ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವಿಗೀಡಾಗಿದ್ದು, 12 ಜನ ಗಾಯಗೊಂಡಿರೋ ಘಟನೆ ಯಶವಂತಪುರದ ಆರ್ಎಂಸಿ ಯಾರ್ಡ್ ಬಳಿ ನಡೆದಿದೆ.
ಬೆಳಗಿನ ಜಾವ 4:40ರ ವೇಳೆಗೆ ಘಟನೆ ನಡೆದಿದ್ದು, ಕಟ್ಟಡದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ರಾಹುಲ್ ಹಾಗೂ ಬಿಹಾರ ಮೂಲದ ರಾಕೇಶ್ ಎಂಬುವರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 12 ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತದೇಹಗಳನ್ನ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಆರ್ಎಂಸಿ ಯಾರ್ಡ್ ಪೊಲೀಸರು ಭೇಟಿ ಕೊಟ್ಟು ಸ್ಥಳದ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನೂ ಕೂಡ ಕೆಲವರು ಕಟ್ಟಡದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕರ ಬಗ್ಗೆ ತನಿಖೆ ಮುಂದುವರೆದಿದೆ.
ಗಾಯಾಳುಗಳು :
ಒಂಪ್ರಕಾಶ್ (21) ಬಿಹಾರ, ದೇವರಾಜು (21) ಯಾದಗಿರಿ, ಹನುಮಂತ (21) ಯಾದಗಿರಿ, ಮಲ್ಲಿಕಾರ್ಜುನ (20) ಯಾದಗಿರಿ, ದೊಡ್ಡಪ್ಪ (21) ಯಾದಗಿರಿ, ಸಿದ್ದಪ್ಪ (23) ಯಾದಗಿರಿ, ಗಿರಿಜ್ (35) ಪಶ್ಚಿಮ ಬಂಗಾಳ, ಬ್ದುಲ್ ಹಮೀದ್ ಶೇಖ್ (40) ಪಶ್ಚಿಮ ಬಂಗಾಳ, ಚೋಟು ಬುಯ್ಯ (24) ಪಶ್ಚಿಮ ಬಂಗಾಳ, ಶಾಮ್ ಗೋಸ್ವಾಮಿ (40) ಪಶ್ಚಿಮ ಬಂಗಾಳ, ನಿಯಾಜುಲ್ ಶೇಕ್ (30) ಪಶ್ಚಿಮ ಬಂಗಾಳ, ನಾಸಿರ್ ಶೇಕ್ (32) ಪಶ್ಚಿಮ ಬಂಗಾಳ.
ಮೃತರು:
ಪಶ್ಚಿಮ ಬಂಗಾಳ ಮೂಲದ ರಾಹುಲ್ ಗೋಸ್ವಾಮಿ, ಬಿಹಾರ ಮೂಲದ ರಾಕೇಶ್ ಮೃತ ದುರ್ದೈವಿಗಳು.