ETV Bharat / state

ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಲು ಅನುಮತಿ - ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ

ರಜೆಯ ಮೇಲಿರುವ ಸರ್ಕಾರಿ ನೌಕರ ಕಚೇರಿಯ ತುರ್ತು ಕೆಲಸಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ದೂರವಾಣಿ, ಆನ್‌ಲೈನ್ ಮೂಲಕ ನೀಡುವ ಸೂಚನೆಗಳನ್ನು ಪಾಲಿಸುವುದಕ್ಕೆ ಬದ್ಧನಾಗಿರಬೇಕು ಎಂದು ತಿಳಿಸಲಾಗಿದೆ..

vidhanasoudha
ವಿಧಾನಸೌಧ
author img

By

Published : Jan 28, 2022, 6:40 PM IST

ಬೆಂಗಳೂರು : ಕೋವಿಡ್ ಸೋಂಕಿಗೊಳಗಾದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್-19 ಸೋಂಕಿತ ರಾಜ್ಯ ಸರ್ಕಾರಿ ನೌಕರರಿಗೆ ಸಂದರ್ಭಾನುಸಾರ ವಿಶೇಷ ಸಾಂದರ್ಭಿಕ ರಜೆಯನ್ನು ಸಂಬಂಧಪಟ್ಟ ಸಕ್ಷಮ ಪಾಧಿಕಾರ ಮಂಜೂರು ಮಾಡಬಹುದಾಗಿದೆ.

ಸರ್ಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್-19 ಸೋಂಕಿಗೊಳಗಾದರೆ ಹಾಗೂ ಸರ್ಕಾರಿ ನೌಕರನು ವಾಸಿಸುವ ಪ್ರದೇಶವನ್ನು ಕಂಟೈನ್​ಮೆಂಟ್​ ಪ್ರದೇಶವೆಂದು ಘೋಷಿಸಿ ಸಾರ್ವಜನಿಕ ಸಂಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿದ್ದಲ್ಲಿ ಅಂತಹ ಸರ್ಕಾರಿ ನೌಕರನಿಗೆ ಗರಿಷ್ಠ 7 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು ಎಂದು ಸೂಚಿಸಿದೆ.

ರಜೆಯ ಮೇಲಿರುವ ಸರ್ಕಾರಿ ನೌಕರ ಕಚೇರಿಯ ತುರ್ತು ಕೆಲಸಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ದೂರವಾಣಿ, ಆನ್‌ಲೈನ್ ಮೂಲಕ ನೀಡುವ ಸೂಚನೆಗಳನ್ನು ಪಾಲಿಸುವುದಕ್ಕೆ ಬದ್ಧನಾಗಿರಬೇಕು ಎಂದು ತಿಳಿಸಲಾಗಿದೆ.

ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರು ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಶಾಸಕ ಶ್ರೀನಿವಾಸ್​ ಅಸಮಾಧಾನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.