ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಬೆಳಕಿಗೆ ಬಂದ ಬೆನ್ನಲ್ಲೆ ನಗರ ಪೊಲೀಸರು ಮಾದಕ ದ್ರವ್ಯ ಜಾಲದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನ ಮಟ್ಟಹಾಕಲು ಮುಂದಾಗಿದ್ದಾರೆ.
ಸದ್ಯ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳು ಒಂದೊಂದು ಕೋಡ್ ವರ್ಡ್ಗಳ ಮುಖಾಂತರ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಬಯಲಾಗಿದೆ.
mDMAಗೆ ಮಿಯೋ ಮೆಕ್ ಡಾನಲ್ಸ್, ಕೊಕೇನ್‌ಗೆ ಚಾರ್ಲಿ ಎಂಬ ಹೆಸರಿಟ್ಟು ಡ್ರಗ್ಸ್ ಸೇಲ್ ಮಾಡ್ತಿದ್ದ ವಿಚಾರವನ್ನ ಈಟಿವಿ ಭಾರತಕ್ಕೆ ಪೂರ್ವ ವಿಭಾಗದ ಆಯುಕ್ತ ಮುರುಗನ್ ಅವರು ತಿಳಿಸಿದ್ದಾರೆ. ಪೂರ್ವ ವಲಯದ 11 ಮಂದಿ ಬಂಧಿತರಿಗೂ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ಡ್ರಗ್ಸ್‌ನ ನಂಟು ಇದೆ ಎಂಬ ಶಂಕೆ ಹೊರ ಹಾಕಿದ್ದಾರೆ.
11ಜನ ಆರೋಪಿಗಳ ಪೈಕಿ ಮುಖ್ಯ ಆರೋಪಿ ಲೋಹಿತ್‌ಗೂ ವೈಭವ್‌ಗೂ ಲಿಂಕ್ ಇದ್ದು, ವೈಭವ್ ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಕಾರಣ, ಆತನ ವಿರುದ್ಧವೂ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ವೈಭವ್ ವಿರುದ್ಧ ಈಗಾಗಲೇ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ FIR ಆಗಿದೆ. ಸದ್ಯದ ಮಟ್ಟಿಗೆ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ದಂಧೆಕೋರನ ಪತ್ತೆಗೆ ಬಲೆ ಬೀಸಿದ್ದಾರೆ.