ETV Bharat / state

ವಿದ್ಯುತ್‌ ಚಾಲಿತ ವಾಹನ, ಹಸಿರು ಇಂಧನ ಬಳಕೆಗೆ ಉತ್ತೇಜನ.. ಸರ್ಕಾರದಿಂದ ಅಭಿಯಾನ - Campaigning by state government on electric vehicle

ವಿದ್ಯುತ್ ಚಾಲಿತ ವಾಹನಗಳು ಮತ್ತು ಹಸಿರು ಇಂಧನ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಒಂದು ವಾರ ಕಾಲ ಅಭಿಯಾನವನ್ನು ಹಮ್ಮಿಕೊಂಡಿದೆ.

campaigning-by-state-government-on-electric-vehicle-and-green-fuel-consumption
ವಿದ್ಯುತ್‌ ಚಾಲಿತ ವಾಹನ, ಹಸಿರು ಇಂಧನ ಬಳಕೆ ಬಗ್ಗೆ ರಾಜ್ಯ ಸರ್ಕಾರದಿಂದ ಅಭಿಯಾನ
author img

By

Published : Jun 29, 2022, 7:40 PM IST

ಬೆಂಗಳೂರು : ವಿದ್ಯುತ್‌ ಚಾಲಿತ ವಾಹನಗಳು ಹಾಗೂ ಹಸಿರು ಇಂಧನ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಜುಲೈ 1 ರಿಂದ 6 ರವರೆಗೆ ಒಂದು ವಾರ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಇವಿ ಅಭಿಯಾನ ಆಯೋಜಿಸಿದೆ. ಅಭಿಯಾನದ ಭಾಗವಾಗಿ ಬೆಸ್ಕಾಂ ವತಿಯಿಂದ ಅರಮನೆ ಮೈದಾನದಲ್ಲಿ ಜುಲೈ 1ರಿಂದ ಜುಲೈ 3 ರವರೆಗೆ ʼಇವಿ ಎಕ್ಸ್ ಪೋʼ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಮುಖ್ಯಮಂತ್ರಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ಬೆಸ್ಕಾಂನ ಇವಿ ಮಿತ್ರ ಆ್ಯಪ್‌, ಇವಿ ಚಾರ್ಜಿಂಗ್‌ ಸ್ಟೇಷನ್‌ ಮತ್ತು ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಏಕ ಗವಾಕ್ಷಿಯಲ್ಲಿ ಅನುಮತಿ ಪಡೆದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.

“ಇವಿ ಅಭಿಯಾನ”ದ ಅಂಗವಾಗಿ ಜುಲೈ 2 ರಂದು ಬೆಳಗ್ಗೆ 6 ರಿಂದ 9 ಗಂಟೆಗೆ ಇವಿ ರ್‍ಯಾಲಿ ಏರ್ಪಡಿಸಲಾಗಿದೆ. ವಿಧಾನ ಸೌಧದಿಂದ ಅರಮನೆ ಮೈದಾನದವರೆಗೆ ಇವಿ ರ್‍ಯಾಲಿ ಸಾಗಲಿದ್ದು, ಸುಮಾರು 300 ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳಲಿವೆ. ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ತಂದು ಪರಸ್ಪರ ಸಮನ್ವಯ ಸಾಧಿಸಲು ʼಇವಿ ಎಕ್ಸ್ ಪೋ ನೆರವಾಗಲಿದೆ.

ಎಕ್ಸ್ ಪೋ ಉದ್ದೇಶ : ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರಿಗೆ ವಿದ್ಯುತ್‌ ಚಲನಶೀಲತೆ ಕುರಿತು ಸಮಗ್ರ ಮಾಹಿತಿ ನೀಡುವ ಸಲುವಾಗಿ ಇವಿ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ. ಇವಿ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ನೀತಿಗಳ ಕುರಿತು ಮಾಹಿತಿ ಒದಗಿಸುವುದೇ ಇವಿ ಎಕ್ಸ್ ಪೋದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. ವಿದ್ಯುತ್‌ ಚಲನಶೀಲತೆ ಕುರಿತು ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ಉತ್ಪಾದಕರ ಮತ್ತು ಗ್ರಾಹಕರ ನಿರೀಕ್ಷೆಗಳಿಗೆ ಪೂರಕವಾಗಿದೆಯೇ ಎನ್ನುವುದನ್ನು ಅರಿಯಲು ಇವಿ ಎಕ್ಸ್ ಪೋ ಸಹಕಾರಿಯಾಗಲಿದೆ. ಇವಿ ವಲಯದಲ್ಲಿ ಇತ್ತೀಚೆಗೆ ಆಗಿರುವ ತಂತ್ರಜ್ಞಾನ ಬೆಳವಣಿಗೆ, ಹೊಸ ಸವಾಲುಗಳು, ನಿರೀಕ್ಷೆಗಳು ಮತ್ತು ಸವಾಲುಗಳನ್ನು ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಅರಿಯಲು ಇವಿ ಎಕ್ಸ್ ಪೋ ನೆರವಾಗಲಿದೆ.

