ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರ ನೇಮಕ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಿಎಟಿ ವಜಾಗೊಳಿಸಿದೆ.
ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಶನಿವಾರ ತೀರ್ಪು ನೀಡಿತ್ತು. ನ್ಯಾಯ ಮಂಡಳಿ ತೀರ್ಪಿನ ಪ್ರತಿ ಲಭ್ಯವಾಗಿದ್ದು, ಡಿಜಿ ನೀಲಮಣಿ ರಾಜು ನೇಮಕ ಸರಿಯಿದೆ. ರಾಜ್ಯ ಸರ್ಕಾರ ಹಿರಿತನದ ಮೇಲೆ ಹುದ್ದೆ ನೀಡಿದೆ. ಡಿಜಿ ಸೇರಿದಂತೆ ಇತರ ಅಧಿಕಾರಿಗಳ ದಾಖಲೆ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ನೀಲಮಣಿ ಅವರ ನೇಮಕ ನ್ಯಾಯ ಸಮತ್ಮವಾಗಿದೆ. ಅಲ್ಲದೆ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ನೀಲಮಣಿ ನೇಮಕ ವಿರೋಧಿಸಿ ಸಿಎಟಿಗೆ ಅರ್ಜಿ ಹಾಕಿದ್ದಾಗಿನಿಂದ ಹಾಲಿ ಅಗ್ನಿಶಾಮಕ ಇಲಾಖೆ ಡಿಜಿ ಎಂ.ಎನ್.ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಇವೆಲ್ಲ ಕಾರಣಗಳಿಂದಾಗಿ ಸಂಪೂರ್ಣ ಪರಿಶೀಲಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.