ETV Bharat / state

ಇಂದಿನಿಂದ ಬೆಂಗಳೂರಲ್ಲಿ 'ಕೇಕ್​ ಶೋ' ಆರಂಭ: ಸಂಸತ್ತಿನ ಸೊಬಗಿನಿಂದ ಹಿಡಿದು ಚಂದ್ರಯಾನ ಮಾದರಿ ಕೇಕ್​ ಪ್ರದರ್ಶನ - ಕೇಕ್ ಶೋ ಆಯೋಜಕ ಜಿ ಮನೀಶ್

Cake show start from today in Bengaluru : ಯುಬಿ ಸಿಟಿ ಸಮೀಪದ ಸೇಂಟ್​​ ಜೋಸೆಫ್ ಶಾಲೆಯ ಮೈದಾನದಲ್ಲಿ ಇಂದಿನಿಂದ 18 ದಿನಗಳ ಕಾಲ 'ಕೇಕ್​ ಶೋ' ಇರಲಿದ್ದು ಕೇಕ್​ ಪ್ರಿಯರು ವಿನ್ಯಾಸದ ಕೇಕ್​ಗಳನ್ನು ನೋಡಿ ಕಣ್ತುಂಬಿಕೊಳ್ಳಿ.

Cake show
ಕೇಕ್​ ಶೋ
author img

By ETV Bharat Karnataka Team

Published : Dec 15, 2023, 8:14 AM IST

Updated : Dec 15, 2023, 9:51 AM IST

Cake show
'ಕೇಕ್​ ಶೋ'

ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 'ಕೇಕ್​ ಶೋ' ಇಂದಿನಿಂದ ಜನವರಿ 1ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್​ ಜೋಸೆಫ್ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕೇಕ್ ಶೋ ಆಯೋಜಕ ಜಿ. ಮನೀಶ್ ತಿಳಿಸಿದ್ದಾರೆ.

Cake show
'ಕೇಕ್​ ಶೋ'

ಕೇಕ್ ಶೋ ಕುರಿತು ಮಾತನಾಡಿರುವ ಅವರು, ಈ ಬಾರಿ ವಿಶೇಷವಾಗಿ ಥಿಂಕ್ ಲೋಕಲ್ - ಆ್ಯಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ. ತಯಾರಿಸಿರುವ ಈ ಕೇಕ್​ಗಳು ಈ ಬಾರಿಯ ಕ್ರಿಸ್‌ಮಸ್​ ಮತ್ತು ಹೊಸ ವರ್ಷದ ಸಂಭ್ರಮದಲ್ಲಿ ವಿಶ್ವದ ಅತಿದೊಡ್ಡ ಕೇಕ್‌ಗಳಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.

Cake show
'ಕೇಕ್​ ಶೋ'

ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. ಪ್ರಾರಂಭದಲ್ಲಿ ಯಾವ ಥೀಮ್‌ನಲ್ಲಿ ಮಾಡಬೇಕು ಎನ್ನುವುದರ ಬಗ್ಗೆೆ ಚಿಂತನೆ ನಡೆಸಿ, ಕೊನೆಯಲ್ಲಿ 3ಡಿ ಸಕ್ಕರೆ - ಕೇಕ್ ರಚನೆಗೆ ಒಂದು ಆಕಾರ ನೀಡಲಾಗುತ್ತದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್ - ಸಕ್ಕರೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Cake show
'ಕೇಕ್​ ಶೋ'

ಕೇಕ್ ಪ್ರದರ್ಶನದಲ್ಲಿ ಸಂಸತ್ತಿನ ಸೊಬಗು, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೇಕೆಡ್ ರೆಡ್ ವೆಲ್ವೆಟ್, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ, ಬದಲಾಗುತ್ತಿರುವ ಡಾಲ್ ಕೇಕ್, ಮೊಸಳೆ, ಬೀಚ್​, ಬಸ್​ ಮಾದರಿ ಸೇರಿದಂತೆ ಹಲವು ರೀತಿಯ ಕೇಕ್‌ಗಳು ಶೋ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ. ಸಂಜೆ ವೇಳೆ ತಂಪಾದ ವಾತಾವರಣ ಇರುತ್ತದೆ. ಈ ವೇಳೆ ಕೇಕ್‌ಗಳು ಕರಗದಂತೆ ಎಚ್ಚರ ವಹಿಸಲಾಗುತ್ತದೆ. ಅದಕ್ಕಾಗಿ ದಿನದ 24 ಗಂಟೆಗಳ ಕಾಲ ವಿದ್ಯುತ್ ದೀಪಗಳು ಬೆಳಗಲಿದೆ. ಇದರಿಂದ ಸಕ್ಕರೆ ಲೇಪವು ಕರಗುವುದಿಲ್ಲ. ದೀಪದಿಂದ ಬರುವ ಬಿಸಿಗೆ ಸಕ್ಕರೆ ಗಟ್ಟಿಯಾಗುತ್ತದೆ. ನಿತ್ಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಒಟ್ಟು 18 ದಿನ ಕೇಕ್​ ಶೋ ಇರಲಿದೆ ಎಂದು ಮನೀಶ್ ತಿಳಿಸಿದ್ದಾರೆ.

Cake show
'ಕೇಕ್​ ಶೋ'

ವಿಭಿನ್ನ ರೀತಿಯ ಆಕರ್ಷಕ ಕೇಕ್​ಗಳು ಈ ಬಾರಿ ಇರುವುದರಿಂದ ನೂರಾರು ಮಂದಿ ಗ್ರಾಹಕರು, ಮತ್ತು ಮಕ್ಕಳಿಗೆ ಕೇಕ್​ ಪ್ರಿಯವಾದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ ರಾಜ್ಯಪಾಲರು.. ವಿಶೇಷ ಪೂಜೆ ಸಲ್ಲಿಕೆ

Last Updated : Dec 15, 2023, 9:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.