ETV Bharat / state

ವಿಕ್ಟೋರಿಯಾ ಆಸ್ಪತ್ರೆಯ ಹೆಸರಲ್ಲಿ ನಕಲಿ ವಿಡಿಯೋ: ಕಿಡಿಗೇಡಿಗಳ ವಿರುದ್ಧ ಕೇಸ್‌ - False news against Victoria Hospital

ಮಾಸ್ಕ್​ ಹಾಕಿಕೊಂಡಿರುವ ನೂರಾರು ಜನರು ಗುಂಪು ಸೇರಿರುವ ವಿಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಿಕ್ಟೋರಿಯ ಆಸ್ಪತ್ರೆಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಆ ವಿಡಿಯೋ ವಿಕ್ಟೋರಿಯ ಆಸ್ಪತ್ರೆಯದ್ದಲ್ಲ ಎಂದು ತಿಳಿದು ಬಂದಿದೆ.

False news against Victoria Hospital
ವಿಕ್ಟೋರಿಯಾ ಆಸ್ಪತ್ರೆಯ ಹೆಸರಲ್ಲಿ ನಕಲಿ ವಿಡಿಯೋ ವೈರಲ್
author img

By

Published : Jul 19, 2020, 4:28 PM IST

ಬೆಂಗಳೂರು : ನಗರದಲ್ಲಿ ಕೊರೊನಾ ಸೇಂಕಿತರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲ, ವೈದ್ಯರ ಕೊರತೆಯಿದೆ, ಆ್ಯಂಬುಲೆನ್ಸ್​ ಇಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಪ್ರತೀ ದಿನ ವರದಿಯಾಗುತ್ತಲೇ ಇವೆ. ಈ ಮಧ್ಯೆ ವಿಕ್ಟೋರಿಯ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು.

ಮಾಸ್ಕ್​ ಹಾಕಿಕೊಂಡಿರುವ ನೂರಾರು ಜನರು ಗುಂಪು ಸೇರಿರುವ ವಿಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಿಕ್ಟೋರಿಯ ಆಸ್ಪತ್ರೆಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ವೈರಲಾಗಿದ್ದ ವಿಡಿಯೋ

ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಿಸಿಬಿಯ ಸೈಬರ್​ ಕ್ರೈಂ ಅಧಿಕಾರಿಗಳು ಪರೀಶೀಲನೆ ನಡೆಸಿದಾಗ ಆ ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋದ ಕುರಿತು ಸುಳ್ಳು ಸುದ್ದಿ ಹಬ್ಬಲಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸುಳ್ಳು ಸುದ್ದಿ ಹಬ್ಬಿರುವವರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.