ETV Bharat / state

ಮಂಗಳೂರು ಗೋಲಿಬಾರ್ ಪ್ರಕರಣ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ - ಮಂಗಳೂರು ಗೋಲಿಬಾರ್ ವಿರುದ್ಧ ಜಕೇಸ್​

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ ಹಾಗೂ ಹಿಂಸಾಚಾರದ ಕುರಿತು ವರದಿ ನೀಡುವಂತೆ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಹೈಕೋರ್ಟ್ ಸೂಚನೆ
ಹೈಕೋರ್ಟ್ ಸೂಚನೆ
author img

By

Published : Jan 14, 2020, 9:11 PM IST

ಬೆಂಗಳೂರು: ಮಂಗಳೂರು ಗೋಲಿಬಾರ್ ಕುರಿತು ನ್ಯಾಯಾಂಗ ತನಿಖೆ ಮಾಡಬೇಕೆಂದು ಕೋರಿ ಜೆಡಿಎಸ್ ‌ಮುಖಂಡ ಮಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು.

ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಕಿಚ್ಚು ಹೆಚ್ಚಾಗಿ, ಪೊಲೀಸರು ಗೋಲಿಬಾರ್ ಮಾಡಿದಾಗ ಇಬ್ಬರು ಅಮಾಯಕರು ಮೃತಪಟ್ಟಿದ್ದರು. ನಂತರ ಮಂಗಳೂರಿನಲ್ಲಿ ದೊಡ್ಡ ಗಲಭೆ ಸೃಷ್ಟಿಯಾಗಿತ್ತು. ಈ ಕುರಿತಾದ ದೃಶ್ಯ ಕೂಡ ವೈರಲ್ ಆಗಿದೆ. ಇದನ್ನು ನ್ಯಾಯಂಗ ತನಿಖೆ ಮಾಡಬೇಕೆಂದು ತಿಳಿಸಿದರು. ಇದನ್ನು ಆಲಿಸಿದ ನ್ಯಾಯಾಲಯ ಇದೇ ತಿಂಗಳ 28ನೇ ತಾರೀಖಿನ ಒಳಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿಕೆ ಮಾಡಿದೆ.

ಏನಿದು ಪ್ರಕರಣ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಹಾಗಾಗಿ ರಾಜ್ಯದಲ್ಲಿ ಸೇರಿದಂತೆ ಹಲವೆಡೆ 144ಸೆಕ್ಷನ್ ಕೂಡ ಜಾರಿಗೊಳಿಸಲಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ದೊಡ್ಡ ಗಲಭೆ ಉಂಟಾಗಿ ಕರ್ಫ್ಯೂ ಜಾರಿ ಇದ್ದರೂ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಪೊಲಿಸರು ಗೋಲಿಬಾರ್ ಮಾಡಿದಾಗ ಇಬ್ಬರು ಬಲಿಯಾಗಿದ್ದರು.

Intro:ಪೊಲೀಸ್ ಗೋಲಿಬಾರ್ ಪ್ರಕರಣ;-
ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ ಹಾಗೂ ಹಿಂಸಾಚಾರದ ಕುರಿತು ವರದಿ ನೀಡುವಂತೆ ಹೈಕೋರ್ಟ್ ರಾಜ್ಯಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಂಗ ತನಿಖೆ ಮಾಡಬೇಕೆಂದು ಕೋರಿ ಜೆಡಿಎಸ್ ‌ಮುಖಂಡ ಮಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.

ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಕಿಚ್ವು ಹೆಚ್ಚಾಗಿ ಪೊಲೀಸರು ಗೋಲಿಬಾರ್ ಮಾಡಿದಾಗ ಇಬ್ಬರು ಅಮಾಯಕರು ಮೃತಪಟ್ಟಿದ್ದರು. ನಂತ್ರ ಮಂಗಳೂರಿನಲ್ಲಿ ದೊಡ್ಡ ಗಲಭೆ ಸೃಷ್ಟಿಯಾಗಿತ್ತು. ಇದರ ಬಗ್ಗೆ ದೃಶ್ಯ ಕೂಡ ವೈರಲ್ ಆಗಿದೆ ಇದನ್ನ ನ್ಯಾಯಂಗ ತನಿಖೆ ಮಾಡಬೇಕೆಂದು
ತಿಳಿಸಿದರು.

ಇದನ್ನ ಆಲಿಸಿದ ನ್ಯಾಯಾಲಯ ಇದೇ ತಿಂಗಳ 28 ತಾರೀಖಿನ ಒಳಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನ ಫೆಬ್ರವರಿ 5ಕ್ಕೆ ಮುಂದೂಡಿಕೆ ಮಾಡಿದೆ

ಏನಿದು ಪ್ರಕರಣ;

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಇದರ ಬಗ್ಗೆ ಕೂಗು ಹಾಗೂ ಪ್ರತಿಭಟನೆ ನಡೆಸಲಾಗಿತ್ತು. ಹಾಗೆ ರಾಜ್ಯದಲ್ಲಿ 144ಸೆಕ್ಷನ್ ಕೂಡ ಜಾರಿಗೊಳಿಸಲಾಗಿತ್ತು. ಆದರೆ ಇದೇ ಸಂಧರ್ಭದಲ್ಲಿ ಮಂಗಳೂರಿನಲ್ಲಿ ದೊಡ್ಡ ಗಲಭೆ ಉಂಟಾಗಿ ಕರ್ಪೂ ಜಾರಿ ಇದ್ರು ಪ್ರತಿಭಟನೆ ನಡೆಸಿದ್ರು. ಹೀಗಾಗಿ ಪೊಲಿಸರು ಗೋಲಿಬಾರ್ ಮಾಡಿದಾಗ ಇಬ್ಬರು ಬಲಿಯಾಗಿದ್ರು.
Body:KN_bNG_12_HIGCOURT_7204498Conclusion:KN_bNG_12_HIGCOURT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.