ETV Bharat / state

ನಂಜನಗೂಡು ಕ್ಷೇತ್ರದಿಂದ ದರ್ಶನ್ ಧ್ರುವನಾರಾಯಣ್ ನಾಮಪತ್ರ ಸಲ್ಲಿಕೆ

ನಂಜನಗೂಡು ಮಿನಿ ವಿಧಾನಸೌಧದಲ್ಲಿ ದರ್ಶನ್ ಧ್ರುವನಾರಾಯಣ್ ನಾಮಪತ್ರ ಸಲ್ಲಿಸಿದರು.

Congress party candidate Darshan Dhruvanarayan
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್​
author img

By

Published : Apr 17, 2023, 7:10 PM IST

Updated : Apr 17, 2023, 9:33 PM IST

'ದರ್ಶನ್ ಧ್ರುವನಾರಾಯಣ್ ಪರ ಹಳ್ಳಿಗಳಿಗೆ ತೆರಳಿ ಮತ ಪ್ರಚಾರ ನಡೆಸುತ್ತೇನೆ'

ಮೈಸೂರು : ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್​ ಅವರಿಂದು ಪಟ್ಟಣದ ಮಿನಿ ವಿಧಾನಸೌಧದ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಟ್ಟಣದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು- ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ತಾಲೂಕು ಆಡಳಿತ ಭವನಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿದರು. ಚುನಾವಣಾ ಅಧಿಕಾರಿ ಕೃಷ್ಣಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದರ್ಶನ್ ಧ್ರುವನಾರಾಯಣ್, ಕೇವಲ ಒಂದೇ ತಿಂಗಳಲ್ಲಿ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದೇನೆ. ಇನ್ನೂ ಆ ನೋವಿನ ದುಃಖದಿಂದ ಹೊರ ಬರಲು ಆಗುತ್ತಿಲ್ಲ. ನಮ್ಮ ತಂದೆ ಧ್ರುವನಾರಾಯಣ್ ಹಾದಿಯಲ್ಲಿ ಸಾಗುತ್ತೇನೆ. ರಾಜಕೀಯ ನನಗೆ ಬೇಡವಾಗಿತ್ತು. ಆದರೆ, ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ನಿರ್ದೇಶಕ ಎಸ್. ನಾರಾಯಣ್ ಸಾಥ್: ದರ್ಶನ್ ಧ್ರುವನಾರಾಯಣ ನಾಮಪತ್ರ ಸಲ್ಲಿಸುವ ವೇಳೆ ಕನ್ನಡ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಭಾಗವಹಿಸಿದರು. ಎಸ್.ನಾರಾಯಣ್ ಮಾತನಾಡಿ, ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ಅವರನ್ನು ನಾನು ಬೆಂಬಲಿಸುತ್ತಿದ್ದೇನೆ. ಕ್ಷೇತ್ರದ ಮತದಾರರು ಈ ಬಾರಿ ದರ್ಶನ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ : ರಾಜಕೀಯವಾಗಿ ನಿರ್ಣಾಯಕ ಅಖಾಡ ಹಳೆ ಮೈಸೂರು ಭಾಗ: ಗೆಲುವಿಗಾಗಿ ಮೂರು ಪಕ್ಷಗಳಿಂದ ಚುನಾವಣಾ ರಣತಂತ್ರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿರುವ ರಾಜಕಾರಣಿ, ಪಕ್ಷದಲ್ಲಿ ಪಾದರಸದಂತೆ ಓಡಾಡಿ ರಾಜ್ಯದ ಜನರ ಮೆಚ್ಚುಗೆ ಗಳಿಸಿದ ಅಪ್ರತಿಮ ರಾಜಕಾರಣಿ ಎಂದರೆ ಅದು ಧ್ರುವನಾರಾಯನ್.​ ಅವರು ಈ ಸಂದರ್ಭದಲ್ಲಿ ನಮ್ಮಲ್ಲಿಲ್ಲ ಎನ್ನುವುದಕ್ಕೆ ನಮಗೆ ಬಹಳ ನೋವಾಗುತ್ತದೆ. ಈಗ ನನಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ವಹಿಸಿದ್ದಾರೆ. ನಾನೂ ಕೂಡ ದರ್ಶನ್ ಧ್ರುವನಾರಾಯಣ್ ಪರವಾಗಿ ಹಳ್ಳಿಗಳಿಗೆ ತೆರಳಿ ಮತ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಉಸ್ತುವಾರಿ ಶ್ರೀಕಂಠ, ಬ್ಲಾಕ್ ಅಧ್ಯಕ್ಷರುಗಳಾದ ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ ಶಂಕರ್, ಲತಾ ಸಿದ್ದಶೆಟ್ಟಿ ಇನ್ನೂ ಅನೇಕ ಮುಖಂಡರು ಇದ್ದರು.

ಇದನ್ನೂ ಓದಿ : ವರುಣ ಕ್ಷೇತ್ರದಿಂದ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತಿ‘

Last Updated : Apr 17, 2023, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.