ETV Bharat / state

ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳಲ್ಲಿ ಗ್ರಾಹಕರಿಲ್ಲದೇ ವ್ಯಾಪಾರ ಕುಸಿತ - covid effects

ಕೋವಿಡ್​, ಲಾಕ್​ಡೌನ್​ನಿಂದ ನಿಗದಿತ ಸಂಖ್ಯೆಯ ರೈಲುಗಳಷ್ಟೇ ಸೇವೆ ಒದಗಿಸುತ್ತಿವೆ. ಇರುವ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ತೀರಾ ಇಳಿದಿದೆ. ಪರಿಣಾಮ ವ್ಯಾಪಾರವಿಲ್ಲದೇ ಕ್ಯಾಂಟೀನ್​ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

covid effects on railway station canteens
ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳ ಮೇಲೆ ಕೋವಿಡ್​ ಎಫೆಕ್ಟ್​
author img

By

Published : Jun 10, 2021, 10:26 AM IST

ಬೆಂಗಳೂರು: ರೂಪಾಂತರಗೊಂಡ ಮಹಾಮಾರಿ ಕೋವಿಡ್‌ ಆರ್ಭಟ ನಿಲ್ಲಿಸಲು ರಾಜ್ಯದಲ್ಲಿ ಲಾಕ್​ಡೌನ್​​ ಜಾರಿ ಮಾಡಲಾಯ್ತು. ಈ ಸಂದರ್ಭದಲ್ಲಿ ರೈಲು ಸೇವೆ ಇದ್ದರೂ, ಮೊದಲಿನಷ್ಟು ರೈಲುಗಳ ಸಂಚಾರವಿಲ್ಲ. ಇನ್ನು ಇರುವ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಕಡಿಮೆ ಪ್ರಯಾಣಿಕರಿಂದ ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​ಗಳು ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ಪ್ರಯಾಣಿಸುವ ಕೆಲವೇ ಕೆಲವು ಪ್ರಯಾಣಿಕರು ಕೂಡ ಕ್ಯಾಂಟೀನ್​​ಗಳತ್ತ ಮುಖಮಾಡದೇ ಕ್ಯಾಂಟೀನ್​ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳ ಮೇಲೆ ಕೋವಿಡ್​ ಎಫೆಕ್ಟ್​​

ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ತುಂಬಿ ತುಳುಕುತ್ತಿತ್ತು. ಇಲ್ಲಿರುವ ಕ್ಯಾಂಟೀನ್​​ಗಳ ಎದುರು ಪ್ರಯಾಣಿಕರು ಮುಗಿ ಬೀಳುತ್ತಿದ್ದರು. ಇರುವ ಕಡಿಮೆ ಕಾಲಾವಕಾಶದಲ್ಲಿ ತಮಗೆ ಬೇಕಾದ ತಿಂಡಿ ತಿನಿಸು, ಪಾನೀಯಗಳನ್ನು ಖರೀದಿಸುತ್ತಿದ್ದರು. ಇದ್ರಿಂದ ಕ್ಯಾಂಟೀನ್​ಗಳಲ್ಲಿ ಉತ್ತಮ ವ್ಯಾಪಾರವಾಗಿ, ಉತ್ತಮ ಆದಾಯ ಬರುತ್ತಿತ್ತು. ಆದ್ರೀಗ ಕೆಲವೇ ಕೆಲವು ರೈಲುಗಳು ಸಂಚರಿಸುತ್ತಿವೆ. ಪ್ರತೀ ರೈಲಿನಲ್ಲಿ 25 ರಿಂದ 50 ಜನರು ಬರುತ್ತಿದ್ದಾರೆ. ಇದರಿಂದ ಇಲ್ಲಿನ ಕ್ಯಾಂಟೀನ್​ಗಳು ವ್ಯಾಪಾರವಿಲ್ಲದೇ ನಷ್ಟಕ್ಕೆ ಸಿಲುಕಿವೆ.

ಇದನ್ನೂ ಓದಿ: ಪ್ರಯಾಣಿಕರ ಸಂಖ್ಯೆ ಇಳಿಮುಖ: ತುಮಕೂರು ರೈಲ್ವೆ ನಿಲ್ದಾಣದ ಕ್ಯಾಂಟೀನ್​ಗಳಲ್ಲಿ ವ್ಯಾಪಾರ ಕುಂಠಿತ!

"ಕಳೆದ 2 ವರ್ಷದಿಂದ ಕ್ಯಾಂಟೀನ್ ನಡೆಸುತ್ತಿದ್ದೇವೆ. ಲಾಕ್​ಡೌನ್ ಹಾಗೂ ಕೋವಿಡ್ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿವೆ. ಇದಲ್ಲದೇ ಈಗ ಪ್ರಯಾಣಿಕರಿಗೆ ಕೆಲ ಸೇವಾ ಸಂಸ್ಥೆಗಳು ಉಚಿತ ಊಟ ನೀಡುತ್ತಿವೆ. ಈ ಎಲ್ಲ ಕಾರಣಗಳಿಂದ ವ್ಯಾಪಾರ ಶೇ. 10ಕ್ಕೆ ಕುಸಿದಿದ್ದು ಕೆಲವು ಕ್ಯಾಂಟೀನ್​ಗಳು ಬಾಗಿಲು ಮುಚ್ಚಿವೆ. ವ್ಯಾಪಾರ ಕಡಿಮೆ ಆದರೂ ಬಾಡಿಗೆ, ವಿದ್ಯುತ್ ಶುಲ್ಕ ಹಾಗೂ ಸಂಬಳ ಕೊಡಲೇಬೇಕು."

- ಕ್ಯಾಂಟೀನ್ ಮಾಲೀಕ ಸುರೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.