ಇವಿ ಎಕ್ಸ್ ಪೋ ದಲ್ಲಿ 100 ಕ್ಕೂ ಅಧಿಕ ಕಂಪನಿಗಳ/ ಉತ್ಪಾದಕರ ಮಳಿಗೆಗಳು ತಮ್ಮ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರಸ್ತುತ ಪಡಿಸಲಿವೆ. ಮೂರು ದಿನಗಳ ಕಾಲ ನಡೆಯಲಿರುವ ಇವಿ ಎಕ್ಸ್ ಪೋದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್‌ ಚಾಲಿತ ವಾಹನಗಳ ಮಾರುಕಟ್ಟೆಯಿಂದ ಅನೇಕ ಸುಧಾರಣೆಗಳ ಅಗತ್ಯವಿದೆ. ಬ್ಯಾಟರಿ ತಯಾರಿಕೆ ಘಟಕ, ಚಾರ್ಜಿಂಗ್‌ ಸ್ಟೇಷನ್‌ ಗಳ ಸ್ಥಾಪನೆ ಹಾಗು ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಇವಿ ಎಕ್ಸ್ ಪೋವನ್ನು ಆಯೋಜಿಸಲಾಗಿದೆ.

ಇವಿ ಮಿತ್ರ ಆ್ಯಪ್‌ : ಬೆಸ್ಕಾಂ ಇವಿ ಚಾರ್ಜಿಂಗ್‌ ಸ್ಟೇಷನ್‌ ಗಳ ಕುರಿತು ಸಮಗ್ರ ಮಾಹಿತಿ ನೀಡುವ ಇವಿ ಮಿತ್ರ ಆ್ಯಪ್‌ ನ್ನು ಇವಿ ಎಕ್ಸ್ ಪೋ ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಹೊಸ ಚಾರ್ಜಿಂಗ್ ಸ್ಟೇಷನ್​ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬೆಸ್ಕಾಂ “ಏಕ ಗವಾಕ್ಷಿ” ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಬೆಸ್ಕಾಂನ “Single Window Dash Board” ಸೌಲಭ್ಯ ಪಡೆದುಕೊಳ್ಳಬಹುದು. ಆನ್​ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ಸಲ್ಲಿಸಿದ ತಕ್ಷಣವೇ ಚಾರ್ಜಿಂಗ್ ಸ್ಟೇಷನ್ ಗೆ ವಿದ್ಯುತ್ ಸಂಪರ್ಕ ಸಿಗಲಿದೆ.

ಸಾರ್ವಜನಿಕರು, ಖಾಸಗಿ ಕಂಪನಿಗಳು ಮತ್ತು ಸಂಘ-ಸಂಸ್ಥೆಗಳು ಹೊಸ ಇವಿ ಚಾರ್ಜಿಂಗ್‌ ಸ್ಟೇಷನ್‌ ತೆರೆಯಲು ಆಸಕ್ತಿ ಇದ್ದರೆ, ಆನ್​ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ, ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಆನ್‌ ಲೈನ್‌ ನಲ್ಲಿ ಅಪ್​ಲೋಡ್‌ ಮಾಡಿ, ವಿದ್ಯುತ್‌ ಸಂಪರ್ಕ ಪಡೆಯಬಹುದು. ಇವಿ ಚಾರ್ಜಿಂಗ್‌ ಗೆ ವಿದ್ಯುತ್‌ ಸಂಪರ್ಕ ಪಡೆಯಲು ಬೆಸ್ಕಾಂ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ಏಕ ಗವಾಕ್ಸಿ ಯೋಜನೆ ಜಾರಿಗೆ ತರಲಾಗಿದೆ.

ಓದಿ : ಉದಯಪುರ ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡ: ಸಂಸದ ಪ್ರತಾಪ್​ ಸಿಂಹ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.