ಬೆಂಗಳೂರು: ಜಾತಿ ಆಧಾರದ ಮೇಲೆ ಕೋವಿಡ್ ಲಸಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರಂ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ನೀಡಲಾಗಿದೆ.
ಇದನ್ನೂ ಓದಿ: ಅರ್ಚಕರು ಮನುಷ್ಯರಲ್ವಾ, ಲಸಿಕೆ ಕೊಟ್ಟರೆ ತಪ್ಪೇನು: ಡಿಸಿಎಂ ಸಮರ್ಥನೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾರಿಂದ ದೂರು ದಾಖಲಾಗಿದೆ. ನಿನ್ನೆ ಮಲ್ಲೇಶ್ವರಂನ ಲಯನ್ಸ್ ಕ್ಲಬ್ ಆವರಣದಲ್ಲಿ ನಡೆದಿದ್ದ ವ್ಯಾಕ್ಸಿನೇಷನ್ ಡ್ರೈವ್ ಉದ್ಘಾಟಿಸಿದ್ದ ಡಿಸಿಎಂ ಅಶ್ವತ್ಥ ನಾರಾಯಣ್ ಕಾರ್ಯಕ್ರಮದಲ್ಲಿ ಸರತಿ ಸಾಲಿನಲ್ಲಿ ನಿಂತ ಕೆಲವರನ್ನ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ತಡೆದ ಆರೋಪ ಕೇಳಿ ಬಂದಿತ್ತು.
![Caste-based vaccine distribution; Complaint filed by Block Congress](https://etvbharatimages.akamaized.net/etvbharat/prod-images/kn-bng-06-dcm-vaccination-drive-programme-fight-from-block-congress-malleshwaram-police-station-ka100032_02062021174457_0206f_1622636097_1088.jpg)
ಇಲ್ಲಿ ವ್ಯಾಕ್ಸಿನೇಷನ್ ನೀಡುವುದಿಲ್ಲ, ಕಾರ್ಪೋರೇಷನ್ ಆಸ್ಪತ್ರೆಗೆ ಹೋಗಲು ಸೂಚಿಸಿದ ಆರೋಪ ಕೇಳಿ ಬಂದಿತ್ತು. ವಿಡಿಯೋ ಚಿತ್ರೀಕರಿಸಲು ಹೋದಾಗ ಮೊಬೈಲ್ ಕಸಿದು ಗಲಾಟೆ ಕೂಡ ಮಾಡಲಾಗಿತ್ತು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೈ ನಾಯಕರು ಮನವಿ ಮಾಡಿದ್ದಾರೆ.
![Caste-based vaccine distribution; Complaint filed by Block Congress](https://etvbharatimages.akamaized.net/etvbharat/prod-images/kn-bng-06-dcm-vaccination-drive-programme-fight-from-block-congress-malleshwaram-police-station-ka100032_02062021174457_0206f_1622636097_699.jpg)