ಬೆಂಗಳೂರು: ತುರ್ತು ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ ಜನಶತಾಬ್ದಿ ರೈಲು ಸೇರಿದಂತೆ ರಾಜಧಾನಿಯಿಂದ ಹುಬ್ಬಳ್ಳಿ ಮಾರ್ಗದ ರೈಲುಗಳ ಓಡಾಟ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್ ಬ್ಲಾಕ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರ ವರೆಗೆ ಮಾತ್ರ ಸಂಚರಿಸಲಿದ್ದು, ಹರಿಹರದಿಂದ ಹುಬ್ಬಳ್ಳಿವರೆಗಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ರೈಲು ಹರಿಹರದಿಂದ ಬೆಂಗಳೂರಿಗೆ ಹಿಂದಿರುಗಲಿದೆ ಎಂದು ಇಲಾಖೆ ತಿಳಿಸಿದೆ.
![ರೈಲುಗಳ ಓಡಾಟದಲ್ಲಿ ವ್ಯತ್ಯಯ](https://etvbharatimages.akamaized.net/etvbharat/prod-images/kn-bng-09-railway-track-repair-work-tommorrow-bengaluru-hubli-trains-inturruption-7210969_29102022212019_2910f_1667058619_656.jpg)
ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸಪ್ರೆಸ್ ಬೆಳಗಾವಿಯಿಂದ ರಾಣೆಬೆನ್ನೂರು ನಿಲ್ದಾಣವರೆಗೆ ಸಂಚಾರ ಸ್ಥಗಿತಗೊಳಿಸಲಿದೆ. ಅರಸಿಕೆರೆ - ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಅರಸಿಕೆರೆ - ಹಾವೇರಿ ನಿಲ್ದಾಣದ ನಡುವೆ ಸ್ಥಗಿತಗೊಳಿಸಲಿದೆ. ಈ ಎಲ್ಲ ರೈಲುಗಳ ಸಂಚರಿಸುವ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಹುಬ್ಬಳ್ಳಿ - ಚಿತ್ರದುರ್ಗ ಎಕ್ಸ್ಪ್ರೆಸ್ ಓಡಾಟ ಪೂರ್ಣಪ್ರಮಾಣದಲ್ಲಿ ರದ್ದಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.