ಬೆಂಗಳೂರು: ಅನುಮತಿ ಪಡೆಯದೇ ಕ್ಲಬ್‌ನಲ್ಲಿ ಕೆಲ ಹಿಂದಿ ಹಾಡುಗಳನ್ನು ಹಾಕಿದ್ದಕ್ಕೆ ಇಂದಿರಾ ನಗರ ಕ್ಲಬ್ ಅಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ, ಕಾರ್ಯದರ್ಶಿ ನಾಗೇಂದ್ರ, ಜನರಲ್ ಮ್ಯಾನೇಜರ್ ಶ್ಯಾಮ್ ಸುಂದರ್ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈ ಮೂಲದ ನೋವೆಕ್ಸ್ ಕಮ್ಯುನಿಕೇಶನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ಪ್ರತಿನಿಧಿ ಸಂತೋಷ್ ಎಂಬವರು ನೀಡಿದ ದೂರಿನನ್ವಯ ಇಂದಿರಾನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನೋವೆಕ್ಸ್ ಕಮ್ಯುನಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹಿಂದಿಯ ಬಾರ್ ಬಾರ್ ದೇಖೋ ಸಿನಿಮಾದ ಕಾಲಾ ಚಸ್ಮಾ, ಖಳನಾಯಕ್ ಚಿತ್ರದ ಚೋಲಿ ಕೆ ಪೀಚೆ, ಫ್ರಾಡ್ ಸೈಯ್ಯಾ ಚಿತ್ರದ ಚಮ್ಮಾ ಚಮ್ಮಾ, ಆರ್.ರಾಜ್‍ಕುಮಾರ್ ಚಿತ್ರದ ಗಂಧೀ ಬಾತ್ ಹಾಡುಗಳನ್ನು ಯಾವುದೇ ಆಡಿಯೋ, ಸಭೆ ಸಮಾರಂಭ/ ರೆಸ್ಟೋರೆಂಟ್/ ಕ್ಲಬ್ / ಡಿಸ್ಕೋಥೆಕ್ / ಈವೆಂಟ್ ಜಾಕಿ ಮಾಲ್ಗಳಲ್ಲಿ ಹಾಡುವ, ಅಥವಾ ಪ್ರಸಾರ ಮಾಡುವ ಅಧಿಕೃತ ಹಕ್ಕನ್ನು ಈರೋಸ್ ಕಂಪನಿಯಿಂದ ಪಡೆದಿದೆ. ಆದರೆ 2019ರ ಮಾರ್ಚ್ 21ರಂದು ಇಂದಿರಾನಗರದ ಕ್ಲಬ್‌ನಲ್ಲಿ ನಡೆದಿದ್ದ ಮಹೋಲಿ ಎಕ್ಸ್ ಡಿವೈನ್ 2019 ಕಾರ್ಯಕ್ರಮದಲ್ಲಿ ಈ ಹಾಡುಗಳನ್ನು ಪ್ರಸಾರ ಮಾಡಲಾಗಿದ್ದು, ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಕ್ಕಿ ಯಾದವ್ ಹತ್ಯೆ ಪ್ರಕರಣ: ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಐವರ ಬಂಧನ
ಇದನ್ನೂ ಓದಿ: ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್