮಾಣ ಐ ತೀರ್ಪಿನಂತೆ ನಿಗದಿಯಾಗಿದ್ದು, ಕಡಿಮೆ ಮಳೆ ಬಿದ್ದಾಗ ಕೇಂದ್ರದ ಕಾವೇರಿ ಸಂಕಷ್ಟ ನಿವಾರಣಾ ಸಮಿತಿ ಸಮಸ್ಯೆ ಬಗೆಹರಿಸಲಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ: ಈವರೆಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಲೇ ಬಂದಿದ್ದ ತಮಿಳುನಾಡು ಇದೀಗ ರಾಜ್ಯದ ಮೇಕೆದಾಟು ಯೋಜನೆಗೂ ಅಡ್ಡಗಾಲು ಹಾಕಿದೆ. ಕಾವೇರಿ ನದಿ ನೀರು ಹಂಚಿಕೆ ಐತೀರ್ಪು ನಂತರ ತನ್ನ ಪಾಲಿಗೆ ಹಂಚಿಕೆಯಾದ ನೀರಿನಲ್ಲಿಯೇ ನಿರ್ಮಿಸಲು ಹೊರಟಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

ಬಹೂಪಯೋಗಿ ಯೋಜನೆ ರೂಪಿಸಿದ ಕರ್ನಾಟಕ: ಅಧಿಕ ಮಳೆ ವರ್ಷದಲ್ಲಿ ಹೆಚ್ಚುವರಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಈ ರೀತಿ ಹೆಚ್ಚುವರಿಯಾಗಿ ಉಳಿಯುವ ನೀರನ್ನು ತಮಿಳುನಾಡಿನ ಗಡಿ ಭಾಗದಲ್ಲಿ ಮೇಕೆದಾಟಿನಲ್ಲಿ ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯಡಿ ನೀರು ಸಂಗ್ರಹ ಮಾಡಿ ಬೆಂಗಳೂರಿನ ಮತ್ತಷ್ಟು ಪ್ರದೇಶ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೂ ಕುಡಿಯುವ ನೀರು ಒದಗಿಸುವ ಮತ್ತು 400 ಮೆಗಾವ್ಯಾಟ್‌ ಜಲ ವಿದ್ಯುತ್‌ ಉತ್ಪಾದಿಸುವ ಬಹೂಪಯೋಗಿ ಯೋಜನೆಯನ್ನು ಕರ್ನಾಟಕ ರೂಪಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ; ಮೇಕೆದಾಟು ಯೋಜನೆಯ ಕಾಲಾನುಕ್ರಮ ಪ್ರಗತಿ ಹೇಗಿದೆ ನೋಡಿ

ಆದರೆ ಇದಕ್ಕೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಪತ್ರವನ್ನು ಬರೆದು, ಮೇಕೆದಾಟು ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡದಂತೆ ಮನವಿ ಮಾಡಿದೆ. ನ್ಯಾಯಾಧಿಕರಣದ ತೀರ್ಪಿಗೆ ವ್ಯತಿರಿಕ್ತವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಮುಂದಾಗಿದೆ ಎಂದು ಆರೋಪಿಸಿ ಯೋಜನೆಗೆ ಅಡ್ಡಗಾಲು ಹಾಕಿ ಕುಳಿತಿದೆ.

ಕಾರಜೋಳ ಅಸಮಾಧಾನ: ತಮಿಳುನಾಡು ಆಕ್ಷೇಪಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದು, ಕಾವೇರಿ ನದಿ ನೀರು ಹಂಚಿಕೆಯಂತೆ ಡಿಪಿಆರ್ ಮಾಡಿಸಿದ್ದೇವೆಯೇ ಹೊರತು ಹೆಚ್ಚುವರಿ ನೀರಿನ ಬಳಕೆಗೆ ನಾವು ಮುಂದಾಗಿಲ್ಲ. ನೆರೆ ರಾಜ್ಯಗಳ ನೀರಾವರಿ ಯೋಜನೆಗೆ ಅಡ್ಡಿ ಮಾಡುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಗೆ ನಾವು ಬೆಲೆ ಕೊಡಬೇಕಾಗುತ್ತದೆ. ನಮ್ಮ ಡಿಪಿಆರ್​ಗೆ ಕಾನೂನಾತ್ಮಕ ಅನುಮೋದನೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಅಂತಿಮಗೊಂಡರೂ ಮೇಕೆದಾಟು ಯೋಜನೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಜಲ ವಿವಾದವನ್ನು ಜೀವಂತವಾಗಿರುವಂತೆ ಮಾಡಿದೆ. ರಾಜ್ಯದ ನೀರಿನ ಹಕ್ಕಿನ ಅಡಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ಯೋಜನೆ ಡಿಪಿಆರ್​ಗೆ ಗ್ರೀನ್ ಸಿಗ್ನಲ್ ಕೊಡಲಿದೆಯಾ ಅಥವಾ ತಮಿಳುನಾಡು ವಾದವನ್ನು ಒಪ್ಪಲಿದೆಯಾ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.