ETV Bharat / state

ಅತೃಪ್ತರು ಬಂದಮೇಲೆ ಒಂದೊಳ್ಳೆ ಸಿನಿಮಾ ತೆಗೆಯಬಹುದು: ಶಿವಕುಮಾರ್ ವ್ಯಂಗ್ಯ - film

ರಾಜೀನಾಮೆ ನೀಡಿ ನಿಗೂಢ ಸ್ಥಳದಲ್ಲಿರುವ ಶಾಸಕರ ಮೇಲೆ ಗರಂ ಆದ ಸಚಿವ ಡಿಕೆ ಶಿವಕುಮಾರ್, ಅವರು ಬಂದ ಮೇಲೆ ಅವರ ಬಗ್ಗೆ ಒಂದು ಒಳ್ಳೆ ಸಿನಿಮಾ ತೆಗೆಯಬಹುದು ಎಂದು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್
author img

By

Published : Jul 20, 2019, 12:44 PM IST

ಬೆಂಗಳೂರು: ಅತೃಪ್ತರು ಬಂದ ಮೇಲೆ ಅವರ ಬಗ್ಗೆ ಒಂದು ಒಳ್ಳೆ ಸಿನಿಮಾ ತೆಗೆಯಬಹುದು ಎಂದು ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಮಾತನಾಡಿದ ಅವರು ಅತೃಪ್ತ ಶಾಸಕರ ಮೇಲೆ ಸ್ವಲ್ಪ ಗರಂ ಆದಂತೆ ಪ್ರತಿಕ್ರಿಯೆ ನೀಡಿದರು.

ಮುಂಬೈನಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ್​ ಪಾಟೀಲ್​​ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಪೊಲೀಸರು ಅವಕಾಶ ನೀಡದಿರುವ ಬಗ್ಗೆ ಸಿಡಿಮಿಡಿಗೊಂಡ ಡಿಕೆಶಿ, ಎಲ್ಲಾ ಶಾಸಕರು ಮುಂಬೈನಲ್ಲಿ ಗನ್​​​ ಪಾಯಿಂಟ್​​ನಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಅತೃಪ್ತ ಶಾಸಕರ ನಡೆ ಬಗ್ಗೆ ವ್ಯಂಗ್ಯವಾಡಿದ ಸಚಿವ ಡಿಕೆ ಶಿವಕುಮಾರ್

ಬಿಜೆಪಿಯವರ ರಾಜಕಾರಣದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಅವರ ರಾಜಕಾರಣ ಅವರಿಗೆ, ನಮ್ಮ ರಾಜಕಾರಣ ನಮಗೆ ನಮಗೆ. ಸೋಮವಾರ ನಡೆಯುವ ವಿಶ್ವಾಸಮತ ನಿರ್ಣಯದಲ್ಲಿ ನಾವು ಜಯ ಗಳಿಸುತ್ತೇವೆ ಎಂದರು.

Intro:

Body:ಬೆಂಗಳೂರು: ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅತೃಪ್ತರು ಬಂದಮೇಲೆ ಒಂದು ಒಳ್ಳೆ ಸಿನಿಮಾ ಅವರ ಮೇಲೆ ತೆಗೆಯಬಹುದು ಎಂದು ತಿಳಿಸಿದರು.

ಮುಂಬೈನಲ್ಲಿ ನೆನ್ನೆ ಕಾಂಗ್ರೆಸ್ ಶಾಸಕ ಸೀಮಂತ ಪಾಟೀಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪೊಲೀಸರು ಭೇಟಿಗೆ ಅವಕಾಶ ನೀಡದೆ ಇರುವ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ ಮತ್ತೆ ಹೇಳುತ್ತೇನೆ ಎಲ್ಲಾ ಶಾಸಕರು ಮುಂಬೈನಲ್ಲಿ ಗನ್ ಪಾಯಿಂಟ್ ನಲ್ಲಿ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಬಿಜೆಪಿಯವರ ರಾಜಕಾರಣದ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಅವರ ರಾಜಕಾರಣ ಅವರಿಗೆ ನಮ್ಮ ರಾಜಕಾರಣ ನಮಗೆ ನಮಗೆ. ಸೋಮವಾರ ನಡೆಯುವ ವಿಶ್ವಾಸಮತ ನಿರ್ಣಯದಲ್ಲಿ ನಾವು ಜಯ ಗಳಿಸುತ್ತೇವೆ ಎಂದು ಪೂರ್ಣ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.